ಏಕೆ?
ಬದುಕಿನ ಈ ದಾರಿಯಲ್ಲಿ ನಾವು
ಏಕಿಷ್ಟು ಅಸಹಾಯಕರಾಗಿದ್ದೇವೆ? ಒಬ್ಬರಿಗೊಬ್ಬರು ದೂರವಾಗುವಷ್ಟು
ಹತ್ತಿರವಾಗಿದ್ದೇವೆ?
"ನಮಗಾವ ಸಂತಸವೂ ಇಲ್ಲ-"
ಎನ್ನುವಂತೇನೂ ಇಲ್ಲ...
ಆದರೆ ಈ 'ಬದುಕು
ನಿಜವಾದ ಬದುಕೇ ಅಲ್ಲ'-
ಅನಿಸುವುದಾದರೂ ಏಕೆ?
ಯಾಕಾಗಿ ಬದುಕಿನ ನಿರ್ಧಾರಗಳನ್ನು
ನಾವು ಒಪ್ಪುತ್ತಲೇ ಹೋಗುತ್ತೇವೆ???
ಒಬ್ಬರಿಗೊಬ್ಬರು ದೂರವಾಗುವಷ್ಟು
ಹತ್ತಿರವಾಗಿ ಬಿಡುತ್ತೇವೆ?
ನಿನ್ನನ್ನು ಪಡೆದುಕೊಂಡ ಮೇಲೂ
ಕಳೆದುಕೊಂಡ ಭಾವವೇಕೆ?
ನಾನು ಪ್ರೀತಿಗಾಗಿ ಅತ್ತರೆ
ಪ್ರೀತಿ ನನಗಾಗಿ ಅಳುವುದೇಕೆ?
ಕಣ್ರೆಪ್ಪೆಗಳ ಅಂಚಿನಿಂದ
ಕನಸುಗಳು ಜಾರಿ ಚೂರುಚೂರಾದದ್ದಾದರೂ ಏಕೆ?
ಒಬ್ಬರಿಗೊಬ್ಬರು ದೂರಾಗುವಷ್ಟು
ಹತ್ತಿರವಾದದ್ದಾದರೂ ಏಕೆ???
No comments:
Post a Comment