Tuesday, 31 December 2024

        ಮತ್ತೊಂದು ವರ್ಷ ನಿರ್ಗಮನದ ಹಾದಿಯಲ್ಲಿದೆ- 
             
         ಹಲವಾರು ನಿರೀಕ್ಷೆಗಳಲ್ಲಿ ಕೆಲವಕ್ಕೆ ತೆರೆದುಕೊಂಡು,ಉಳಿದವು ಗಳನ್ನು ಬಾಕಿ ಇರುವ ಲಿಸ್ಟಗೆ ಸೇರಿಸಿ...
      ‌‌‌    ಅದು ಗ್ರಾಹ್ಯವೇ! ಎಲ್ಲವೂ ಕೈಯಳವಿನಲ್ಲಿ ಇರದೇನೇ ನಾವು
ಇಷ್ಟೊಂದು ಚಿಗುರಿದ್ದೇವೆ! ಎಲ್ಲವೂ
ನಾವಂದಂತೆಯೇ ಆಗಿಬಿಟ್ಟರೆ!!! ಊಹಿಸಲೂ ಆಗದ ಪರಿಧಿ...
                ಈ ವರ್ಷವೇ ನಾವು ಹೊಸಮನೆಗೆ ಬಂದದ್ದು...ಇನ್ನೂ ಹೊಸದಾಗಿಯೇ ಇದೆ ಸುತ್ತಲಿನ ವಾತಾವರಣ.ನಾವೂ ನಮ್ಮದೇ ಆದ
ಜಗತ್ತಿನಲ್ಲಿ ಮಗ್ನ...ಒಳಗೊಳ್ಳುವಿಕೆ ಅಷ್ಟಾಗಿ ಇಲ್ಲ...ಆದರೂ ನನಗೆ ಈಗ
ಇಂಥದೇ ಬೇಕಿತ್ತೇನೋ ಅಂದುಕೊಂಡ
ದ್ದಲ್ಲದೇ ನನ್ನದೊಂದು ಬಾಲ್ಕನಿಯಿಂದ ಲೇ ಹೊರಜಗತ್ತಿಗೆ ಅಂಟಿದ್ದೇನೆ.ಚಟು
ವಟಿಕೆಗಳ ವೇಗ ತಗ್ಗಿದೆ.ಅದಕ್ಕೆ ವಯಸ್ಸೋ/ ಮನಸ್ಸೋ/ಸಹಜ ಇಳುವರಿಕೆಯೋ- ಕಾರಣ ಗೊತ್ತಿಲ್ಲ,
ಗೊತ್ತಾಗುವುದೂ ಬೇಡ."ನೀ ಇಟ್ಟಲ್ಲಿ
ಇಟ್ಟ ಹಾಗಿರು"- ಎಂದು ಮನಸ್ಸಿಗೆ
ಸದಾ ಬೋಧಿಸುತ್ತೇನೆ.
              ನನ್ನದು ಎಂದಿಗೂ ಅತಿ ನಿರೀಕ್ಷೆ ಏನಿಲ್ಲ...ಅಂದುಕೊಂಡದ್ದು ಆದರೆ ಒಳ್ಳೆಯದು- ಇಲ್ಲವಾ- ಇನ್ನೂ
ಒಳ್ಳೆಯದು, God is in the HEAVEN, and all is RIGHT with the world...ನನಗೇನು ಬೇಕು
ಅವನಿಗಲ್ಲದೇ ಇನ್ನಾರಿಗೆ ಗೊತ್ತಿರಲು
ಸಾಧ್ಯ???
             ಸಧ್ಯದಲ್ಲೇ ಎಂಬತ್ತಕ್ಕೆ ಕಾಲಿಡುತ್ತೇನೆ.ಮನುಷ್ಯನ ಸರಾಸರಿ
ವಯಸ್ಸು 76 ವರ್ಷಗಳಂತೆ.ಅದು
ಹೌದಾದರೆ ಮೂರು ವರ್ಷ ಹೆಚ್ಚೇ ಮುಂದಿದ್ದೇನೆ...ಏನು ಬೇಡಲಿ ನಿನ್ನ ಬಳಿಗೆ ಬಂದು??
         ‌     ಒಂದೇ ಒಂದು ಹಳಹಳಿ...
ಮೊಮ್ಮಕ್ಕಳೆಲ್ಲ ದೊಡ್ಡವರಾಗಿದ್ದಾರೆ. ಮೂವರು ಗೂಡು ಬಿಟ್ಟು ಹಾರಿದ್ದಾರೆ.
ಉಳಿದ ಮೂವರು ತಮ್ಮತಮ್ಮ ಗುರಿ
ನಿರತರು...ಅವರ ಕಂಪನಿ miss ಮಾಡಿಕೊಳ್ಳುತ್ತಿದ್ದೇನೆ...ನೆಂಟರು ಬೇಕೆಂದರೆ ಅಕ್ಕಿಯ ಮೇಲಿನ ಪ್ರೀತಿ
ಬಿಡಬೇಕು...ಪ್ರಯತ್ನದಲ್ಲಿದ್ದೇನೆ.
               ನಾಳೆಯೇ ಹೊಸವರುಷ... 
ಅದು ಹೇಗೋ/ ಏನೋ/ ಕಾದು ನೋಡೋಣ...ಬೇಕಾಗಲಿ/ ಬೇಡವಾಗಲಿ/ನಮಗೆ ದಕ್ಕುವದೆಲ್ಲ ನಮ್ಮದೇ...

