" ಇತ್ತೀಚಿಗೆ ಅಮ್ಮನ ಆರೋಗ್ಯ ಸರಿಯಿಲ್ಲ ಆಂಟಿ...ದವಾಖಾನೆಯ ಭೇಟಿ/ ಅವಳೆಡೆಗೆ ಕೊಡಬೇಕಾದ ಗಮನ - ಇದರಿಂದಾಗಿ ನಿಮಗೆ ಬರೆಯಲಾಗಿರಲಿ ಲ್ಲ.ಅವಳ ಚಡಪಡಿಕೆ ಅತಿಯಾಗಿದೆ. ನೆಮ್ಮದಿ ಎಂಬುದಿಲ್ಲ.ಹೊರಗೂ ಹೋಗಲಾಗುವುದಿಲ್ಲ.ಬಿ.ಪಿ ಏರುಪೇರು.
ಹೆಮೋಗ್ಲೋಬಿನ್ ಅತಿ ಕಡಿಮೆಯಾಗಿ ಊಟಕ್ಕೆ ರುಚಿ ಎಂಬುದಿಲ್ಲ..
ಅಪ್ಪ ಹೋದಾಗಿನಿಂದ ಅವಳ ಮುಖದಲ್ಲಿ ನಗೆಯಂಬುದೇ ಇಲ್ಲವಾಗಿದೆ. ಮನಸ್ಸಿನ ಕ್ಲೇಶ ಹೊರಹಾಕಿ ಹಗುರಾಗ ಬಹುದಾದ ಗೆಳತಿಯರಿಲ್ಲ...ನನಗೆ ಅವಳನ್ನು ಸಂಭಾಳಿಸಲು ಆಗುತ್ತಿಲ್ಲ.ಕೆಲ ವರ್ಷಗಳಿಗೆ ಮೊದಲೇ ಮಕ್ಕಳು+ ಮೊಮ್ಮಕ್ಕಳ ಜವಾಬ್ದಾರಿಯಿಂದ ಸ್ವಲ್ಪವಾದರೂ ನುಣುಚಿಕೊಂಡು ತನ್ನನ್ನು ತಾನು ಸ್ವಲ್ಪ ನೋಡಿಕೊಳ್ಳುವುದನ್ನು ಕಲಿಯಬೇಕಿತ್ತು ಅನಿಸುತ್ತಿದೆ ನನಗೆ... ಅದನ್ನು ಕಲಿತಿದ್ದರೆ ಈಗ ಅವಳಿಗೆ ಅಷ್ಟು ಕಷ್ಟವಾಗುತ್ತಿದ್ದಿಲ್ಲವೇನೋ!!!
ಕಳೆದ ಎಂಟು ವರ್ಷಗಳಿಂದ ಅವಳು ಇಳಿಮುಖವಾಗಿದ್ದಾಳೆ...
ಯಾರನ್ನೂ ಭೇಟಿಯಾಗಬಯಸುವುದೂ ಇಲ್ಲ...ಮನೆಗೆ ಯಾರಾದರೂ ಬಂದರೆ ಕಾಣದಂತೆ ಅಡಗುತ್ತಾಳೆ.ಯಾರಾದರೂ ಬರುವವರಿದ್ದರೆ ನಾನು ಅವಳಿಗೆ ಹೇಳುವುದೇ ಇಲ್ಲ.ಗೊತ್ತಾದರೆ ಎರಡು ನಿದ್ದೆಗುಳಿಗೆ ತೆಗೆದುಕೊಂಡರೂ ನಿದ್ರೆ ಮಾಡದೇ ಚಡಪಡಿಸುತ್ತಾಳೆ...ನನಗೆ ಅವಳು ನಿಮ್ಮ ಬದುಕಿನ ಬಗ್ಗೆ
ಎಲ್ಲವನ್ನೂ ಹೇಳಿದ್ದಾಳೆ. ನಿಮ್ಮದನ್ನು ಸ್ವಲ್ಪವಾದರೂ ಕಲಿತಿದ್ದರೆ ಎಷ್ಟು ಚನ್ನಾಗಿರುತ್ತಿತ್ತು ಆಂಟಿ !!!"-
ಇಂದು ಬೆಳಿಗ್ಗೆ ಬಂದ ಗೆಳತಿಯ ಮಗಳ ಮೆಸೇಜು ಓದಿ ದಿಗ್ಭ್ರಮೆಯಾ ಯ್ತು.ಅವರ ಆರೋಗ್ಯ ಇಷ್ಟು ಹದಗೆಟ್ಟಿರುವುದು ತಿಳಿದಿರಲಿಲ್ಲ... ಇತ್ತೀಚೆಗೆ ಫೋನು ಬರದಿದ್ದಾಗ ನಾವು
ಅವರ ಗಂಡನ ಆರೋಗ್ಯ ಕಾರಣವಿರಬಹುದು ಅಂದುಕೊಂಡಿದ್ದೆ...
ನಾನೇ ಮಾಡಿದಾಗ ಮೇಲಿನ ಮೆಸೇಜು
ಮಗಳಿಂದ ಬಂತು..ಇಬ್ಬರು ಹೆಣ್ಣುಮಕ್ಜಳು...ಇಬ್ಬರೂ ಅತಿ ಒಳ್ಳೆಯ ವರು.ಯಾವುದಕ್ಕೂ ಕಡಿಮೆ ಇಲ್ಲ.ಆದರೆ
ಎಲ್ಲವೂ ಚನ್ನಾಗಿಯೇ ಇದ್ದಾಗ ತಮಗಾಗಿ
ಯಂದು ಒಂದು ಪುಟ್ಟ ಜಾಗ ಗುರುತಿಸಿಕೊಳ್ಳಬಹುದಿತ್ತು...
No comments:
Post a Comment