'ಆಲ್ಬರ್ಟ್ ಕಮೂವಿನ ಔಟ್ ಸೈಡರ್'
ಈ ಕಥೆ ಹೆಸರಿಗೆ ಸಣ್ಣಕಥೆ ಯಾದರೂ ಓದಿದಾಗ ಬಾಲಕೃಷ್ಣ ಪುಟ್ಬ ಬಾಯಿ ತೆರೆದಾಗ ಕಂಡ ' ವಿರಾಟ ರೂಪ' ದರ್ಶನವಾದಂತಾಗುತ್ತದೆ.
'ಸ್ಟಾರ್ ಕ್ರೂಜ'- ಒಂದರ ಅಪರ್ ಡೆಕ್ ನಲ್ಲಿ ಮಧ್ಯರಾತ್ರಿ ಒಂದು ಗಂಟೆಗೆ ಆರಂಭವಾದ ಕತೆ, ಕಥಾನಾಯಕ ಅನಿರುದ್ಧನ ಅಲ್ಬರ್ಟ್ ಕಮೂವಿನ- Out sider- ಪುಸ್ತಕದ ಓದಿನೊಂದಿಗೆ ಶುರುವಾಗಿ , ಅವರ ಶಿವಮೊಗ್ಗೆಯ
ಕೂಡು ಕುಟುಂಬದ ಪರಿಚಯ/ಆ ಕುಟುಂಬದ ಹಿರಿಯ ಮಗನ ಮಗನಾದ ಅನಿರುದ್ಧನಿಗೆ ಸಿಕ್ಕ ವಿಶೇಷ ಸ್ಥಾನಮಾನ- ಸವಲತ್ತುಗಳು/ ಅವುಗಳಿಂದಾಗಿ ಮಾಡಿಕೊಂಡ ತಾತ್ಪೂರ್ತಿಕ ಸ್ನೇಹವಲಯದಿಂದ
ಎಡವಟ್ಟಾದ ಹಸಿಬಿಸಿ/ಕಚ್ಚಾ ಹರೆಯದ ಪೀಕಲಾಟಗಳು/ಅನನುಭವ ಜನ್ಯ ಮಾನಸಿಕ ತೊಳಲಾಟಗಳು/ ಆದರೂ
ಕೂಡುಕುಟುಂಬದ ಸಂಸ್ಕೃತಿಯ ಪರಿಣಾಮವೋ, ಎಲ್ಲೋ ಒಂದುಕಡೆ
ದಾರಿ ತಪ್ಪದಂತೆ ಕಾವಲಿಗೆ ನಿಂತ ವಿವೇಕವೋ ಅವನು ಅದರಿಂದ ಪಾರಾಗಿ ನೌಕರಿಗಾಗಿ ಊರುಬಿಟ್ಟು ಸ್ನೇಹಿತನ ನೆರವಿನಿಂದ ಪಟ್ಟಣ ಸೇರಿ ಓದಿದರೂ ಕೈ ಹಿಡಿಯದ ಅದೃಷ್ಟದಿಂದಾಗಿ ಹಸಿದು ಕಂಗಾಲಾಗಿ
ಪುಸ್ತಕದಂಗಡಿಯಿಂದ ಒಂದು ಪುಸ್ತಕ ಕದ್ದು, ಸಿಕ್ಕುಬಿದ್ದು, ಮ್ಯಾನೇಜರ್ ನ ಕರುಣೆಯಿಂದಾಗಿ ಪಾರಾಗುತ್ತಾನೆ. 'ಹಿಂದಿನ ಬಾಗಿಲಿನಿಂದ ಹೋಗು'- ಎಂಬ ಅವನ ಮಾತು/ ಹೊರಡುವ ಸಮಯದಲ್ಲಿ ಅವನು ಅನಿರುದ್ಧನ ಕೈಗಿತ್ತ ಹತ್ತರ ಎರಡು ನೋಟುಗಳು
ಅವನ ವ್ಯಕ್ತಿತ್ವವನ್ನುಸಂಕುಚಿತಗೊಳಿಸಿ ಹಿಡಿಗಾತ್ರಕ್ಕೆ ಇಳಿಸಿದ್ದಲ್ಲದೇ ಇಡೀ ಬೆಂಗಳೂರೇ ತನ್ನನ್ನು ಬೆತ್ತಲಾಗಿಸಿ ನೋಡುತ್ತಿದೆ ಎಂಬ ಭಾವ ಬಲಿತು
