" ಅಜ್ಜೀ, ಇದು ನಮ್ಮ ಬಸ್ ಅಲ್ಲ.ನಮ್ಮ ಬಸ್ ನಂಬರ್ 100."-
ಮೂರು ವರ್ಷದ ಮೊಮ್ಮಗ ಹೇಳಿದ.
" ಹೌದು,ಇದು 100 ನಂಬರ್ ಬಸ್ಸsss. ನೋಡಿ ಹತ್ತೇನಿ"- ನಾನು ಹೇಳಿದೆ.
" ಇಲ್ಲ ಅಜ್ಜೀ,ನಮ್ಮ ಬಸ್ double decker ಇರೂದಿಲ್ಲ."
ಆಗ ನೋಡುತ್ತೇನೆ, ಅದು ಡಬ್ಬಲ್ ಡೆಕ್ಕರ್. ಎಲ್ಲಿ ತಪ್ಪಿದೆ? ಹಿಂದಿನ stop ನಲ್ಲಿ ಮುಂದೆಯೇ ನಿಂತ ನೂರು ನಂಬರ್ ಬಸ್ ನೋಡಿಯೇ ಮುಂದೆ
ಬಂದದ್ದು, ಬಹುಶಃ ಹಿಂದಿದ್ದ ಯಾವುದೋ ಬಸ್ ಅದನ್ನು overtake ಮಾಡಿ ಮುಂದೆ ಬಂದಿರ ಬೇಕು, ಅದು ನನ್ನ ಗಮನಕ್ಕೆ ಬಂದಿರಲಿಲ್ಲ.ಪ್ರತಿ ಸೀಟಿಗೂ ಇರುವ red button ಒತ್ತಿ ಬಸ್ ನಿಲ್ಲಿಸಿ ಕೆಳಗಿಳಿದೆ.ಅಷ್ಟರಲ್ಲಿ ಬಸ್ ಎರಡು stop ಮುಂದೆ ಬಂದಾಗಿತ್ತು. ಎದುರಿಗೇನೇ Central London ನ City Central Heights ಎತ್ತರದ Apartment ಢಾಳಾಗಿ ಕಾಣುತ್ತಿತ್ತು. ಬಂದ ದಾರಿಯಲ್ಲೇ pram ದೂಡುತ್ತ ಹಿಂದಿರುಗಿ ಮುಂದುವರಿದೆ. ಆದರೆ ಅಲ್ಲಿಗೆ ತಲುಪುವದು ಹೇಗೆ
ತಿಳಿಯಲಿಲ್ಲ.ಎದುರಿಗೇನೆ under pass ಕಂಡರೂ ಅದರೊಳಗೂ ಬಿಚ್ಚಿಕೊಳ್ಳುವ ಕವಲುಗಳ ಭಯ. ಮತ್ತೆ ದಾರಿ ತಪ್ಪಿಸಿಕೊಂಡರೆ ಎನಿಸಿ
ಅಲ್ಲಿಯೇ ಇದ್ದ ಒಬ್ಬ British Student ಒಬ್ಬನ ನೆರವು ಕೇಳಿದೆ. ಅವನು ಖುಶಿ ಖುಶಿಯಾಗಿ ಮೊಮ್ಮಗನ pram ಅನ್ನೂ ನನ್ನ backpack ನ್ನೂ ತಾನೇ ತೆಗೆದುಕೊಂಡು ನಮ್ಮನ್ನು ಆ ದಾರಿಯ ಕೊನೆಗೆ ಕರೆತಂದು ಬಿಟ್ಟು, ನನ್ನ thanks ಗೆ ಮುಗುಳನಕ್ಕು ,Take care ಎಂದು ಹೇಳಿ ಮರೆಯಾದ...
ಆ ಮಾತಿಗೆ ಸರಿಯಾಗಿ ಈಗ ಹದಿನೆಂಟು ವರ್ಷಗಳು.ಆ ಮೊಮ್ಮಗ ನಿಗೀಗ ಇಪ್ಪತ್ತೊಂದರ ಹರಯ... ಮೊನ್ನೆ ಒಂದು ಮದುವೆಗೆ ಹೋಗಬೇಕಿತ್ತು." ಅಜ್ಜಿ ,ಹೋಗಿ ತಲುಪಲು ಮುಕ್ಕಾಲು ಗಂಟೆಗೂ ಮಿಕ್ಕಿ ಸಮಯ ಬೇಕು, ಹಿಂದಿನ ಸೀಟಿಗೆ ಆತು
ಒಂದು ನಿದ್ದೆ ಮುಗಿಸು,ಕಾರ್ಯಕ್ರಮದ
ಹೊತ್ತಿಗೆ fresh ಆಗುತ್ತದೆ"- ಎಂದ.
ನನಗೆ ಉಪದೇಶಗಳು ಯಾರಿಂದಲೇ ಬರಲಿ/ ಯಾವ ರೂಪದಲ್ಲೇ ಬರಲಿ
ಮುಕ್ತವಾಗಿ ಸ್ವೀಕರಿಸುತ್ತೇನೆ.ವಯಸ್ಸೂ
ನೋಡುವುದಿಲ್ಲ. ಸರಿಯನಿಸಿದರೆ ' ಜೈ'
ಅಂದು ಬಿಡೋದೇ...ಸರಿಯಾಗಿ ಒಂದು ಗಂಟೆಗೆ ಕಾರ್ಯಾಲಯದಲ್ಲಿ ಹಾಜರು...ಕಾರ್ಯಕ್ರಮ ಮುಗಿಸಿ ಮನೆಗೆ ಬಂದಾಗ ಹನ್ನೊಂದಾಗಿದ್ದರೂ
ಕಿಂಚಿತ್ತೂ ದಣಿವಾಗಲಿಲ್ಲ. ದಾರಿಯುದ್ದ ಕ್ಕೂ ಒಂದೇ ವಿಚಾರ...ಮಕ್ಕಳು ಅದು ಹೇಗೆ ಕಣ್ಣೆದುರೇ ಬೆಳೆದು ನಿಲ್ಲುತ್ತಾರೆ?
ನೋಡುನೋಡುತ್ತಲೇ ಅದು ಹೇಗೆ
ತಮ್ಮದೊಂದು ವ್ಯಕ್ತಿತ್ವ ಬೆಳೆಸಿಕೊಂಡು
ವಿಸ್ಮಯ ಉಂಟು ಮಾಡುತ್ತಾರೆ? ಇನ್ನೂ ಚಿಕ್ಕವರು, ನಮ್ಮದೇ ಕಣ್ಣಮುಂದೆ ಬೆಳೆದವರು, ನಮ್ಮಿಂದಲೇ
ಪ್ರಭಾವಿತರಾಗುತ್ತಾರೆ ಎಂಬ ಭ್ರಮೆಯಿಂದ ನಮ್ಮನ್ನು ಹೊರಗೆ ತರುತ್ತಾರೆ?- ಎಂದೆಲ್ಲ ಯೋಚಿಸುತ್ತಲೇ
ಇರುವಾಗ ಕಾರು ಮನೆ ಬಾಗಿಲಿಗೆ ಬಂದಾಗಿತ್ತು...
No comments:
Post a Comment