Wednesday, 18 January 2023

ಇಂದು ಓದಿನ ಎರಡನೇ ದಿನ.'ಫಿಂಕ್ ಆ್ಯಾಂಡ್ ಬ್ಲೂ ' ಓದಿದೆ. Personification ಯಥೇಚ್ಛವಾಗಿ ಬಳಸಿಕೊಂಡ ಬರಹದ ಶೈಲಿ ಬಹಳೇ ಹಿಡಿಸಿತು.ನಮ್ಮ ಕಾಲೇಜು ದಿನಗಳಲ್ಲಿ
ಶುರುವಾದ ಶೈಲಿಯದು.ಆದರೆ ವ್ಯಕ್ತಿ ಗಳನ್ನು ಬಳಸಿಕೊಳ್ಳುತ್ತಿದ್ದುದೇ ಹೆಚ್ಚು. ನಿಮ್ಮ ಕಥೆಯಲ್ಲಿ ಅವರಲ್ಲದೇ ನದಿ/ಊರು/ ಟಾಕೀಜ/ರೆಸ್ಟೊರೆಂಟ್/ ಸರ್ವ ಸುಗಂಧಿ ಮರ/ಕಾಲ/ ಕಲರ್ಸ( ಪಿಂಕ್ ಆ್ಯಾಂಡ್ ಬ್ಲೂ)ಲಲಿತ ಮಹಲ್ ಪ್ಯಾಲೇಸ್ ಎಲ್ಲವೂ ಸಾಕ್ಷಿಯಾಗಿ ನಿಂತಿವೆ.ಎಲ್ಲಿಯೂ ಅತಿರೇಕವೆನಿಸದ/ ಹೇಳಬೇಕೆಂದ ಎಲ್ಲವನ್ನೂ ಕೆಲವೊಮ್ಮೆ
ಬಹಿರಂಗವಾಗಿ/ ಕೆಲವೊಮ್ಮೆ ಸೂಚ್ಯವಾಗಿ ಹೇಳಿ ಮುಗಿಸಿದ ನಿರಾಳವಾದ ಕಥಾಶೈಲಿ ಅತ್ಯಾಪ್ತವೆನಿ ಸಿತು.ಕಥೆಯ ಅನೂಹ್ಯವಾದ ಅಂತ್ಯ  
ಕಥೆ ಮುಗಿದಮೇಲೂ ಓದುಗರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ.

"ಪ್ರೀತಿ ಅಂದರೆ ಕಾಡು ಹುಲ್ಲು...ಅದು ಬೀಜವಿಲ್ಲದೆಯೇ ಮೊಳೆಯುತ್ತದೆ/ ಬೆಳೆಯುತ್ತದೆ"- ಎಂಬ ಮಾತು ನಿಜ...

 

No comments:

Post a Comment

        ಧಾರವಾಡದಲ್ಲಿ ಇಂದಿಗೆ ಹತ್ತು  ದಿನ ಕಳೆದವು. ಈ ಸಲ ಅದರ ಬಗ್ಗೆ ಬರೆಯಲು ತುಂಬಾನೆ ನೋವು ಹಾಗೂ ಬೇಸರವಾಗುತ್ತಿದೆ.ಅದೇ ಜನ/ಅವೇ ಮನೆಗಳು/ಭಾವ ಬೇರೆ/ನೋವು ಬೇರೆ......