Sunday, 28 August 2022

ಅಪ್ಪ ನಕ್ಕ.....

ನನ್ನ ಕರುಳಿನ ಕುಡಿ
ನನ್ನವಳ ಗರ್ಭದಲಿ
ಮೊಳಕೆಯೊಡೆದಿತ್ತು... 
"ಹೆರಿಗೆಯಾದರೆ ಗೆದ್ದೆ..."
ನಾನೆಂದೆ...

ಅಪ್ಪ  ಹಿಂದಿನಿಂದ ನಕ್ಕ...

ಮಗ ಹುಟ್ಟಿ ತೊದಲುಮಾತು,
ತೊಡರು ಗಾಲು..
ಸದಾ ಬೇಕಿತ್ತು ಬೆಂಗಾವಲು..
"ವರ್ಷಗಳೈದು
ಕಳೆದರೆ...ಗೆದ್ದ ಹಾಗೆ..."

ಕೇಳಿತು ಅಪ್ಪ ನಕ್ಕ ಹಾಗೆ...

ಮಗನ ಸ್ಕೂಲು,ಕಾಲೇಜು...
ಅವನಿಗೇನೋ ಮೋಜು..
ನನಗೆ ಪರೀಕ್ಷೆ...ಇನ್ನಿಲ್ಲದ ನಿರೀಕ್ಷೆ...
ಯಾವಾಗ ಮುಗಿದೀತೋ...ಅನಿಸಿತ್ತು

ಅಪ್ಪ ನಕ್ಕಿದ್ದು  ಕಿವಿಗೆ ಬಿತ್ತು....

ಈಗ ಮಗನ ನೌಕರಿ..
ವಧುವಿನ ಹುಡುಕಾಟ...
ಮದುವೆ ಮುಗಿದರೆ
ಮುಗಿದಂತೆ ಹೋರಾಟ...ಅಂದುಕೊಂಡೆ..

ಅಪ್ಪ ಹುಸಿನಗೆ ನಕ್ಕದ್ದು ಕಂಡೆ...

ಕಳೆಯಿತು ಮತ್ತೊಂದು ದಶಕ...
ಈಗ ನನ್ನ ಮಗ ನನ್ನ ತೂಕ..
ಕಾಯುತ್ತಿದ್ದಾನೆ ' ಮುಕ್ತನಾಗುವ ದಾರಿ..'.
ಕೇಳಿತಾ ಯಾರೋ ನಕ್ಕ ಹಾಗೆ...?

ನಾನೇ ನಕ್ಕಿದ್ದು ಈ ಬಾರಿ...

Thursday, 25 August 2022

ಕವಲು ದಾರಿ...#ಅವಳ_ತೊಡಿಗೆ_ಇವಳಿಗಿಟ್ಟು...#ಅನುವಾದ_ಸಾಹಿತ್ಯ...#Trans_creation_of_English_poems...#ಶ್ರೀಮತಿ_ಕೃಷ್ಣಾ_ಕೌಲಗಿ...

#ಅವಳ_ತೊಡಿಗೆ_ಇವಳಿಗಿಟ್ಟು...
#ಅನುವಾದ_ಸಾಹಿತ್ಯ...
#Trans_creation_of_English_poems...
#ಶ್ರೀಮತಿ_ಕೃಷ್ಣಾ_ಕೌಲಗಿ...

ಕವಲು ದಾರಿ...

ಕಾನನದ ನಡುವಿನಲಿ
ಕಂಡೆ ಕವಲಿನ ದಾರಿ
ನನಗಾಗ ಬೇಕಿತ್ತು ಒಂದೇ ಒಂದು...
ದೂರ ನೋಟವ ಹರಿಸಿ
ಮೊದಲೊಂದು ನೋಡಿದೆನು
ಕಾಣದಾಯಿತು ಕೊನೆ ಎಲ್ಲಿ  ಎಂದು...?

