ಮಾಡಬೇಕೆಂಬ ಮಕ್ಕಳಿಗೆ ನಾಲ್ಕು ಸಾಲು ಭಾಷಣ ಬರೆದುಕೊಟ್ಟು
ಬಿಟ್ಟರೆ ಮುಗಿದಹಾಗೆ.
ನಾನು ಶಿಕ್ಷಕಿಯಾದ ಮೇಲೆ/ಸಕ್ರಿಯವಾಗಿ ಚಟುವಟಿಕೆಗಳ ಲ್ಲಿ ಭಾಗಿಯಾಗತೊಡಗಿದ ನಂತರ ಅದರೊಳಗೆ ಹೆಚ್ಚು ಹೆಚ್ಚು ಆಳಕ್ಕೆ ಇಳಿದ ಅನುಭವ/ ಖುಶಿ...ನಿವೃತ್ತಿ ಹೊಂದಿ ಮುಂದಿನ ವರ್ಷಕ್ಕೆ ಇಪ್ಪತ್ತು
ವರ್ಷಗಳು.ಅಚ್ಚರಿಯ ವಿಷಯ
ಎಂದರೆ gated community ಯಲ್ಲಿ ಇದ್ದ ಕಾರಣಕ್ಕೋ/ ನಿವೃತ್ತ ಹಿರಿಯ ಶಿಕ್ಷಕಿ ಎಂಬ ಸ್ಥಾನಕ್ಕೋ, ಒಟ್ಟಿನಲ್ಲಿ
ಈಗಲೇ ನಾನು ಅದರಲ್ಲಿ ಹೆಚ್ಚು ತೊಡಗಿಸಿಕೊಂಡಂತಾಗಿದೆ.ಎಲ್ಲ ಕಡೆಯೂ ಅತಿ ಉತ್ಸಾಹಿ ಯುವಕ- ಯುವತಿಯರ ಗುಂಪೊಂದು ಕಾರ್ಯಕ್ರಮಗಳನ್ನು ನಿಯೋಜಿಸು ವದರ ಫಲವಾಗಿ ನಮ್ಮಂಥವರನ್ನು ಪ್ರೀತಿಪೂರ್ವಕವಾಗಿ ಒತ್ತಾಯದಿಂದ ಎಳೆದುಕೊಂಡು ಹೋಗಿ ಮಧ್ಯದಲ್ಲಿ ನಿಲ್ಲಿಸಿಕೊಂಡು ಸಂಭ್ರಮಿಸುತ್ತಾರೆ.
ಅದಕ್ಕಾದರೂ ಇರಲಿ ಎಂದು ಶುರುವಾದ ಪಯಣವಿದು.ನನ್ನ ಅತ್ಯಂತ ಪ್ರೀತಿಯ ಶುಭ್ರ ಶ್ವೇತ ಸೀರೆಯುಟ್ಟು ,ಗುಂಪಿನಲ್ಲಿ ನಗುನಗುತ್ತ ಒಂದು ಗಂಟೆ ಕಳೆಯುವದು/ ಧ್ವಜಾರೋಹಣ/ ಅತಿಥಿ- ಆಹ್ವಾನಿತರ ಅನುಭವದ ನುಡಿಗಳನ್ನು ಆಲಿಸುವದು/ ಕಾರಣವಿಲ್ಲದಿದ್ದರೂ ನಗು- ಹಾಸ್ಯದ ಚಟಾಕಿಗಳು/ ಬರುವಾಗ ಕೈಯಲ್ಲೂ-ಮನಸ್ಸಿನಲ್ಲೂ ಸಿಹಿ ತುಂಬಿಕೊಂಡು ಬರುವದೆಂದರೆ ಅದರಲ್ಲೂ ವಿಶೇಷವಾಗಿ- ಕೋವಿಡ್ ನಂತರದ ಬದಲಾದ ನೀರಸ ವಾತಾವರಣ-ದಲ್ಲೊಂದು ಸದವಕಾಶ.
ಬೆಳಕಿನ ಕಡೆಗೊಂದು ಕಿರು ಹೆಜ್ಜೆ...
No comments:
Post a Comment