ಕುಗ್ಗಿಹೋದಾಗ, ಆಕಸ್ಮಿಕವಾಗಿ ಈ ಹಿಂದೆ ಕೊಟ್ಟ ಸಂದರ್ಶನವೊಂದರಲ್ಲಿ
ಆಯ್ಕೆಯಾಗಿ Travel agency ಒಂದರಲ್ಲಿ ಕೆಲಸ ಸಿಕ್ಕು ಅವನ ಬದುಕಿನ ಜೊತೆ ಜೊತೆಗೆ ಕಥೆಯೂ ಬ್ರಹತ್ ತಿರುವು ಪಡೆಯುತ್ತದೆ. ಮುಂದೆ ಶ್ರದ್ಧೆಯಿಂದ ದುಡಿದು ಹಂತಹಂತವಾಗಿ ಬದುಕಿನಲ್ಲಿ/ವೃತ್ತಿಯಲ್ಲಿ ಮೇಲೇರುತ್ತ ಹೋಗಿ ಇಚ್ಛಿತ ಗುರಿ ತಲುಪಿದ ಎಷ್ಟೋ ವರ್ಷಗಳ ನಂತರ ಆ ಪುಸ್ತಕದ ಅಂಗಡಿಗೆ ಹೋಗಿ ಹತ್ತುರೂಪಾಯಿಗಳ ಎರಡು ನೋಟು ಹಿಂದಿರುಗಿ ಕೊಡಲು ಹೋದಾಗ ಅವರಿಂದ ಗೌರವಾದರ ಪಡೆದು ಧನ್ಯತಾ ಭಾವ ಅನುಭವಿಸುತ್ತಾನೆ. ನಮಸ್ಕರಿಸಿ ಹೊರಡುವ ಸಮಯದಲ್ಲಿ ಮ್ಯಾನೇಜರ್ ಅವನ ಕೈಗೊಂದು ಕವರ್ ಕೊಟ್ಟು " ಮುಂದಿನ ಬಾಗಿಲದಿಂದ ಹೋಗು" ಎಂಬಲ್ಲಿಗೆ
ಕಥೆ ಮುಕ್ತಾಯವಾಗುತ್ತದೆ.ಆ ಕವರ್ ನಲ್ಲಿ ಹಿಂದೊಮ್ಮೆ ಕದ್ದು ಅಪಮಾನಿತ ನಾದ ಅಲ್ಬರ್ಟ್ ಕಮೂವಿನ " Out sider" ಪುಸ್ತಕದ ಪ್ರತಿಯೇ ಇರುತ್ತದೆ.
' ಹಿಂದಿನ ಬಾಗಿಲು'/ ಮುಂದಿನ ಬಾಗಿಲುಗಳು ಅನಿರುದ್ಧನ ಜೀವನಸ್ತರದ ಸಾಂಕೇತಿಕ ಚಿನ್ಹೆಗಳಾಗಿ
ಮೂಡಿಬಂದಿವೆ. ಕಥೆಯುದ್ದಕ್ಕೂ ಬರುವ ವಿಭಿನ್ನ ಘಟನೆಗಳನ್ನು ಹೆಣೆದ ರೀತಿ ಲೇಖಕನ ಚಾಕಚಕ್ಯತೆಗೆ ಸಾಕ್ಷಿ...
ಏಕೆಂದರೆ ಓದುಗನೊಬ್ಬ ಓದಿನುದ್ದಕ್ಕೂ ಒಂದು ಗಳಿಗೆಗೂ Out sider ನಾಗಿ ಉಳಿಯಲು ಸಾಧ್ಯವಾಗದೇ ಕಥೆಯಗುಂಟ ತಾನೂ ಒಳಹೊಕ್ಕು ಪಾತ್ರಗಳ ಒಂದು ಭಾಗವೇ ಆಗಿಬಿಡುವಷ್ಟು ಏಕಾತ್ಮನಾಗುತ್ತಾನೆ ಅಂದರೆ ಅದು ಕಥೆಯ/ ಕಥೆಗಾರನ ಯಶಸ್ಸೇ ಸರಿ...
No comments:
Post a Comment