*ಕನಸುಗಳಿಗೆ ಬಹಳ ಶಕ್ತಿ ಇರುತ್ತದಂತೆ.
ತೀವ್ರವಾಗಿ ಬಯಸಿದರೆ ಲೋಕವೇ ಅದನ್ನು ಒದಗಿಸಿಕೊಡಲು ಸಹಾಯ ಮಾಡುತ್ತದೆ.
* Compliments ಗಳಿಗೆ ಪ್ರತಿಕ್ರಿಯಿಸುವದು ನನಗೆ ತಿಳಿಯದು,ಅನೇಕ ಸಲ ಅದು ಔಪಚಾರಿಕವೋ/ ಮುಖಸ್ತುತಿಯೋ/ ವ್ಯಂಗವೋ/ ನಿಜವೋ ಅರ್ಥವಾಗುವದಿಲ್ಲ...
* ರೂಮ್ ತುಂಬ ಚಿಟ್ಟೆಗಳು ಹಾರಿದವು...
* ಹುಣ್ಣಿಮೆಯ ರಾತ್ರಿಯಲ್ಲಿ ಅಲೆಗಳು ಬಂದು ತಮ್ಮನ್ನು ಮುಟ್ಟುವದು ಇಷ್ಟವೆಂದು ಮರಳು ಕಣಗಳು ಮಾತಾಡಿಕೊಂಡದ್ದು ಇಬ್ಬರಿಗೂ ಕೇಳಿಸಿತು...
* ಹಗಲು ಘನ ಆಕೃತಿಗಳಾಗುತ್ತಿದ್ದ ನಾವು ರಾತ್ರಿಯಾದರೆ ದ್ರವವಾಗಿ ಹೋಗುತ್ತಿದ್ದೆವು...
* ನನ್ನ ಮಾತು ಕದಿಯುತ್ತಿದ್ದಾಳೆ, 'ಸುಂದರ ರಾಕ್ಷಸಿ'
* ಈ ಬಂಧವ( ಅಪ್ಪುಗೆಯ)ನ್ನು ಯಾರು ಬಿಡುವವರು? ಯಾರು ಬಿಡಿಸಿಕೊಳ್ಳಬೇಕು...
ನಿಮ್ಮ ಅತ್ತರ್ -ಕಥಾ ಸಂಕಲನದ
ಮೊದಲ ಕಥೆಗೇ ಫಿದಾ ಆದೆ. ಅದೊಂದು ರೂಪಕಗಳಿಂದ ತುಂಬಿದ ದೃಶ್ಯಕಾವ್ಯ ಅನಿಸಿತು.ಬಹಳ ದಿನಗಳಾಗಿತ್ತು, ಕೂತಪೆಟ್ಟಿಗೆ ಒಂದು ಕಥೆಯನ್ನು ಓದಿ ಮುಗಿಸಿದ್ದು.ಪುಸ್ತಕದ ಅಕ್ಷರಗಳು ಸ್ವಲ್ಪ ಮಟ್ಟಿಗೆ ಚಿಕ್ಕ ಗಾತ್ರದವು ಇವೆ.ನನ್ನ ಅಶಕ್ತ ಕಣ್ಣುಗಳು
ಮೊದಲು ಸಹಕರಿಸಲಿಲ್ಲ, ನೀರು ತುಂಬುತ್ತಿತ್ತು.ಆದರೆ ಕಥೆಯ ಸೆಳೆತ ಎಷ್ಟಿತ್ತು ಎಂದರೆ ನಾನೂ ನಡುವೆ ಬಿಡಲು ಸುತರಾಂ ಒಪ್ಪಲಿಲ್ಲ. ಕೆಲ ಸಾಲುಗಳನ್ನು ಮತ್ತೆ ಮತ್ತೆ ಓದಿದೆ. ತುಂಬ ಖುಶಿಯಾಯ್ತು. ದಿನಕ್ಕೊಂದೇ ಓದಿ ಅದರ ಸ್ವಾದ ಸುಖಿಸುವ ಮನಸ್ಸಿದೆ. ಕಳಿಸಿದ್ದಕ್ಕೆ ಧನ್ಯವಾದಗಳು. ಅನಿವಾರ್ಯವಾಗಿ ನಾನೀಗ ಓದಿನಲ್ಲಿ ತುಂಬಾನೇ choosy ಆಗಲೇ ಬೇಕಾಗಿದೆ. ಅಂಥದ್ದರಲ್ಲಿ ಈ ಪುಸ್ತಕದಂಥ ಆಯ್ಕೆ ಬೇರಿಲ್ಲ ಅನಿಸಿತು. ಸುಂದರ ಶೈಲಿ/ ಆಪ್ತ ವಿಷಯ/ಒಂದು ಸಲಕ್ಕೆ ಕೆಲವೇ ಪುಟಗಳ ಓದು/ ಅಷ್ಟೇ ಮಟ್ಟಕ್ಕೆ ಅರಗಿಸಿಕೊಳ್ಳುವಿಕೆ ಹಿತವೆನಿಸಿತು. ಹೀಗಾದರೂ ನನ್ನ ಓದು ಮತ್ತೊಮ್ಮೆ ನನಗೆ ಒಲಿಯಲಿ ಎಂಬ ಆಶೆ...
No comments:
Post a Comment