      Happy New Year to All...

   

Sunday, 29 December 2024

ಶ್ರೀವತ್ಸ ಜೋಶಿ ಸರ್,
           ನಮಸ್ಕಾರಗಳು...
           ನಿಮಗೆ ನೆನಪಿದೆಯಾ, ನನ್ನ ಮೊದಲನೇ ಪುಸ್ತಕ ' ನೀರ ಮೇಲೆ ಅಲೆಯ ಉಂಗುರ' ಕ್ಕೆ ಪುಟ್ಟದಾದ ಮುನ್ನಡಿಯ ವಿನಂತಿ  ಮಾಡಿಕೊಂಡಿದ್ದೆ ನಿಮ್ಮಲ್ಲಿ."ಕಳಿಸಿಕೊಡಿ, ನೋಡುತ್ತೇನೆ" ಅಂದಿರಿ.ಕಳಿಸಿದೆ, ಕಾದೆ.ನೀವು ಅದನ್ನು ಕಳಿಸಿದಾಗ ಅದು ಮುನ್ನುಡಿಯಾಗಿ ರಲಿಲ್ಲ, ಡಿಸೆಂಬರ್ -೨೯ - 2019- ರವಿವಾರದ ವಿಶ್ವವಾಣಿ ಪತ್ರಿಕೆಯಲ್ಲಿ ' ತಿಳಿರು ತೋರಣ'ದ ಅಮೋಘ ಅಂಕಣವಾಗಿ ಮುದ್ರಿತವಾಗಿತ್ತು.
ಅದನ್ನು ನೋಡಿದಾಗ ನನಗಾದ ಅಚ್ಚರಿ/ ಆನಂದ, ಈ ಐದು ವರ್ಷಗಳ ನಂತರವೂ ಅಂದರೆ ಇಂದಿಗೂ ಹಚ್ಚ ಹಸಿರಾಗಿದೆ.ನನ್ನ ಪುಸ್ತಕಕ್ಕೆ ಹೊಸದೊಂದು ಆಯಾಮ ಕೊಟ್ಟು,ಅದನ್ನು ಜನಕ್ಕೆ ಪರಿಚಯಿಸಿದ
ರೀತಿಗೆ ಸಿಕ್ಕ ಬೆಲೆಯಂದರೆ ಅದು ಮುದ್ರಣವಾಗಿ ಕೈಗೆ ಬರುವ ವೇಳೆಗೆ
ನೂರಾರು order ಬರಲು ಪ್ರಾರಂಭ ವಾದವು.ಅದರ ಹಣ ಸಾರ್ವಜನಿಕ
ಉದ್ದೇಶಕ್ಕೆ ಎಂದು ಮೊದಲೇ announce ಮಾಡಿದ್ದರಿಂದ ನನಗೆ ಖುಶಿ/ ಹಣ ಇಮ್ಮಡಿಯಾಗಿ ದೊರೆತು
ಅಂದುಕೊಂಡದ್ದನ್ನು ಮಾಡಿ ಮುಗಿಸಿದ್ದರಲ್ಲಿ ನಿಮ್ಮ ಪಾತ್ರವೇ ಹೆಚ್ಚು.
ನಂತರದಲ್ಲೂ ಆ ಹುಮ್ಮಸು/ಹುರುಪು
ನನ್ನಿಂದ ಮತ್ತೆ ನಾಲ್ಕು ಪುಸ್ತಕಗಳನ್ನು
ಬರೆಯಲು ಪ್ರೇರೇಪಿಸಿದ್ದು ಬೋನಸ್. ಪುಸ್ತಕಗಳು ಏನು? ಹೇಗೆ? ಏಕೆ?- ಅನ್ನುವುದಕ್ಕಿಂತಲೂ  ಕೋವಿಡ್ನಿಂದಾಗಿ
ಎರಡು ವರ್ಷಗಳ ಕಾಲ ಭಯ ಹುಟ್ಟಿಸಿ
ಎಲ್ಲರನ್ನೂ ಗ್ರಹಬಂಧನದಲ್ಲಿರಿಸಿದಾಗ
ಮೌಲ್ಯಯುತವಾಗಿ ಹೊತ್ತು ಕಳೆಯಲು
ಅನುಕೂಲವಾದದ್ದೂ ಹೌದು...
           ‌ ಈಗ ನನ್ನ ಐದನೆಯ ಪುಸ್ತಕ
" ಹಾಯಿ ದೋಣಿಯ ಪಯಣ'- ಮುದ್ರಣಗೊಂಡು ಬಂದಿದೆ.ಇನ್ನು ಬಹುಶಃ ಬರೆಯುವುದಿಲ್ಲ.75 ರಿಂದ ಐದು ವರ್ಷಗಳ ಬದುಕು ಸುಂದರ ವಾಗಿ ಕಳೆದು ಹೋಗಿದ್ದಕ್ಕೆ ನಿಮ್ಮ ಐದುವರ್ಷಗಳ ಹಿಂದಿನ 'ತಿಳಿರು ತೋರಣ'ವೇ ಕಾರಣ.ಇನ್ನೇನಿದ್ದರೂ
ಆದಷ್ಟು...ಆದಾಗ...ಆದರೆ...ಮಾತ್ರ.

