Wednesday, 27 January 2021
೩೪. ದೇವರ ಆಟ ಬಲ್ಲವರಾರು? ಆತನ ಎದುರು ನಿಲ್ಲುವರಾರು??
Sunday, 17 January 2021
೩೨." ಈ ಬ್ರಹ್ಮಾಂಡವೇ ಆ ದೇವನಾಡುವಾ ಬೊಂಬೆಯಾಟವಯ್ಯಾ..."
Friday, 8 January 2021
೩೩ ."ಅವಳ ತೊಡಿಗೆ ಇವಳಿಗಿಟ್ಟು..."
೩೧. ದೇಖಾ ಏಕ ಖ್ವಾಬ ತೋ, ಏ ಸಿಲ್ ಸಿಲೇ ಹುಯೇ...
೩೦. ಕನ್ನಡವನ್ನು ಆರಾಧಿಸೋಣ...ಉಳಿದ ಭಾಷೆಗಳನ್ನು ಗೌರವಿಸೋಣ.
Sunday, 3 January 2021
27. ಗಾಂಭೀರ್ಯ ಎಂಬ ಗುಮ್ಮ...
25. ಧೂಳು ಕಣ್ಣುಗಳಲ್ಲಿ ಇರುತ್ತದೆ...ನಾವು ಕನ್ನಡಿ ಒರೆಸುತ್ತಿರುತ್ತೇವೆ.
25. "ಧೂಳು ಕಣ್ಣುಗಳಲ್ಲಿ ಇರುತ್ತದೆ, ನಾವು ಕನ್ನಡಿ ಒರೆಸುತ್ತಿರುತ್ತೇವೆ."
ಒಬ್ಬ ವೃದ್ಧ ತನ್ನ ವಯಸ್ಸಾದ ಕುದುರೆಯನ್ನು ಸಂತೆಯಲ್ಲಿ ಮಾರಿ ಹೊಸದನ್ನು ತರುವ ವಿಚಾರದೊಂದಿಗೆ ಮಗನೊಂದಿಗೆ ಪಕ್ಕದೂರಿಗೆ ಹೊರಟಿದ್ದ. ಇಬ್ಬರೂ ಕುದುರೆಯನ್ನು ಹಿಡಿದುಕೊಂಡು ಅಕ್ಕಪಕ್ಕದಲ್ಲಿ ನಡೆಯುತ್ತಿದ್ದರು. ಸ್ವಲ್ಪು ದೂರ ಕ್ರಮಿಸಿದಾಗ ಒಬ್ಬ ದಾರಿಹೋಕ ಭೇಟಿಯಾದ," ಏನ್ರಯ್ಯ ಇದು? ಇಷ್ಟು ಚಂದದ ಕುದುರೆ ಪಕ್ಕದಲ್ಲಿದ್ದೂ ನಡೆಯುವದಾ?" ಎಂದು ನಕ್ಕ. ತಂದೆ/ ಮಗನಿಗೆ 'ಹೌದಲ್ಲ' ಅನಿಸಿ ಮಗ ತಂದೆಯನ್ನು ಕುದುರೆಯ ಮೇಲೆ ಕೂಡಿಸಿ ತಾನು ನಡೆಯತೊಡಗಿದ. ಹತ್ತು ಹೆಜ್ಜೆ ಹೋಗಿರಬೇಕು. ಇನ್ನೊಬ್ಬ ದಾರಿಹೋಕ ಭೇಟಿಯಾಗಿ," ಛೆ ಏನನ್ಯಾಯ? ಮಗನನ್ನು ನಡೆಯಲು ಬಿಟ್ಟು ಅಪ್ಪ ಕುದುರೆಯೇರುವಷ್ಟು ಸ್ವಾರ್ಥವೇ? ಛೆ ಛೆಛೆ...ಏನು ದಿನಗಳಪ್ಪ!!" ಎಂದದ್ದೇ ತಡ, ಸಂಭಾವಿತ ತಂದೆ ನಾಚಿ ತಕ್ಷಣವೇ ಕೆಳಗಿಳಿದು ಮಗನನ್ನ ಕುದುರೆ ಮೇಲೆ ಹತ್ತಿಸಿದ...ಮತ್ತದೇ sceneಉ... ಮುಂದೆ ಮುಂದೆ ನಡೆದಾಗ ಮತ್ತೊಬ್ಬ ," ಎಂಥ ನಿರ್ದಯಿಗಳಿವರು!!!..ಇದುವರೆಗೆ ಸೇವೆ ಸಲ್ಲಿಸಿದ ಮುದಿ ಕುದುರೆಯನ್ನೂ ಬಿಡುತ್ತಿಲ್ಲ...ನಾನಾಗಿದ್ದರೆ ಹೆಗಲ ಮೇಲೆತ್ತಿಕೊಂಡುಹೋಗುತ್ತಿದ್ದೆ. ಸ್ವಲ್ಪಾದರೂ ಕೃತಜ್ಞತೆ ಬೇಡವೆ?" ಎಂದು ಇವರಿಗೆ ಕೇಳುವಂತೆ ಜೋರಾಗಿಯೇ ಗೊಣಗಿದ". ಇದನ್ನು ಕೇಳಿದ ತಂದೆ- ಮಗ ಒಂದು ದಪ್ಪ ಕೋಲನ್ನು ಕುದುರೆಯ ಕಟ್ಟಿದ ಕಾಲುಗಳ ಮಧ್ಯ ತೂರಿಸಿ ಇಬ್ಬರೂ ಹೆಗಲಮೇಲೆ ಹೊತ್ತು ನಡೆಯತೊಡಗಿದರು...
