Wednesday, 30 July 2025

ರಕ್ಷಾ ಬಂಧನ...

ಕೈಗೆ ಕಟ್ಟುವ ಎಳೆಗೆ
ನೂರೆಂಟು ನೂಲುಗಳು..
ಮೇಲೆರೆಡು ಗಂಟುಗಳು ಬಿಗಿಯಾಗಲು...
ನೂರಾರು ನೂಲುಗಳೆ
ನೂರಾರು ಭಾವಗಳು..
ಹೃದಯ- ಹೃದಯದ ಬೆಸುಗೆಗಣಿಯಾಗಲು...

ಹಣೆಗಿಡುವ ತಿಲಕವದು
ಸೂರ್ಯತೇಜದ ಕೆಂಪು..
ಮನಸೆಂಬ ಮೋಹದಲಿ 
ಆರಕ್ತ ಗೊಳಿಸೆ...
ದೀಪ- ಧೂಪವ ದಾಟಿ
ಪ್ರೀತಿ ಎಳೆಗಳ ಮೀಟಿ
ಆರತಿಯ ತಟ್ಟೆಗಳ ಸಜ್ಜುಗೊಳಿಸೆ...

ಬಾಯೊಳಗೆ ಇಡುವ ಸಿಹಿ
ಬರಿಸಿಹಿಯು ತಾನಲ್ಲ...
ಹೃದಯ-ಭಾವಗಳೆ ಪಾಕರೂಪತಾಳಿ
ಮಧುರ ಬಾಂಧವ್ಯವದು
ಚಿಗುರೊಡೆದು ಪಲ್ಲವಿಸೆ
ಪ್ರತಿಮಾತು  ಮಧುವಾಗದಿದ್ದರ್ಹೇಳಿ

ಅಣ್ಣ- ತಮ್ಮರ ಕೊಡುಗೆ
ಇಂದ್ರ ಸಂಪತ್ತು ಸಿರಿ..
ಬೇರೇನು ಕೇಳೀತು 
ತೃಪ್ತ ಮನಸು....
ವರುಷದಲಿ ಒಂದೆಸಲ
ಬರುತಿರುವ ಈ ಗಳಿಗೆ
ಪ್ರತಿದಿನವು ಬರಲೆಂಬ ಮಧುರ ಕನಸು...

ಶ್ರೀಮತಿ ಕೃಷ್ಣಾ ಕೌಲಗಿ...

Monday, 21 July 2025

ಹೇಳು, ಸಾಕು...

ನೀನು ಹೇಗೆ ಬದುಕುತ್ತಿ- ಹೇಳಬೇಡ,
ಇತರರ ನೋವು ನಿನ್ನನ್ನೂ ನೋಯಿಸುತ್ತಾ? ಹೇಳು,ಸಾಕು...
ನಿನ್ನ ವಯಸ್ಸೆಷ್ಟು-ನನಗೆ ಬೇಡ,
ನಿನ್ನ ಪ್ರೀತಿ,ಕನಸಿಗೆ'ನಿಜದ ಬದುಕು' ಬದುಕುವ 'ಹುಂಬ'ಎನಿಸಿಕೊಳ್ಳುವ  ಧೈರ್ಯ ಉಂಟಾ?- ಹೇಳು ಸಾಕು...

ನಿನ್ನ ಬದುಕಿನ ಪರಿಭ್ರಮಣದ 
ಕಥೆ ನನಗೆ ಬೇಡ..
ನಿನ್ನ ಮನದಾಳದ ದುಃಖದ ಮೂಲ ಅರಿತಿದ್ದೀಯಾ,?
ಬದುಕಿನ ಕಷ್ಟಗಳ ಎದುರಿಸಬಲ್ಲೆಯಾ- ಹೇಳು ಸಾಕು...