A big thank you Joshi Sir...


Thursday, 26 December 2024



 ಜಪಾನ್‌ನಲ್ಲಿ ಶಿಕ್ಷಕರ ದಿನಾಚರಣೆ ಇಲ್ಲ.

  ಒಂದು ದಿನ, ನಾನು ನನ್ನ ಜಪಾನಿನ ಸಹೋದ್ಯೋಗಿ, ಶಿಕ್ಷಕ ಯಮಮೋಟಾ ಅವರನ್ನು ಕೇಳಿದೆ:  "ಜಪಾನ್‌ನಲ್ಲಿ ನೀವು ಶಿಕ್ಷಕರ ದಿನವನ್ನು ಹೇಗೆ ಆಚರಿಸುತ್ತೀರಾ?" ಎಂದು.

ನನ್ನ ಪ್ರಶ್ನೆಯಿಂದ ಆಶ್ಚರ್ಯಗೊಂಡ ಅವರು ಉತ್ತರಿಸಿದರು: "ನಮಗೆ ಶಿಕ್ಷಕರ ದಿನವಿಲ್ಲ" ಎಂದರು.

 ಅವರ ಉತ್ತರವನ್ನು ಕೇಳಿದಾಗ, ನನಗೆ ಅವರನ್ನು ನಂಬಬೇಕೋ ಬೇಡವೋ ಎಂದು ಗೊತ್ತಾಗಲಿಲ್ಲ.