ಆಗ ನಡೆದೆನು ನಾನು
ಇನ್ನೊಂದೇ ಸರಿಯಂದು,
ಎಲ್ಲಿ ನೋಡಿದರಲ್ಲಿ ಹುಲ್ಲು ಹಾಸು...
ಬಹುಜನರು ಅದರಲ್ಲೇ
ನಡೆದುಹೋಗಿರಬಹುದು...
ಒಬ್ಬಂಟಿಗರಿಗಿಂಥ ದಾರಿಯೇ ಲೇಸು...

ಬೆಳಗೆದ್ದು ನೋಡಿರಲು
ಎರಡೂ ದಾರಿಯಗುಂಟ ಉದುರಿದೆಲೆಗಳ ರಾಶಿ ಕಣ್ಣಮುಂದೆ...
ಮರುದಿನಕೆ ಮೊದಲಿನದೇ 
ಸರಿ ಎನಿಸಿತರಗಳಿಗೆ
ಆದರೂ ಮರಳಿ ಬರಬಹುದೇ ಹಿಂದೆ?

ವರುಷಗಳ ಮೇಲಿಷ್ಟು
ವರುಷಗಳು ಉರುಳಿರಲು
ದಾರಿಕವಲೊಡೆಯುವಿಕೆ ಸಹಜ ತಾನೇ
ನನ್ನ ದಾರಿಯ ನಾನೇ
ಅರಸಿ ಹೊರಟಿರುವಾಗ,
ಆದು ಬೇರೆಯಾದರೂ ನನ್ನದೇನೇ!!??

Wednesday, 24 August 2022

payment received...

Payment received...

Kulkarni - 400/-
Nayana- 180/-
Dattatri- 180/-
Dr,Nagaratna- 180/-
Shashikala Joshi- 360/-

