Sunday, 12 March 2023

ಗೆಳೆಯರು ಬಂದು ಕರೆದರೂ ಹೊರ ಹೋಗಲು ಮನಸ್ಸಾಗದಿದ್ದರೆ...

ಮಕ್ಕಳು ಮೋಜು ಮಾಡುತ್ತ  ಖುಶಿಯಾಗಿ  ಮಸ್ತಿಯಲ್ಲಿರುವಾಗ
ಕೂಗಾಡಲು ಮನಸ್ಸಾದರೆ...
.
ಹೊಸಹೊಸ ವಸ್ತುಗಳನ್ನು  ಕಂಡಾಗ
ಕೊಳ್ಳುವ ಮನಸ್ಸಾಗದಿದ್ದರೆ...

ಯಾವುದೋ ಒಂದು ಸಂಭ್ರಮದಲ್ಲಿರುವಾಗ
ಯುವಜನರ fashion ಕುರಿತು
ಉಪದೇಶಕ್ಕಿಳಿದರೆ...

ಅದೇ ಅರಳಿದ ಹೂವಿನ ಮೇಲಿನ 
ದುಂಬಿಯನ್ನು ನೋಡಿದಾಗ
ಪ್ರೇಮ ಗೀತೆಯ ಸಾಲನೊಂದ ಗುಣಗುಣಿಸದಿದ್ದರೆ...

ಹೋಟೆಲ್ ಟೇಬಲ್ ಮೇಲೆ ಕುಳಿತು ಮನೆಯ ಊಟವನ್ನು
ಹೊಗಳತೊಡಗಿದರೆ...

ನಿಶ್ಚಿಂತರಾಗಿ ಬದುಕು
ಅನುಭವಿಸದೇ ತಲೆಯ ತುಂಬ ಸಲ್ಲದ್ದು ತುಂಬಿಕೊಂಡಿದ್ದರೆ...

ಹೊರಗೆ ಮಳೆ ಸುರಿವಾಗ ಬಿಸಿಬಿಸಿ
ಪಕೋಡಾಗಳ ಬದಲಿಗೆ
ಛತ್ರಿಯ ನೆನಪಾಗತೊಡಗಿದರೆ...

ನಗುನಗುತ್ತಲೇ ಬೆಳಗನ್ನು ಸ್ವಾಗತಿಸುತ್ತಿದ್ದ ನಾವುಗಳು, 
ದಿನವಿಡೀ ಒಂದು ಮುಗುಳ್ನಗಲೂ
ಆಗದೆ ಸಂಜೆಯನ್ನು ಕಳೆಯತೊಡಗಿದರೆ...

ನಾವುಗಳು ಮುದುಕರಾದಂತೆ...

ಕಾರಣ,

ದೇಹದ ಮೇಲೆ  ನೆರಿಗೆಗಳೆಷ್ಟೇ
ಬೀಳಲಿ ,
ಮನಸ್ಸಿಗೆ ಒಂದೂ ಸಹ ಬೀಳದಂತೆ ಬದುಕುವದನ್ನು ಕಲಿಯಬೇಕು...

( ಹಿಂದಿ ವಾಟ್ಸ್ಯಾಪ್ ಮೆಸೇಜೊಂದರ
ಕನ್ನಡ ಭಾವ...)

No comments:

Post a Comment

          ನನ್ನ ಅಮ್ಮ/ಅಪ್ಪ ಇಬ್ಬರದೂ ದೊಡ್ಡ ಕುಟುಂಬಗಳು.ಹೀಗಾಗಿ ಎರಡನೇ ತಲೆಮಾರಿನಲ್ಲೂ ಸಾಕಷ್ಟು ಜನರಿದ್ದಾರೆ. ಅವರಲ್ಲಿ ಸಾಹಿತಿಗಳು/ಲೇಖಕರು/ ಗಾಯಕರು/ಕಲಾಕಾರರು/ಪಾಕ...