ಸ್ವಲ್ಪು ದೂರದಲ್ಲಿ ನದಿಯ ಸೇತುವೆಯ ಮೇಲೆ ಸಾಗುತ್ತಿದ್ದಾಗ ಕುದುರೆ ತನಗಾಾದ ತೊಂದರೆಯಿಂದ ಚಡಪಡಿಸಿ ಅವರಿಬ್ಬರ ಹೆಗಲಿಂದ ಜಾರಿ ನೀರಿಗೆ ಬಿದ್ದು ಪ್ರವಾಹ ಸುಳಿಯಗುಂಟ ಹರಿದು ಹೋಯಿತು...
ಇದು ನಮಗೆ ಬಹಳ ದಿನಗಳ ಹಿಂದೆ ಕನ್ನಡ ಶಾಲೆಯ ಪಠ್ಯ ಪುಸ್ತಕದಲ್ಲಿಯ ಒಂದು ನೀತಿ ಕಥೆ...ಸ್ವಂತ ಬುದ್ಧಿ ಉಪಯೋಗಿಸದೇ ಯಾರೇನೆಂದರೆ ಹಾಗೆ ಮಾಡುತ್ತ ಹೋದರೆ ಆಗಬಹುದಾದ ಪರಿಣಾಮದ ಬಗ್ಗೆ ಬೆಳಕು ಚೆಲ್ಲುವ ಕಥೆ.
ಜಗತ್ತಿನಲ್ಲಿ 'ತಮ್ಮೊಬ್ಬ'ರನ್ನು ಬಿಟ್ಟು ಉಳಿದವರು ಹೇಗಿದ್ದರೆ ಚನ್ನ ಎಂಬ "ಬೇಕು ಬೇಡ"ಗಳ ಪಟ್ಟಿ ಪ್ರತಿಯೊಬ್ಬರ ಬಳಿಯೂ ಇರುತ್ತದೆ ಎಂದು Paulo Coelho ಎಂದೋ "ಹೇಳಿದ್ದಾರೆ. ಎಲ್ಲರೂ ಪುಕ್ಕಟೆಯಾಗಿ ಇನ್ನೊಬ್ಬರಿಗೆ ಉಪದೇಶಿಸುವವರೇ...ತಮ್ಮ ವಿಚಾರಗಳನ್ನು ಕೇಳಲಿ/ ಬಿಡಲಿ ಇನ್ನೊಬ್ಬರ ಮೇಲೆ ಹೇರುವವರೇ...