ದುಃಖ ನನ್ನದಿರಲಿ,ನಿನ್ನದೇ ಇರಲಿ,
ಅಡಗಿಸದೇ,ಕಂಗೆಡಿಸದೇ,
ಸಂತೋಷದ ಗಳಿಗೆ, 
ನಿನ್ನದಿರಲಿ,ನನ್ನದೇ ಇರಲಿ,
ಮಾನವ ಮಿತಿಗಳ ಉಪದೇಶಿಸದೇ
ಟೊಳ್ಳು- ಗಟ್ಟಿಗಳ ನಿರ್ದೇಶಿಸದೇ ನನ್ನೊಡನೆ ಇರಬಲ್ಲೆಯಾ?
ಹೇಳು ಸಾಕು...

ನೀ ಹೇಳುವ ಮಾತು ಸತ್ಯವಾ?
ಸುಳ್ಳಾ?-ನನಗೆ ಬೇಕಿಲ್ಲ...
ನೀನು ನಿನ್ನಾತ್ಮವನ್ನು ವಂಚಿಸಿ
ನಿನ್ನದಲ್ಲದ ರೂಪ ತಾಳುವುದಿಲ್ಲ ತಾನೇ ಹೇಳು,ಸಾಕು...

ಎಲ್ಲ ದಿನಗಳೂ ನಮ್ಮವೇ ಆಗಿರಲಿಕ್ಕಿಲ್ಲ
ಎಲ್ಲ ಗೆಲುವೂ ಸದಾ ಜೊತೆಗಿರಲಿಕ್ಕಿಲ್ಲ
ಈ ಎಲ್ಲ ಜಯಾಪಜಯಗಳ ಮೀರಿ
ನನ್ನೊಡನಿರಬಲ್ಲೆಯಾ? 
ಹೇಳು,ಸಾಕು...

ಕೆಲವೊಮ್ಮೆ ಏಕಾಕಿಯಾಗಿಯೂ
ಖುಶಿಯಿಂದಿರಬಲ್ಲೆಯಾ?
'ಶೂನ್ಯಗಳಿಗೆ'-ಗಳಲ್ಲೂ ನಿನ್ನನ್ನು
ನೀನು ಸಂಭಾಳಿಸಬಲ್ಲೆಯಾ?
ಹೇಳು ಸಾಕು...


ಮಾನವನಿಗೆ ಜೀವನದಲ್ಲಿ ದೇವರು ದಯಪಾಲಿಸಿದ ದೊಡ್ಡ ವರಗಳೆಂದರೆ ಒಂದು ಮನೋಸ್ಥೈರ್ಯ, ಇನ್ನೊಂದು ಮರೆವು. 

ಜೀವನವೆಂಬ ಈ ಸಾಗರದಲ್ಲಿ ಅನಿರೀಕ್ಷಿತ ಆಘಾತಗಳ ಮಧ್ಯೆ ಮನೋಸ್ಥೈರ್ಯದಿಂದ ದಡ ಮುಟ್ಟಬೇಕೆನ್ನುವವರಿಗೆ ನೀವು ದಾರಿ ದೀಪ. ನಿಮ್ಮ ಅನುಭವ ಆಲಿಸಿದರೆ
ಉರ್ದು ಸಾಹಿತ್ಯ ಎರಡು ಆಶಾವಾದಿ ಶಾಯಿರಿಗಳು ನೆನಪಾಗುತ್ತವೆ. 

"गम की अंधॆरी रात मे, 
दिल बॆकरार न कर,
सुबह जरूर आयेगी,
सुबह का इंतजार कर ।"

"कल का दिन किसने देखा है, 
आज का दिन हम खोये क्यों?|
मौत आयी तो मर भी लेंगे,
मौत से पहले मरना क्यॊं ?|"