  ನನ್ನ ಮನಸ್ಸಿನಲ್ಲಿ ಒಂದು ಆಲೋಚನೆ ಹಾದುಹೋಯಿತು: "ಆರ್ಥಿಕತೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಇಷ್ಟು ಮುಂದುವರಿದ ದೇಶವು, ಶಿಕ್ಷಕರು ಮತ್ತು ಅವರ ಕೆಲಸದ ಬಗ್ಗೆ ಏಕೆ ಅಗೌರವ ತೋರುತ್ತಿದೆ?" ಎಂದು.

 ಒಮ್ಮೆ, ಕೆಲಸದ ಮುಗಿದ ಅನಂತರ ಸಂಜೆ, ಯಮಮೋಟಾ ನನ್ನನ್ನು ಅವರ ಮನೆಗೆ ಆಹ್ವಾನಿಸಿದರು.  

ಅವರ ಮನೆ ದೂರ ಇದ್ದುದರಿಂದ ಮೆಟ್ರೋ ಹತ್ತಿದೆವು .  ಅದು ಸಂಜೆಯ ಪೀಕ್ ಅವರ್ ಆಗಿತ್ತು.  ಮೆಟ್ರೋ ರೈಲಿನಲ್ಲಿನ ವ್ಯಾಗನ್‌ಗಳು ತುಂಬಿ ತುಳುಕುತ್ತಿದ್ದವು.  ನಾನು ಓವರ್ಹೆಡ್ ರೈಲನ್ನು ಬಿಗಿಯಾಗಿ ಹಿಡಿದುಕೊಂಡು ನಿಲ್ಲಲು, ಜಾಗವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದೆ. 

 ಇದ್ದಕ್ಕಿದ್ದಂತೆ, ನನ್ನ ಪಕ್ಕದಲ್ಲಿ ಕುಳಿತಿದ್ದ ವಯಸ್ಸಾದ ಹಿರಿಯ ವ್ಯಕ್ತಿ,  ನನಗೆ ತನ್ನ ಸ್ಥಾನವನ್ನು ನೀಡಿದರು.  

ವಯಸ್ಸಾದ ವ್ಯಕ್ತಿಯ ಈ ಗೌರವಾನ್ವಿತ ನಡವಳಿಕೆಯನ್ನು ಅರ್ಥಮಾಡಿಕೊಳ್ಳದೆ, ನಾನು ನಿರಾಕರಿಸಿದೆ.

 ಆದರೆ ಅವರು ನನ್ನನ್ನು ಕುಳಿತುಕೊಳ್ಳಲು ಒತ್ತಾಯಿಸಿದರು.  

ಅನಂತರ ನಾನು ಮೆಟ್ರೋದಿಂದ ಇಳಿದು ಹೊರಬಂದಾಗ, ಬಿಳಿಗಡ್ಡದ ಆ ಹಿರಿಯ ವ್ಯಕ್ತಿಯ ವರ್ತನೆಯ ಬಗ್ಗೆ ಯಮಮೋಟಾರನ್ನು ವಿವರಿಸಲು ಕೇಳಿದೆ. 

  ಯಮಮೋಟಾ ಮುಗುಳ್ನಗುತ್ತಾ ನಾನು ಧರಿಸಿದ್ದ ಟೀಚರ್‌ನ ಟ್ಯಾಗ್‌ನ ಕಡೆಗೆ ತೋರಿಸಿ ಹೇಳಿದರು :
 "ಆ ಹಿರಿಯ ವ್ಯಕ್ತಿ ನಿಮ್ಮ  ಬಳಿಯಲ್ಲಿರುವ,  ಶಿಕ್ಷಕರ ಟ್ಯಾಗ್ ಅನ್ನು ನೋಡಿದ್ದಾರೆ.  ನಿಮ್ಮ ಸ್ಥಾನಮಾನವನ್ನು ಅರಿತು ಗೌರವದ ಸಂಕೇತವಾಗಿ ತಾವು ಕುಳಿತಿರುವ ಸ್ಥಾನವನ್ನು ನಿಮಗೆ ನೀಡಿದ್ದಾರೆ' ಎಂದರು.

