Wednesday, 1 October 2025

ನೀ ಮಾಯೆಯೊಳಗೋ...
ನಿನ್ನೊಳು ಮಾಯೆಯೋ..

      ‌‌‌ನಾವು ನಮ್ಮ ಸ್ವಂತ ಮನೆ ಬಿಟ್ಟು
ಬಾಡಿಗೆಗೆ ಬಂದು ಇಷ್ಟರಲ್ಲೇ ಎರಡು
ವರ್ಷಗಳಾಗುತ್ತವೆ.ನಮ್ಮ ಯೋಚನೆ ಯಂತೆ ಎಲ್ಲರ ಸಮಯದಲ್ಲಿ ಸಾಕಷ್ಟು
ಉಳಿತಾಯವೂ ಆಗಿದೆ.ಆದರೆ ನಮ್ಮನೆ ಯ ನೆನಪು ಮಾಸಿಲ್ಲ.ಒಮ್ಮೆ ನೋಡಿ ಬರುವ ಆಶೆಯಿಂದ ಈ ದಿನ ಹೋಗಿದ್ದೆ. ಮಾವು ಹೂ ಬಿಟ್ಟಿದೆ/ಚಿಕ್ಕ ಚಿಕ್ಕ ಅಳತೆ ಯ ನಿಂಬೆಗಳಾಗಿವೆ..ಹೂಗಳು ಸುರಿದಿವೆ.
ನಮ್ಮ ಹಿತ್ತಲು ಎರಡು ವರ್ಷದ ಪುಟ್ಟ ಹಸುಗೂಸಿನಂತೆ ಕಳೆಕಳೆಯಾಗಿದೆ...
ಎಲ್ಲ ಗುರುತಿನವರ ಭೇಟಿಯಾಯ್ತು..
ಮನೆ ಬಿಟ್ಟು ಬರಲು ಮನಸ್ಸೇ ಆಗಲಿಲ್ಲ.
ಸ್ವಲ್ಪು ಹೊತ್ತು ಕಾಲುನೋವು ಮರೆತೆ...
ಆದಷ್ಟೂ ಅಡ್ಡಾಡಿದೆ...ದಸರಾದ ಗೊಂಬೆ
ನೋಡಿದೆ.ಡಯಾಬಿಟಿಸ್ ಮರೆತು ಪ್ರಸಾದ ತಿಂದೆ...ನಾಲ್ಕು ತಾಸು ಹೇಗೆ
ಜಾರದವೋ ಗೊತ್ತೇ ಆಗಲಿಲ್ಲ...
            ವಯಸ್ಸು ಆಗುತ್ತಿದ್ದಂತೆಯೇ ಬದುಕಿನ ಬಯಕೆಗಳಿಂದ ಆದಷ್ಟೂ detach ಆಗಬೇಕು ಎನ್ನುವುದು ತಿಳಿದವರ ಅನಿಸಿಕೆ...ಅದನ್ನು ಅನೇಕರು
ಹೇಳುತ್ತಾರೆ/ಕೆಲವರು ಬರೆಯುತ್ತಾರೆ/ ಅತಿ ಕಡಿಮೆ ಜನ ಅನುಸರಿಸುತ್ತಾರೆ... ನಾನೂ ಪ್ರಯತ್ನ ಮಾಡುತ್ತೇನೆ.ಸಾಧ್ಯವಾ ಗುತ್ತಿಲ್ಲ...ರೂಢಿಸಿಕೊಳ್ಳಬೇಕು...

No comments:

Post a Comment

ನೀ ಮಾಯೆಯೊಳಗೋ... ನಿನ್ನೊಳು ಮಾಯೆಯೋ..       ‌‌‌ನಾವು ನಮ್ಮ ಸ್ವಂತ ಮನೆ ಬಿಟ್ಟು ಬಾಡಿಗೆಗೆ ಬಂದು ಇಷ್ಟರಲ್ಲೇ ಎರಡು ವರ್ಷಗಳಾಗುತ್ತವೆ.ನಮ್ಮ ಯೋಚನೆ ಯಂತೆ ಎಲ್ಲರ ಸಮಯದ...