Saturday, 4 October 2025

    ಈ ಜಾಗ ಧಾರವಾಡದ/ ಶುಕ್ರವಾರ
ಪೇಟೆಯ/ಹೊಸಯಲ್ಲಾಪುರದ ಹೆಂಬ್ಲಿ ಓಣಿ/ ನೇಕಾರ ಓಣಿಯ ಮಧ್ಯದಲ್ಲಿಯ ದು.ಸುಪ್ರಸಿದ್ಧ ವೆಂಕಟೇಶ್ವರ ಗುಡಿಯ
ನವರಾತ್ರಿ ಸಮಯದ ರಥೋತ್ಸವದ್ದು... ವಿಜಯದಶಮಿಯಂದು ವೆಂಕಪ್ಪನ ರಥ
ಮೆರವಣಿಗೆಯ ದೃಶ್ಯ...
                ಇದೇ ರಸ್ತೆಯಲ್ಲಿ ೧೯೬೫- ೨೦೦೭ ರ ವರೆಗೆ- ಕಾಲೇಜು ವಿದ್ಯಾರ್ಥಿ ನಿಯಾಗಿ/ಮದುಮಗಳಾಗಿ/ಮೂರು ಮಕ್ಕಳ ತಾಯಿಯಾಗಿ/single parent
ಆಗಿ ನಲವತ್ತೆರಡು ವರ್ಷಗಳಷ್ಟು ಬದುಕಿ
ನಂತರ ಬೆಂಗಳೂರಿಗೆ ವಲಸೆ ಬಂದದ್ದು...
                ‌‌ಮೊದಲು ಆಗಾಗ ಸದಾ ಹೋಗುತ್ತಿದ್ದೆ/ಇತ್ತೀಚೆಗೆ ಏರುತ್ತಿರುವ ಮಯಸ್ಸು ಧೈರ್ಯಮಾಡಗೊಡುವುದಿಲ್ಲ.
ಆದರೂ ಆ ಮನೆ/ಆ ರಸ್ತೆ/ ಆಗಿನ ಜನ/
ಅಂದಿನ ಇರುವಿಕೆ ಎಲ್ಲವೂ ಮನದೊಳಗೆ
ದಾಖಲಾಗಿ/ನನ್ನ ಮೂರು ಪುಸ್ತಕಗಳಲ್ಲಿ
ಮೂಡಿವೆ...ಬೇಕೆಂದಾಗ ಹೋಗಿ ಬರುತ್ತೇನೆ...
      ‌      ‌  ನಿನ್ನೆ ಈ ಚಿತ್ರ ಸಿಕ್ಕಿತು.ಇಷ್ಟೆಲ್ಲಾ
ನೆನಪಾಯಿತು.ನಿನ್ನೆಯಿಂದ ನಾನು ಧಾರವಾಡದಲ್ಲಿದ್ದೇನೆ...

     

No comments:

Post a Comment

    ಈ ಜಾಗ ಧಾರವಾಡದ/ ಶುಕ್ರವಾರ ಪೇಟೆಯ/ಹೊಸಯಲ್ಲಾಪುರದ ಹೆಂಬ್ಲಿ ಓಣಿ/ ನೇಕಾರ ಓಣಿಯ ಮಧ್ಯದಲ್ಲಿಯ ದು.ಸುಪ್ರಸಿದ್ಧ ವೆಂಕಟೇಶ್ವರ ಗುಡಿಯ ನವರಾತ್ರಿ ಸಮಯದ ರಥೋತ್ಸವದ್ದು.....