ಹೋಗಲಿ ಎಂದು ಒಬ್ಬರ ಮಾತು ಕೇಳಿದರೋ, ಉಳಿದವರಿಗೆ ಅಸಹನೆ. ಇದನ್ನೇ ನಮ್ಮ ಮಲ್ಲಿಗೆ ಕವಿ ಕೆ ಎಸ್ ನರಸಿಂಹಸ್ವಾಮಿಯವರು ತಮ್ಮ ' ಇಕ್ಕಳ' ಕವಿತೆಯಲ್ಲಿ ಎಲ್ಲರಿಗೂ ಸುಲಭವಾಗಿ ಮನದಟ್ಟಾಗುವಂತೆ ಬರೆದಿದ್ದಾರೆ. ಅವರ ಪ್ರಕಾರ ' ಜನ ಮೆಚ್ಚುವ ವಸ್ತು ಈ ಜಗತ್ತಿನಲ್ಲಿಯೇ ಇಲ್ಲ..' ಬೇಸಿಗೆಯಲ್ಲಿ ಸೆಖೆಗೆ ಬೈದರೆ ಚಳಿಗಾಲದಲ್ಲಿ ಚಳಿಯೆಂದು ಗೊಣಗಾಟ...'ಥೂ ಶನಿ ಮಳೆ ಬಿಡ್ತಾನೇಯಿಲ್ಲ' ಇದು ಮಳೆಗಾಲದಲ್ಲಿ ಕೇಳಿಬರುವ ಸೊಲ್ಲು...ಮನುಷ್ಯ ಒಳ್ಳೆಯವನಾದರೆ- ಕೈಲಾಗದ ದರಿದ್ರ..ಸ್ವಲ್ಪು ಖಡಕ್ ಆಸಾಮಿಯಾ?...ದುಷ್ಟತನದ ಆರೋಪ...ಹಣ ಬಳಸಿದೆಯಾ- ದುಂದುಗಾರ...ಕೂಡಿಟ್ಟೆಯಾ_ ಜಿಪುಣ...ಮಾತನಾಡಿದರೆ ವಾಚಾಳಿ, ಬಾಯಿಬಡುಕ...ಮಾತು ಕಡಿಮೆಯಿದ್ದು ಗಂಭೀರ ಸ್ವಭಾವವಾಗಿದ್ದರೆ ಸೊಕ್ಕಿನ ಮೂಟೆ....ಎಲ್ಲದರಲ್ಲಿಯೂ ಹುರುಪಿನಿಂದ ನೀವಾಗಿಯೇ ಮುಂದುವರೆದು ತೊಡಗಿಕೊಂಡಿರೋ_ ಅಧಿಕ ಪ್ರಸಂಗಿ_ ಯಾರಾದರೂ ಏನಾದರೂ ಹೇಳಲಿ ಎಂದು ಕಾದರೆ ಕೈಲಾಗದ ಸೋಂಬೇರಿ..
ಈ ಕವಿತೆ ನಮ್ಮ ಕನ್ನಡಶಾಲೆಯಲ್ಲಿ ನಮಗೆ ಪಾಠವಾಗಿತ್ತು.ಆ ಮಾತಿಗೆ ಅರವತ್ತಕ್ಕೂ ಮಿಕ್ಕಿ ವರ್ಷಗಳಾಗಿವೆ .ಇಂದಿಗೂ ಪ್ರಸ್ತುತವೇ... ಇಂದಿಗೂ ಮಂದಿಗೆ ಹೆಸರಿಡುವ, ಬೇರೆಯವರ ಖಾಸಗಿ ಬದುಕಿನಲ್ಲಿ ಮೂಗು ತೂರಿಸುವ ಚಾಳಿ ಹೋಗಿಲ್ಲ . ಪ್ರಮಾಣ, ರೀತಿ, ಕಾಲ ಸ್ವಲ್ಪು ಬದಲಾಗಿರಬಹುದು ಅಷ್ಟೇ. ಆದರೂ ಯಾರ ಬಗ್ಗೆಯಾದರೂ ಏನಾದರೂ ಒಂದು ಅಂದ ಮೇಲೆಯೇ ಉಂಡ ಅನ್ನ ಪಚನವಾಗುವದು ಎನ್ನುವಷ್ಟರ ಮಟ್ಟಿಗೆ ಸರ್ವವಿದಿತ. ಸಾರ್ವಕಾಲಿಕ...
ಈಗಿನ ಕಾಲದಲ್ಲಿ ಇದರ ವ್ಯಾಪ್ತಿ , ಸ್ವರೂಪ, ವ್ಯಕ್ತಪಡಿಸುವ ರೀತಿ ಬದಲಾಗಿರಬಹುದು. ನೇರವಾಗಿ ಇರದೇ ಫೇಸಬುಕ್- ಗಳಲ್ಲಿ ಅಭಿಪ್ರಾಯಗಳ/ ಅನಿಸಿಕೆಗಳ ರೂಪಗಳಲ್ಲಿ ಬರಬಹುದು...
ಇಬ್ಬರು ವ್ಯಕ್ತಿಗಳು ಎಂದಾಗ ಎರಡು ಭಿನ್ನ ವ್ಯಕ್ತಿತ್ವಗಳು ಇರಲೇಬೇಕು. ಭಿನ್ನತೆಯೇ ಬದುಕಿನ ಸೌಂದರ್ಯ..
ಎಲ್ಲ ಏಕರೂಪವಾಗಿದ್ದರೆ ಏಕತಾನತೆ ಕಾಡದೇ ಬಿಟ್ಟಿತೇ? ವೈವಿಧ್ಯತೆಯೇ ಬದುಕಿನ ಸಾರವಿಶೇಷ...