Sunday, 20 July 2025

    ಹದಿನೇಳ ದಿನಗಳ ಪ್ರವಾಸ ಮುಗಿಸಿ ನಿನ್ನೆ ಬೆಂಗಳೂರಿಗೆ ವಾಪಸ್ಸಾದೆ...ಹಿಂದೆ ನಾನು ಮಾಡಿದ ಹಲವಾರು ಪ್ರವಾಸ ಗಳ ' ಗುರು'- ಇದು.ಒಬ್ಬಳೇ/ಮನೆ-ಮಕ್ಕಳ ಜೊತೆ ಸಂಬಂಧಿಕರು- ಬಂಧುಗಳು- ಸ್ನೇಹಿತ ರು-ನೆರೆಯವರು- ಬೇಕಾದವರು/ ಬೇಡವಾದವರು ಎಲ್ಲರ ಜೊತೆ ಮಾಡಿ ದ ಪ್ರವಾಸಾನುಭವಗಳ  ಒಟ್ಟು ಮೊತ್ತ.ನೋವು- ನಲಿವು- ಸಂಕಟ- ಜಿಜ್ಞಾಸೆ-ನಿರಾಶೆ- ಹೊಸ ಧಾಟಿಯಲ್ಲಿ ವಿಚಾರ ಗಳು...ಅಬ್ಬಾ ಏನೆಲ್ಲ!!! ನನ್ನ ಮಾತುಗಳು ಮೊದಲ ಬಾರಿಗೆ ಶಬ್ದಗಳ ಕೊರತೆ
ಅನುಭವಿಸಿದವು...
     ‌    ‌‌‌‌ಐದು ವರ್ಷದ ದಿವಾ-ಳಿಂದ ಹಿಡಿದು ತೊಂಬತ್ತರ ಅಂಚಿನಲ್ಲಿದ್ದ ಹಿರಿ
ಸದಸ್ಯರವರೆಗೂ ಮೊದಲಬಾರಿ ದೂರದಿಂದ- ಕುತೂಹಲದಿಂದ- ಆಸ್ಥೆ ಯಿಂದ ಆರಾಮಾಗಿ ಅವಲೋಕಿಸಿ ದಾಗ ತೆರೆದುಕೊಂಡ 'ವಿಶ್ವರೂಪ'-
ಅಗಾಧ...ಅವುಗಳನ್ನು ಒಂದೊಂದೇ
ಮೆಲುಕು ಹಾಕಬೇಕು...ಕಲಿಯುವು
ದಿದ್ದರೆ ಕಲಿತು ಬಿಡಬೇಕು...ಇಲ್ಲದಲ್ಲಿ
ಬದುಕಿನ ಪಟ್ಟುಗಳನ್ನು ಅರಿತಾದರೂ
ಅರಿಯಬೇಕು...
          ನನ್ನ  ಜಗಲಿಯಲ್ಲಿ-ನಾನು ಒಬ್ಬಳೇ ಕುಳಿತು/ಒಂದು ವಿಧಾನದಲ್ಲಿ. ನಸುಕಿನ ಗಳಿಗೆಗಳಲ್ಲಿ ಸಧ್ಯದ ನೀರವ
ವಿರಾಮಕ್ಕೆ ಹೊಸರೂಪ ಕೊಡಬೇಕು
ಅನಿಸುತ್ತಿದೆ...
          ನೋಡಬೇಕು...