Monday, 22 August 2022

           ‌‌  ನಾವು ಸಣ್ಣವರಾಗಿದ್ದಾಗ ಮನೆಯಲ್ಲಿ/ ಶಾಲೆಯಲ್ಲಿ/ ಶಾಲಾ ನಿಬಂಧಗಳಲ್ಲಿ/ ಪರೀಕ್ಷಾ ಪ್ರಶ್ನೆಪತ್ರಿಕೆ ಗಳಲ್ಲಿ ‌ಕೇಳುತ್ತಿದ್ದ ಮುಖ್ಯವಾದ ಪ್ರಶ್ನೆ ಎಂದರೆ," ದೊಡ್ಡವಳಾ/ನಾ/ದ ಮೇಲೆ ಏನು ಆಗಬೇಕು ಅಂದ್ಕೊಂಡಿದೀಯಾ?
ಎಂಬುದು .ಆಗ ನಾನಿನ್ನೂ ಎಂಟನೇ
ಕ್ಲಾಸು.‌'teacher' ಎಂಬುದು ನನ್ನ instant ಉತ್ತರವಾಗಿರುತ್ತಿತ್ತು. ಹಾಗೆಂದ ಮಾತ್ರಕ್ಕೆ ಅದು ನನ್ನ ಕನಸು/ ಮಹಾತ್ವಾಕಾಂಕ್ಷೆ/ ಜೀವನ ಧ್ಯೇಯ/ ಇಟ್ಟುಕೊಂಡ ಗುರಿ-ಇದಾವುದೂ ಆಗಿರಲಿಲ್ಲ.ಅಂಥ ಕನಸು ಕಾಣುವಷ್ಟು ತಿಳುವಳಿಕೆ, ಅರ್ಹತೆ, ಅನುಕೂಲ, ಸಾಮಾಜಿಕ ವಾತಾವರಣ ಯಾವುದೂ ಇಲ್ಲದ, (ಅದರಲ್ಲಿಯೂ ಮಹಿಳೆಯರಿಗೆ ವಿಶೇಷವಾಗಿ) ಕಾಲವಾಗಿರಲಿಲ್ಲ ಅದು. ಕೈಯಲ್ಲೊಂದು ಆರಿಂಚಿನ‌ duster/ ಇಲ್ಲವೇ ಒಂದು ಫೂಟು ಉದ್ದದ ಬಡಿಗೆ ಹಿಡಿದು ಗತ್ತಿನಿಂದ ವರ್ಗ ಪ್ರವೇಶಿಸುತ್ತಲೇ," Good morning teacher,"- ಎಂದು ಸಾಮೂಹಿಕ ವಂದನೆ ಸ್ವೀಕರಿಸುತಿದ್ದ ಟೀಚರ್ ಎಲ್ಲರ All time hero, ಆಗ.ಗಡಸು ಮುಖ  /ಕಣ್ಣಂಚಿನ ಸನ್ನೆಯೊಂದರಿಂದಲೇ ಐವತ್ತಕ್ಕೂ ಮಿಕ್ಕಿ ಮಕ್ಕಳನ್ನು ತಣ್ಣಗಾಗಿಸುವ Hitler power  ಇದ್ದುದು ಅದೊಂದು ವ್ಯಕ್ತಿಗೆ ಮಾತ್ರ. ಬರೀ ತೋರು ಬೆರಳಿನ ಸಂಜ್ಞೆಗಳಿಂದ/ ಇಲ್ಲವೇ ಒಂದು ಹೂಂಕಾರ ಮಾತ್ರದಿಂದ ಮಕ್ಕಳನ್ನು ಕುಣಿಸುವ ಅವರ ಕಣ್ಣು ಕುಕ್ಕಿಸುವ ವೈಭವ/ ಗತ್ತು ಬಹುತೇಕ ನಮ್ಮೆಲ್ಲರ ಕಣ್ಣು/ ಮನಸ್ಸು ತುಂಬಿರಬೇಕು. ನಮ್ಮನ್ನೇ ಅವರ ಸ್ಥಾನದಲ್ಲಿ ಸುಮ್ಮನೇ ಕಲ್ಪಿಸಿಕೊಂಡು ಮನಸ್ಸಿನಲ್ಲಿಯೇ ಪುಕ್ಕಟೆ  ಮಂಡಿಗೆ ತಿನ್ನುತ್ತಿದ್ದಿರಬೇಕು. ನನ್ನ ಉತ್ತರವೂ ಅದರದೇ ಒಂದು ಭಾಗವಾಗಿರಲೂ ಸಾಕು.