    ನಾನು ಮೊದಲ ಬಾರಿಗೆ ಜಪಾನಿಗೆ ಭೇಟಿ ನೀಡಿದ್ದರಿಂದ, ಖಾಲಿ ಕೈಗಳಿಂದ ಯಮಮೋಟಾರ ಮನೆಗೆ ಹೋಗುವುದು ನನಗೆ ಸರಿಯಲ್ಲವೆನಿಸಿತು.  ಆದ್ದರಿಂದ ಉಡುಗೊರೆಯನ್ನು ಖರೀದಿಸಲು ನಿರ್ಧರಿಸಿದೆ. 

 ನಾನು ಯಮಮೋಟಾ ಅವರೊಂದಿಗೆ ನನ್ನ ಉಡುಗೊರೆಯ ಆಲೋಚನೆಯನ್ನು ಹಂಚಿಕೊಂಡೆ. ಅವರು ನನ್ನ ಕಲ್ಪನೆಯನ್ನು ಬೆಂಬಲಿಸಿದರು. ಮತ್ತು "ಸ್ವಲ್ಪ ಮುಂದೆ ಶಿಕ್ಷಕರಿಗಾಗಿಯೇ ಒಂದು ಅಂಗಡಿ ಇದೆ.  ಅಲ್ಲಿ ಶಿಕ್ಷಕರು ಮಾತ್ರ ಕಡಿಮೆ ಬೆಲೆಯಲ್ಲಿ ಸರಕುಗಳನ್ನು ಖರೀದಿಸಬಹುದು" ಎಂದು ಹೇಳಿದರು.  

'ಶಿಕ್ಷಕರಿಗಾಗಿಯೇ ಕಡಿಮೆ ಬೆಲೆಯಲ್ಲಿ ಸರಕುಗಳನ್ನು ಮಾರಾಟ ಮಾಡುವ ಅಂಗಡಿಗಳಿವೆ' ಎಂದು ಯಮಮೋಟಾ ಹೇಳಿದಾಗ, ನನಗೆ ನನ್ನ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ನಾನು ಕೇಳಿದೆ
 "ಶಿಕ್ಷಕರಿಗಾಗಿಯೇ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವ ಅಂಗಡಿಗಳಿವೆಯೇ?" ಎಂದೆ.

 ನನ್ನ ಮಾತುಗಳನ್ನು ದೃಢೀಕರಿಸುತ್ತಾ, ಯಮಮೋಟಾ ಹೇಳಿದರು: "ಜಪಾನ್‌ನಲ್ಲಿ ಬೋಧನೆಯು, ಅತ್ಯಂತ ಗೌರವಾನ್ವಿತ ವೃತ್ತಿಯಾಗಿದೆ. ಇಲ್ಲಿ ಶಿಕ್ಷಕ ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿರುತ್ತಾನೆ.  ಶಿಕ್ಷಕರು ತಮ್ಮ ಅಂಗಡಿಗಳಿಗೆ ಬಂದಾಗ ಜಪಾನಿನ ವಾಣಿಜ್ಯೋದ್ಯಮಿಗಳು ತುಂಬಾ ಸಂತೋಷಪಡುತ್ತಾರೆ. ಅವರು ಅದನ್ನು ತಮ್ಮ ಗೌರವವೆಂದು ಪರಿಗಣಿಸುತ್ತಾರೆ" ಎಂದರು.

 ನಾನು ಜಪಾನ್‌ನಲ್ಲಿದ್ದಾಗ, ಶಿಕ್ಷಕರ ಬಗ್ಗೆ ಜಪಾನೀಯರಿಗೆ ಇರುವ, ಅಪಾರ  ಗೌರವವನ್ನು ನಾನು ಗಮನಿಸಿದ್ದೇನೆ.  

*ಮೆಟ್ರೋದಲ್ಲಿ ಅವರಿಗೆ ವಿಶೇಷ ಆಸನಗಳನ್ನು ನಿಗದಿಪಡಿಸಲಾಗಿದೆ.*

 *ಅವರಿಗಾಗಿ ವಿಶೇಷ ಅಂಗಡಿಗಳಿವೆ.*

ಅಲ್ಲಿ *ಶಿಕ್ಷಕರು ಯಾವುದೇ ರೀತಿಯ ಸಾರಿಗೆಗೆ, ಟಿಕೆಟ್‌ಗಾಗಿ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ.*

 ಅದಕ್ಕಾಗಿಯೇ ಜಪಾನಿನಲ್ಲಿ ಶಿಕ್ಷಕರಿಗೆ ವಿಶೇಷ ದಿನದ ಅಗತ್ಯವಿಲ್ಲ.