Wednesday, 9 July 2025

        ಧಾರವಾಡದಲ್ಲಿ ಇಂದಿಗೆ ಹತ್ತು 
ದಿನ ಕಳೆದವು. ಈ ಸಲ ಅದರ ಬಗ್ಗೆ ಬರೆಯಲು ತುಂಬಾನೆ ನೋವು ಹಾಗೂ ಬೇಸರವಾಗುತ್ತಿದೆ.ಅದೇ ಜನ/ಅವೇ ಮನೆಗಳು/ಭಾವ ಬೇರೆ/ನೋವು ಬೇರೆ...
     ‌‌‌      ಮನೆ ತುಂಬ ಜನ- ಮಾತಿಲ್ಲ...
ಏನೇನೋ ಕೆಲಸ---ಖುಶಿಯ ಸದ್ದಿಲ್ಲ... ಎಲ್ಲವೂ ತನ್ನಷ್ಟಕ್ಕೇ/ಒಂದು ಒಪ್ಪಂದಕ್ಕೆ
ಕಟ್ಟುಬಿದ್ದಂತೆ ನಡೆದು ಹೋಗುತ್ತಿದ್ದಂತೆ
ಭಾಸ...ಒಬ್ಬರಿಗೊಬ್ಬರದು ಅನಿವಾ
ರ್ಯವಾಗಿ - ಅವಶ್ಯವಿದ್ದಷ್ಟೇ ಮಾತು ಕತೆ.ಮಾತನಾಡದಿದ್ದರೇ ಹಿತ-ಎಂಬ ಭಾವ..ಏನು ಮಾತನಾಡಿದರೆ ಯಾರಿಗೆ
ಏನು ನೋವೋ ಎಂಬ ದುಗುಡ... ಏನೋ ಮನಸ್ಸಿನಲ್ಲಿ ಚಡಪಡಿಕೆ/ತೀರ ದ ಕಸಿವಿಸಿ...
             ಮನೋಜ ನನ್ನ ಕೊನೆಯ ಮಗಳ ನಂತರ ಒಂದು ವರ್ಷಕ್ಕೆ ಹುಟ್ಟಿ ದವ...‌ ಒಂದೇ ಊರಲ್ಲಿದ್ದುದರಿಂದ ನಮ್ಮದೂ ಕೈಗೂಸಾಗಿ ಬೆಳೆದು ನನ್ನ
ಮಕ್ಕಳ ಜೊತೆ ಆಡಿ ಬೆಳೆದವ...ಶಾಲೆ ಯಲ್ಲಿ ನನ್ನ ವಿದ್ಯಾರ್ಥಿ...ಕಲಿತು ಅಪ್ಪನ‌
ಜೊತೆ ಶಿಕ್ಷಣ ಸಂಸ್ಥೆಗಳ ಉಸ್ತುವಾರಿಗೆ
ನಿಂತು ತನ್ನದೇ ಕನಸಾದ ' Internatio
nal school ಒಂದನ್ನು ಸ್ಥಾಪಿಸಿದಾಗ
ತನ್ನ ಮಹದಾಸೆಯ ಯೋಜನೆಗಳನ್ನು
ನಮ್ಮೆಲ್ಲರೊಂದಿಗೆ ಹಂಚಿಕೊಂಡು
ಹರ್ಷಿಸಿದವ...ಅಲ್ಪ ಸಮಯದಲ್ಲಿಯೇ
ತನ್ನೆಲ್ಲ ಶಕ್ತಿ ಒಗ್ಗೂಡಿಸಿ ಕೆಲಸ ಮಾಡುತ್ತ
ಕನಸಿನ ಹಾದಿಯಲ್ಲಿಯೇ ನಡೆದವ...
              ಅವನೀಗ ಇಲ್ಲ...ದಾರಿಯು
ದ್ದಕ್ಕೂ ಅವನ ಕನಸುಗಳೇ ಹರಡಿವೆ...
ಅವು ಫಲಿಸಬೇಕು...
                ಇದು ನಮ್ಮೆಲ್ಲರ ಕನಸೂ
ಹೌದು...


     ‌     






ಕಾಲವೇ ಮದ್ದು - ಅಂತಾರೆ... ಕಾದು ನೋಡಬೇಕು
        

Monday, 7 July 2025

Smt. Veena Nayak 
Flat no 402, 4th floor 
Presidency Crown Court Apts,
C.G.Kamath Road,
Karagalapady,
Mangalore 575003
Mobile: 7760774037

ಜಗಲಿಯಿಂದ...              ಒಂದು ಕಾಲವಿತ್ತು, ಹಸಿವೆಯಿತ್ತು, ಸಾಕಷ್ಟು ಆಹಾರವಿರಲಿಲ್ಲ.ಆಸೆಯಿತ್ತು, ಪೂರೈಸಿಕೊಳ್ಳಲು ಹಣವಿರಲಿಲ್ಲ.ಸಾಕಷ್ಟು ಸ್ನೇಹಿತ ವರ್ಗವಿತ್ತು, ಮ...