            ದೊಡ್ಡವಳೂ ಆದೆ, ನನ್ನದು ಪದವಿಯೂ ಮುಗಿಯಿತು. ಮುಂದೆ
ಎಲ್ಲರಂತೆ ಮದುವೆಯಾದೆ. ಆರು ವರ್ಷಗಳಲ್ಲಿ ಮೂರು ಮಕ್ಕಳ ತಾಯಿಯಾದೆ.ಟೀಚರ್ ಆಗುವ  ಮಾತು 'ಉಫ್ಫ್' ಆಗಿ ಗಾಳಿಯಲ್ಲಿ ತೇಲಿ ಹೋಗಿತ್ತು. ನಾನದನ್ನು ಮರೆತೇ ಬಿಟ್ಟಿದ್ದೆ, ಆದರೆ ನನ್ನ ದೈವ ಅದನ್ನು ನೆನಪಿಟ್ಟಿತ್ತು. ಮದುವೆಯಾಗಿ ಕೆಲವರ್ಷಗಳಲ್ಲೇ ನನ್ನವರಿಗೆ ಎರಡು ಬಾರಿ ಹೃದಯಾಘಾತವಾದಾಗ ಮಕ್ಕಳನ್ನು ಬಿಟ್ಟು ಕುಮಠಾದಲ್ಲಿ BEd ಮಾಡಿಕೊಂಡು ಬಂದೆ.ಬೇಗನೇ ನೌಕರಿ
ಸಿಕ್ಕು ಶಿಕ್ಷಕಿಯಾದೆ.ತಡವಾಗಿ ಸೇರಿದ್ದರಿಂದ ಕೇವಲ ಇಪ್ಪತ್ತೈದು ವರ್ಷಗಳ ( ೫೮) ನೌಕರಿಯಾದರೂ ನಾನು ಅದಕ್ಕೆ ಮಾಡಿದ ಉಪಕಾರ ಕ್ಕಿಂತ ಅದರ ಋಣವೇ ನನ್ನ ಮೇಲೆ ಬಹಳ.ಆಗ ಸಾಮೂಹಿಕ ಮಾಧ್ಯಮ ಗಳು ಅತಿಯಾಗಿ ಬಳಕೆಯಲ್ಲಿಲ್ಲದ ಕಾರಣ ಶಿಕ್ಷಕ + ವಿದ್ಯಾರ್ಥಿಗಳ ಬಂಧ ಬಿಗಿಯಾಗಿತ್ತು.ಪರಸ್ಪರ ಸಂವಹನಗಳು ಸಾಕಷ್ಟು ನಡೆಯುತ್ತಿದ್ದವು. ಒಬ್ಬರ ಮನೆಗೊಬ್ಬರು ಹೋಗಿಬರುವ ವಹಿವಾಟವೂ ಇತ್ತು.ಪಾಲಕರ ಸಕ್ರಿಯ
ಭಾಗವಹಿಸುವಿಕೆ ಇತ್ತು.ಅದೇ ಕಾರಣಕ್ಕೆ
ಇಂದಿಗೂ ನನ್ನ Face book ನಲ್ಲಿ ವಿದ್ಯಾರ್ಥಿ/ ವಿದ್ಯಾರ್ಥಿನಿಯರ ಹಾಗೂ ಅವರ ಪಾಲಕರ/ ನನ್ನ ಸಹ ಶಿಕ್ಷಕ- ಶಿಕ್ಷಕಿಯರ ಪಾಲುದಾರಿಕೆಯೇ ಹೆಚ್ಚು. ಯಾವುದೇ ಹೊಸ ಪರಿಚಯವಾಗಲಿ- ಪ್ರತಿ ನಮಸ್ಕಾರವೂ ಕೇಶವನನ್ನೇ ಹೋಗಿ ತಲುಪುವಂತೆ-  ಪ್ರತಿ ನದಿಗೂ ಸಾಗರವೇ ಅಂತಿಮ ಗುರಿಯಾದಂತೆ- ಇಂದಿಗೂ ಶಿಕ್ಷಕಿಯಾದಸಂಬಂಧಕ್ಕೇನೇ  ಹೋಗಿ ಸೇರಿಕೊಳ್ಳುತ್ತದೆ. ಅದೂ ಒಂದು ಬೋನಸ್ ಸಂಭ್ರಮ ನನಗೆ.
          ‌‌     ನನ್ನ ಎಪ್ಪತೈದನೇ ಹುಟ್ಟುಹಬ್ಬದ ಸಂದರ್ಭದಲ್ಲಿ ನನ್ನ ಲೇಖನಗಳದೊಂದು ಪುಸ್ತಕ ಪ್ರಕಟಿಸಿ ಅದರಿಂದ ಬಂದ ಆದಾಯವನ್ನೆಲ್ಲ ಒಂದು ಸಾರ್ವಜನಿಕ ಉದ್ದೇಶಕ್ಕೆ  ಎಂದು ಘೋಷಿಸಿದಾಗ ನನಗೆ ಸಿಕ್ಕ 