ಉತ್ತಮವಾದುದನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗುವಂತೆ, ಬೇಡವಾದುದನ್ನು ದೂರವಿಟ್ಟು ಸ್ವಂತಕ್ಕೆ ನೆಮ್ಮದಿಯ ಬದುಕು ಪಡೆಯುವದೇ ಜೀವನ..
ಈ ಬರಹ ಉಪದೇಶದ ಧಾಟಿಯಲ್ಲಿ ಸಾಗಿದ್ದಕ್ಕೆ ನನಗೂ ಬೇಸರವಿದೆ. ಅದು ಇದ್ದುದೇ ಹಾಗೆ....
ಹೀಗೆಲ್ಲ ಬರೆದಿದ್ದೇನೆ ಅಂದರೆ ನಾನೆಲ್ಲ ಅದನ್ನು ಪಾಲಿಸಿ ಗೆದ್ದು ನಿಂತಿದ್ದೇನೆ ಅಂತಲ್ಲ...ನಾನೂ ನಿಮ್ಮೊಳಗೊಬ್ಬಳೇ...ಇಲ್ಲಿ ಹೇಳಿದ್ದೆಲ್ಲ ಮೊದಲು ನನಗೇನೇ ಅನ್ವಯಿಸುತ್ತದೆ ಎಂಬ ಅರಿವು ನನಗೆ ಇಲ್ಲದಿಲ್ಲ .ಆದರೆ ಸ್ವಲ್ಪು ( ego) ಅಹಂನ್ನು ತತ್ಕಾಲಕ್ಕೆ ಸರಿಸಿಟ್ಟು ನಮ್ಮ ಅನಿಸಿಕೆ, ಅನುಭವ, ಬೇಸರಗಳನ್ನು ಪರಾಮರ್ಶಿಸಿದರೆ ಮೇಲೆ ಹೇಳಿದ ಪ್ರತಿಯೊಂದೂ ಮಾತೂ ಪ್ರತಿಯೊಬ್ಬರ ಸಮಸ್ಯೆಯೇ...ನಾನು, ನಾವು, ನೀನು ,ನೀವು , ಅವನು, ಅವಳು ಎಲ್ಲರೂ ಇದರ ಭಾಗವೇ...
ಯಾರು ಎಷ್ಟೇ ,ಏನೇ, ಯಾವುದೇ ಕಾರಣಕ್ಕೆ ಅನ್ನಲಿ...ಅನ್ನುವದೇ ಜನರ ಕೆಲಸ ಎಂದುಕೊಂಡರೂ ಒಬ್ಬಳೇ ನಿಂತು ಕನ್ನಡಿಯಲ್ಲಿ ನನ್ನನ್ನು ನಾನೇ ನೋಡಿಕೊಂಡಾಗಲೊಮ್ಮೆಯಾದರೂ ಇದರ ಬಗ್ಗೆ ಸ್ವಲ್ಪು ಯೋಚಿಸುವದು ಒಳಿತು ಅನಿಸುತ್ತದೆ ನನಗೆ...
records...
1)Can bk login 60274 2)Mpin 3)1508...(UPI- Bheema).
-
ನಮ್ಮ ಊರು ರಟ್ಟೀಹಳ್ಳಿ. ಇನ್ನೊಬ್ಬ ಅಜ್ಜಿಯ ಊರು ಸರ್ವಜ್ಞನ ಮಾಸೂರು.ಎರಡರ ನಡುವೆ ಕೇವಲ ಐದು ಮೈಲುಗಳಷ್ಟು ಅಂತರ.ಆದರೂ ಒಂದೋ/ಎರಡೋ ಯಾವುದೋ ಊರಿಗೆ ಹೋಗುವ ...
-
ಮಗುವಿನ ಸ್ವಗತ ಏನು ಹೇಳಲಿ ನಿಮಗೆ ನನ್ನ ಮನಸಿನ ಪೇಚು..? ದೊಡ್ಡವರು ಎಂಬುವರು ಒಗಟು ನನಗೆ... ಮಾಡಬಾರದುದೆಲ್ಲ ಮರೆಯದೆ ಹೇಳುವರು.. ಮಾಡಬಾರದ್ದನ್ನೇ ಮಾಡುವರು ...
-
ಒಮ್ಮೆ ಒಬ್ಬ ಹಿರಿಯ ಸಾಧಕರನ್ನು ,ಅವರ ' ಶತಾಯುಷ್ಯದ' ಗುಟ್ಬಿನ ಬಗ್ಗೆ ಸಂದರ್ಶಕನೊಬ್ಬ ಪ್ರಶ್ನಿಸಿದಾಗ ಅವರು ಹೇಳಿದ್ದು," ಗುಟ್ಟೂ ಇಲ್ಲ, ಮಣ್ಣೂ ಇಲ್ಲ,...