Tuesday, 17 January 2023

       ‌‌    ಹಗಲು ರಾತ್ರಿಯೆನ್ನದೇ ಇರಬಹುದಾದ ತಮ್ಮದೇ ಕೆಲಸಗಳ ಒತ್ತಡದ ಹೊರತಾಗಿಯೂ ತಮ್ಮ  ಹೆಂಡತಿ/ ಮಕ್ಕಳಿಗಾಗಿ ದುಡಿಯುವ ವರು/ ಸದಾ ಒತ್ತಾಸೆಯಾಗಿ ನಿಲ್ಲುವವರು/ ಎಲ್ಲ ಕೆಲಸಗಳಲ್ಲಿ ಸಮಬಾಳು/ಸಮಪಾಲು ಎಂಬುವವರನ್ನು ಕಂಡಾಗ ಹಿಂದಿನ ಭಾವ ಏನಿರಬಹುದು?-ಎಂದು ನನಗೆ ಕುತೂಹಲವಾಯಿತು. ಉತ್ತರವಾಗಿ ಹೊಳೆದ possible answers...

* ನಾನು ಕೆಲಸವನ್ನು ತುಂಬಾ ಪ್ರೀತಿಸುತ್ತೇನೆ...

* ನನ್ನ ಪ್ರೀತಿ ಪಾತ್ರರಿಗೆ ಖುಶಿ/ಆರಾಮು ಕೊಡುವದು ನನಗೂ  ಖುಶಿ
ಕೊಡುತ್ತದೆ.

* ಇತರರಿಗೆ ಹೇಳಿ ಮಾಡಿಸುವದಕ್ಕಿಂತ
ಮಾಡುವದು ಸುಲಭ...

*ಅನಿವಾರ್ಯತೆ ಇದ್ದಾಗ ಮಾತ್ರ ಇತರರಿಗೆ ತೊಂದರೆ ಕೊಡಬೇಕು...

* Self help is the best help...

* ನನಗೆ ಬೇಕಾದ ರೀತಿಯಲ್ಲಿ ನಾನು ಮಾಡುವ ಸ್ವಾತಂತ್ರ್ಯ ನನಗಿರುತ್ತದೆ...

* ಬೇರೆಯವರು ನಾನಂದುಕೊಂಡಂತೆ
ಮಾಡುವ ಬಗ್ಗೆ ನನಗೆ ಸಂಶಯ...

* 'ನಮ್ಮವರಿಗೆ ನಾನು ಮಾಡಿದೆ'-
ಎಂಬ ಭಾವದ ಒಳಸುಖ...

*' ಪರಸ್ಪರರಿಗಾಗಿ ಒಳಗೊಳ್ಳುವಿಕೆ '-
ಆಪ್ತಭಾವ ಸ್ಫುರಿಸಿ ' ಧನಾತ್ಮಕ-ವಾತಾವರಣ- positive Vibes -
ಸೃಷ್ಟಿಸಲು ಸಹಕಾರಿ...

* ಮಕ್ಕಳು ದೊಡ್ಡವರಾಗಿ ಸ್ವತಂತ್ರರಾದ ಮೇಲೆ ಹೇಗೋ ಏನೋ...ಈ ಒಡನಾಟದ ಸುಖ ಸಿಕ್ಕಾಗಲೇ ದಕ್ಕಿಸಿಕೊಳ್ಳಬೇಕು ಎಂಬ ಸಹಜ ಭಾವ...

* ಗ್ರಹಸ್ಥ ಜೀವನ-ದ ಸಹಜೀವನವನ್ನು ಅಮೂಲ್ಯವಾಗಿಸಿ ಸಿಹಿ ನೆನಪುಗಳಿಗೆ
ಪರಿವರ್ತಿಸುವ ಪ್ರಾಮಾಣಿಕವಾದುದೊಂದು
ಪ್ರಯತ್ನ...

* ಇದಾವುದೂ ಮನಸ್ಸಿನಲ್ಲಿ/ ತಲೆಯಲ್ಲಿ ಇಲ್ಲದೆಯೇ ರಕ್ತಗತವಾಗಿ ಬಂದ (ಆ ಜನ್ಮ‌ರೂಢಿಗತ) ಕಾರ್ಯವೈಖರಿ...


No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...