Thursday, 20 September 2018

ಹಾಗೇ ಸುಮ್ಮನೇ( ಅಲ್ಲ.....)

ಮೌನ ಗೀತೆ..

ಆಗಲೇ  ೮-೩೦..
ಕೆಲಸದವಳಿನ್ನೂ ಬಂದಿಲ್ಲ..
ತಿಂಡಿಯ ತಯಾರಿಯಾಗಬೇಕು..ಮಕ್ಕಳಿಗೆ ಡಬ್ಬಿ ready ಮಾಡಬೇಕು..
ಮಾಸಿದ ಬಟ್ಟೆಗಳ ಗುಡ್ಡೆ
ಬಿದ್ದಿದೆ...
ನಿನ್ನೆ ತಂದ ಸಾಮಾನುಗಳಿಗೆ ಗತಿಗಾಣಿಸಬೇಕು...

ದೊಡ್ಡ ಮಗನ home- work ಅರ್ಧಕ್ಕೆ ನಿಂತಿದೆ...
ಸಣ್ಣವನಿಗಿನ್ನೂ ನಿದ್ದೆಗಣ್ಣು...
ಮನೆಯಲ್ಲಿ  bread ತೀರಿದ ಹಾಗಿದೆ...
ಅಯ್ಯೋ ದೇವರೇ!
ಹಾಲು ಉಕ್ಕಿತೋ ಏನೋ!...
My God! Parents' meet ಮರೆತೇ ಬಿಟ್ಟಿದ್ದೆ...

ನನ್ನ ಬಟ್ಟೆಗಳ ironing
ಆಗಬೇಕು..
ಅತ್ತೆಯವರ ಬೆನ್ನು ನೋವಿನ ಔಷಧಿ ಎಲ್ಲಿಟ್ಟೆ
ದೇವರೇ..!
"ಟಾವೆಲ್ ಮರೆಯದೇ ಇಟ್ಟುಕೊಳ್ಳಬಾರದೇ?"
ಹೊರಗೆ ನಾಯಿ
ಹಸಿವೆಯಿಂದ ಬೊಗಳುತ್ತಿದೆ...
ಗಿಡಗಳಿಗೆ ನಿನ್ನೆಯೂ
ನೀರುಣಿಸಿಲ್ಲ...

ಅಯ್ಯೋ! ಫೋನ್ ring ಆಗ್ತಾಯಿದೆ..ಖಂಡಿತವಾಗ್ಲೂ ಬಾಕಿ ಉಳಿದ project work ಮುಗಿಸಲು ಹೇಳಲೆಂದೆ ಇರಬೇಕು..
ಭುಜಗಳು ನೋಯುತ್ತಿವೆ..
ಕಣ್ಣು ನಿದ್ದೆಯಿಲ್ಲದೇ
ತೂಗುತ್ತಿವೆ...

ಬಟ್ಟೆಗಳು ಕೈಗೆ ತಕ್ಷಣ ಸಿಗುವದೇ ಇಲ್ಲ..ಇನ್ನೊಮ್ಮೆ ಜೋಡಿಸಿಟ್ಟುಕೊಳ್ಳಬೇಕು...
ಅಮ್ಮ,ಅಣ್ಣನಿಗೆ ಫೋನ್ ಮಾಡಿ ಯಾವ ಕಾಲವಾಯಿತು..

ನಾನು ಸ್ತ್ರೀ ವಾದಿಯಲ್ಲ...
ಮನೆಯನ್ನು ನಿಭಾಯಿಸುವದನ್ನು
ಬಿಟ್ಟು ಏನೂ ಮಾಡಲಾಗುತ್ತಿಲ್ಲ...

ನಾನೂ
ಭಾಷಣಕಾರಳೋ, ಕಲಾವಿದೆಯೋ
ಹಾಡುಗಾರ್ತಿಯೋ
ಕವಯಿತ್ರಿಯೊ
ಲೇಖಕಿಯೋ
ಆಗುವ ಅರ್ಹತೆ
ಇದ್ದಿರಲೂ ಬಹುದು...

ಕಳೆದಸಲ ಮಗಳು
Gold medal ತಂದಾಗ
ಎಲ್ಲರೂ" ಅಪ್ಪನ ಮಗಳು" ಎಂದರು.
ನನಗೆ ಬಂದ,ಯಾರೂ ಗಮನಕೊಡದ ಸಾಲು ಸಾಲು trophy ಗಳ ನೆನಪಾಗಿ ಕಣ್ಣು ಒದ್ದೆಯಾಯಿತು.

ನನ್ನ ಮಗಳು ಬೆಳೆದು ಏನಾಗುತ್ತಾಳೋ ನನಗೆ ಗೊತ್ತಿಲ್ಲ..ಆದರೆ ಅವಳೂ ಈಎಲ್ಲ ಹೊಣೆ ಹೊರಲೇ ಬೇಕೆಂದು ತಿಳಿದಿದೆ...

ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ.."
ಬದುಕೊಂದು ಸುಂದರ ಕಥೆ.."- ಇರಬಹುದು...
ಬೇರೆ ಯಾರಿಗೋ..

ಆದರೆ ದುಡಿಯುವ ಹೆಣ್ಣನ್ನೊಮ್ಮೆ ಮಾತನಾಡಿಸಿ ನೋಡಿ..
ಅವಳ ಕಥೆ ಬೇರೆಯೇ...

ಕಾರಣ ಚಂದದ ಅಚ್ಚುಕಟ್ಟಿನ ಮನೆ ಕಂಡರೆ,
ಮಕ್ಕಳು ಖುಶಿ ಖುಶಿ ಇದ್ದರೆ,
ಅವರು ಆರೋಗ್ಯದಿಂದ ನಳನಳಿಸುತ್ತಿದ್ದರೆ,
ನೆನಪಿಡಿ,

ಅದರ ಹಿಂದೆ
ಒಬ್ಬ ಹೆಣ್ಣುಮಗಳ
ನಿದ್ರೆಯಿಲ್ಲದ ರಾತ್ರಿಗಳಿವೆ,
ಒಳಗೊಳಗೇ ಬಿಕ್ಕುವ ಕನಸುಗಳಿವೆ,
ಅರೆಬೆಂದ ಮಹಾತ್ವಾಕಾಂಕ್ಷೆಗಳಿವೆ,
ಉಸಿರು ಬಿಗಿಹಿಡಿದ
'ನಿಟ್ಟುಸಿರು'ಗಳಿವೆ

ಅವಳಿಗೆ ಮೆಚ್ಚುಗೆ ಕೊಡಿ,
ಬೆನ್ನು ಚಪ್ಪರಿಸಿ,
ಅವಳ ಮಾತುಗಳಿಗೆ ಕಿವಿಯಾಗಿ,
ಮನೆಯನ್ನೊಂದು ನಂದನವನ್ನಾಗಿಸುವ ಅರ್ಹತೆ ಹೆಣ್ಣಿಗೆ ಮಾತ್ರ ಉಂಟು..
ಅವಳಿಗೆ " ಇದು ನನ್ನ ಮನೆ " ಅನಿಸುವಂಥ ಮಾನಸಿಕ ನೆಮ್ಮದಿ ಕೊಡಿ..

( ಮೂಲ- ಇಂಗ್ಲಿಷಿನಿಂದ_ ಅನುವಾದ- ನನ್ನಿಂದ)

1 comment:

  1. ಕೃಷ್ಣ, ತುಂಬಾ ಹೃದಯ ಸ್ಪರ್ಶಿಸುವುದು

    ReplyDelete

        Excited to share DPS East won the CBSE National Championship in Football U19 team...They had won Cluster level in July and Nationals...