ಸಾಲ...
ಯಾರಿಗೋ ಕೊಟ್ಟ ದುಡ್ಡು
ವಾಪಸ್ ಬರುವುದಿಲ್ಲ...
ಹೋಗಿಯೇ ಬಿಡುತ್ತದೆ...
ದುಡ್ಡಿಗೇನು?
ಎಲ್ಲೋ, ಹೇಗೋ, ಯಾವಾಗಲೋ
ತಾನೇ ಸರಿ ಹೋದೀತು...
ಹೋಗುತ್ತದೆ...
ಆದರೆ ಆ ದಿನ ನೀನು
ಮತ್ತೇನನ್ನೋ ಕಳೆದುಕೊಳ್ಳುತ್ತೀಯ...
"ಬೇಗನೇ ಕೊಟ್ಟು ಬಿಡುತ್ತೇನೆ"- ಎಂಬ ಮಾತನ್ನು ಕ್ಷಣವೂ ಯೋಚಿಸದೇ ನಂಬುತ್ತೀಯ.
ಆಗ,
ನೀನು ನೋಟುಗಳನ್ನು ಕೊಟ್ಟಿರುವುದಿಲ್ಲ,
ನಿನ್ನ ವಿಶ್ವಾಸ/ ಸ್ನೇಹ/ ನಂಬಿಕೆಗಳನ್ನು ಕೊಟ್ಟಿರುತ್ತೀಯ....
ಇಂದು ಅದೇ ವಿಶ್ವಾಸ/ನಂಬಿಕೆ
ಸತ್ತಿರುತ್ತದೆ,
ಯಾವುದೇ ಸದ್ದಿಲ್ಲದೇ..
ಯಾವೊಂದೂ
ಸಾಕ್ಷಿ ಇಲ್ಲದೇ....
ನೋಟುಗಳನ್ನು
ಕೊಡುವುದು ಸರಳ...
ಅವು ಕಿಸೆಯಿಂದ ಹೋಗುತ್ತವೆ...
ಆದರೆ ವಿಶ್ವಾಸ???
ಎದೆಯಾಳದಿಂದ ಬರುತ್ತದೆ...
ಮತ್ತು
ಅದರ ಋಣ ಬದುಕಿಡೀ
ಬಾಧಿಸುತ್ತದೆ...
ಆಗ ಹೊಸದೊಂದು
ಮುಖ ಹೇಳುತ್ತದೆ,
"ಅಂಥ ಸಾಲ- ನೋಟುಗಳಿಂದ ಅಲ್ಲ, ವಿಶ್ವಾಸದಿಂದ ಕೊಡಲ್ಪಡುತ್ತದೆ"...
ಇಷ್ಟಾದಮೇಲೂ
ನಿನಗೆ ನೀನು ಎಂದಾದರೂ
ಯಾರಿಗಾದರೂ ಹೇಳಿದ್ದೀಯಾ?
"ಇಲ್ಲ, ಸಾಲ ಕೊಡುವುದಿಲ್ಲ...
ವಿಶ್ವಾಸವೆಂಬುದು
ತುಂಬಾನೇ ಬೆಲೆಯುಳ್ಳದ್ದು"..-
ಹಾಗೆಲ್ಲಾ ಕೊಡಲಾಗದ್ದು"
No comments:
Post a Comment