ನನ್ನ ವಿದ್ಯಾರ್ಥಿಗಳ ಬೆಂಬಲ ಕನಸಿನಲ್ಲೂ ಊಹಿಸಲಾಗದ್ದು. ಪ್ರತಿಗಳು ಕೈ ಸೇರಿ ಬಿಡುಗಡೆಯ ತಾರೀಕು ಪ್ರಕಟವಾಗುತ್ತಲೇ ವಿಕಾಸ ಜೋಶಿ/ಪ್ರಶಾಂತ ಪಡಗಾನೂರ/ ಭಾರ್ಗವಿ ಪುರೋಹಿತ/ ಶ್ರೀದೇವಿ ಜಾಧವ ಮುಂತಾದವರ ನೇತ್ರತ್ವದಲ್ಲಿ 1994/95 ರ ಸಾಲಿನ Splash -95 ದ ಕೆಲವು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಒಂದು ಗುಂಪು ಮಾಡಿಕೊಂಡು ನನ್ನ ಬೆಂಬಲಕ್ಕೆ ನಿಂತು ಮಾಡಿದ ಉಪಕಾರ 
ಈ ಜನ್ಮದಲ್ಲಿ ಮುಗಿಯುವಂಥದ್ದಲ್ಲ.
ಅವರ ಸಹಾಯ/ ಸಹಕಾರವಿಲ್ಲದಿದ್ದರೆ
ನಾನಂದುಕೊಂಡದ್ದೇನೂ ಖಂಡಿತ ಆಗುತ್ತಿರಲಿಲ್ಲ.ಅವರನ್ನು ನೆನೆಯದ
ದಿನಗಳಿಲ್ಲ ಇಂದಿಗೂ...ಈ ಗಳಿಗೆಗೂ...
              ಇಂದು ಶಿಕ್ಷಕರ ದಿನಾಚರಣೆ. ವಿದ್ಯಾರ್ಥಿಗಳು ಗುರುಗಳನ್ನು ,ಗುರುಗಳು ತಮ್ಮ ವಿದ್ಯಾರ್ಥಿಗಳನ್ನು ನೆನೆಯುವ ದಿನ.ಅದಕ್ಕೆ ಶಾಲೆಯಲ್ಲಿ ಕಲಿಸಿದವರೇ ಆಗಬೇಕಿಲ್ಲ. ಶಿಕ್ಷಕರಿಂದ/
ಅಷ್ಟೇ ಏಕೆ ವಿದ್ಯಾರ್ಥಿಗಳಿಂದ/  ಸಮಾಜದಿಂದ ಕಲಿತ ಮೌಲ್ಯಗಳನ್ನು ಸಾಮಾಜಿಕವಾಗಿ ತಿರುಗಿ ಒಪ್ಪಿಸುವದೂ
ಒಂದು ಕಲಿಕೆಯೇ...ಒಂದು ಅನುಪಮ ಕಾರ್ಯವೇ...ನನ್ನ ಅಂಥ ಎಷ್ಟೋ ನೆನಕೆಗಳನ್ನು ನನ್ನ ಎರಡೂ ಪುಸ್ತಕಗಳಲ್ಲಿ ಅಲ್ಲಲ್ಲಿ ದಾಖಲಿಸಿದ್ದೇನೆ. ಅಷ್ಟಿಲ್ಲದೇ ಅನ್ನುತ್ತಾರೆಯೇ,- " ಸವಿ ನೆನಪುಗಳು ಬೇಕು... ಸವಿಯಲೀ ಬದುಕು"-ಎಂದು. ಆ ಭಾಗ್ಯವನುಂಡ ನಾನು ಶಿಕ್ಷಕಿಯಾದ ಉದ್ದೇಶ ಸಾರ್ಥಕವಾದ ಇಂಥ ಗಳಿಗೆಗಳಿಗೆ ಜೀವನಪರ್ಯಂತ ಋಣಿ, ಆಭಾರಿ...
ಕೊನೆಯದಾಗಿ ಔಪಚಾರಿಕವಾಗಿ/ ಅನೌಪಚಾರಿಕವಾಗಿ ನನಗೆ ಶಾಲೆಯ/ ಬದುಕಿನ ಪಾಠಗಳನ್ನು  ಹೇಳಿಕೊಟ್ಟ ಎಲ್ಲರಿಗೂ ' ಶಿಕ್ಷಕರ ದಿನಾಚರಣೆ'ಯ
ಶುಭದಿನದ ಹಾರ್ದಿಕ ಶುಭಾಶಯಗಳು...


 
       ‌‌  ‌‌‌‌     ‌

Thursday, 18 August 2022

ವಿರಹ...ನೂರು ನೂರು ತರಹ...

ಗಡಿಯಾರ -
ಗಳನೆಲ್ಲ ನಿಲ್ಲಿಸು...
ಫೋನುಗಳು ಸಂಪರ್ಕ ಕಳೆದುಕೊಳ್ಳಲಿ. 
ಜೊಲ್ಲು ಸುರಿಸುತ್ತಾ ಬೊಗಳುವ ನಾಯಿಯ ಬಾಯಿ 
ಮೊದಲು ಮುಚ್ಚಿಸು...
ಸಂಗೀತ ವಾದ್ಯಗಳು ಮೌನ ಸಾಧಿಸಲಿ.

ತಲೆಯಮೇಲೆ -
ವಿಮಾನಗಳು ಗೋಳಿಡುತ್ತ 
ಸುತ್ತು ಹಾಕುತ್ತಿರಲಿ...
ಗಗನದಲ್ಲಿ  ರೆಕ್ಕೆಗಳಿಂದ
ನಿನ್ನ ಸಾವಿನ ಸಂದೇಶ ಗೀಚಲಿ...

ನೀನು ನನ್ನ -
ಪೂರ್ವ-ಪಶ್ಚಿಮವಾಗಿದ್ದೆ.
ಉತ್ತರ-ದಕ್ಷಿಣವಾಗಿದ್ದೆ.
ವಾರದ ಕೆಲಸವಾಗಿದ್ದೆ.
ರಜಾದಿನಗಳ ವಿಶ್ರಾಂತಿಯಾಗಿದ್ದೆ.
ನನ್ನ ಹಗಲು- ರಾತ್ರಿ, 
ಮಾತು - ಮೌನ
ಹಾಡು - ಹರಟೆ
ಎಲ್ಲವೂ ನೀನೇ ಆಗಿದ್ದೆ ...

ಇದೀಗ-
" ಪ್ರೀತಿ ಅಮರ "
ಎಂದುಕೊಂಡದ್ದನ್ನು
ಹಸೀ ಸುಳ್ಳಾಗಿಸಿಬಿಟ್ಟೆ...

ಈಗೆನಗೆ -
ನಕ್ಷತ್ರಗಳು ಬೇಕಿಲ್ಲ...
ಚಂದ್ರ ಮರೆಯಾಗಿಹೋಗಲಿ...
ಸೂರ್ಯ ಛಿದ್ರವಾಗಲಿ...
ಸಾಗರ ಬಸಿದು ಹೋಗಲಿ...
ಅರಣ್ಯಗಳು ಗುಡಿಸಿಹೋಗಲಿ,
ಎಲ್ಲವೂ ಹೋಗಲಿ.
ಯಾವುದೂ, 
ಎಂದಿಗೂ,
ಯಾವುದಕ್ಕೂ 
ಉಪಯೋಗವಿಲ್ಲ...

Friday, 5 August 2022

My medicine...

1) Glycomet SR-500----60
2) Telma 40/5---30
3)Rozavel-10mg- 30.
4)Neurobion- 30.
5) Revital ( women). 1 bottle.
6) Moisturiser- Nivea-1.
7) Veet.( hair remover).
8) Ascoril SF-cough syrup.- 2.
9) Volini spray.- big one.
10) mixtard - 50- penfills.one box...
11) refresh tears- eye drops...

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...