*ಜಪಾನೀಯರ ಜೀವನದಲ್ಲಿ ಪ್ರತಿ ದಿನವೂ ಶಿಕ್ಷಕರ ದಿನ.* 

  

Tuesday, 24 December 2024

ಪ್ರತಿ ರಾತ್ರಿಗೊಂದು ಬೆಳಗಿದೆ...ಪ್ರತಿ ರಾತ್ರಿಗೊಂದು ಬೆಳಗಿದೆ...
          ನಾಲ್ಕು ದಿನಗಳ ಹಿಂದೆ ನನ್ನ ತಮ್ಮನ ( 18 - _Dec) ನೆನಪಿನಲ್ಲಿ
ಮಸುಕಾಗಿದ್ದೆ ಎರಡುದಿನಗಳ ಕಾಲ. ಸ್ವಲ್ಪಮಟ್ಟಿಗೆ ಸುಧಾರಿಸಿಕೊಳ್ಳುವ ದಿನದಂದು ನೆಲಮಂಗಲದ ಬಳಿ ಆದ ಅಪಘಾತದ ಸುದ್ದಿ- ಫೋಟೋಗಳು
ನನ್ನನ್ನು ಅಕ್ಷರಶಃ ಹಣ್ಣಾಗಿಸಿದವು.
(ತಮ್ಮನೂ ತೀರಿದ್ದು ಅಪಘಾತದಲ್ಲಿ).
ಮತ್ತದೇ ಬೆಳಗು/ ಮತ್ತದೇ ಸಂಜೆ-
ಮತ್ತದೇ  ಬೇಸರ)...
            ‌‌‌  ಯಾವುದರಲ್ಲೂ ಆಸಕ್ತಿಯಿಲ್ಲ, ಹುರುಪಿಲ್ಲ...TV ಹೆಚ್ಚು ನೋಡುವುದಿಲ್ಲ.ಓದೂ ಹಿಮ್ಮೆಟ್ಟಿದೆ. ಹೊರಗೆ ಒಬ್ಬಳೇ ಅಡ್ಡಾಡುವುದಿಲ್ಲ.
ಆಗ ಮೈಸೂರಿನಿಂದ ನಮ್ಮ ಪ್ರಕಾಶಕರ ಫೋನು ಬಂತು- ಪುಸ್ತಕಗಳು ರೆಡಿ ಇವೆ.
ಯಾವ address ಗೆ ಕಳಿಸಲಿ?- ಎಂದು.Mood ಬದಲಾಗುವ ಸೂಚನೆ
ಕಂಡಿತು.ಸ್ವಲ್ಪವೇ ಮಿಸುಕಾಡಿ ಉತ್ತರಿಸಿದೆ.ಮರುದಿನ ಅವು ಮೈಸೂರಿ ನಲ್ಲಿ ಮಗಳ ಮನೆಯಲ್ಲಿದ್ದು ಅದರ ಮರುದಿನ ನನ್ನ ಆಪ್ತ ಗೆಳತಿ ಶಾಲಿನಿಯ
ಮೂಲಕ ನಮ್ಮನೆ ತಲುಪಿದವು.
  ‌        ಚಂಬೆಳಕಿನ ಬೆಳ್ಳಿ ಕಿರಣಗಳು
ರಾತ್ರಿಯ ಸಂಕಟ/ ಚಡಪಡಿಕೆಗೆ ಕೆಲ ಹೊತ್ತೇ ಆದರೂ ಪರಿಹಾರ ಒದಗಿಸಿ
ಮತ್ತೆ ಸಂಚಲನ ಹುಟ್ಟಿಸಿದ್ದು ನಿಜ...
ಬದುಕಿನ ಅಗಾಧತೆಗೆ ಮತ್ತೊಂದು
ನಿದರ್ಶನ...
     ‌‌‌‌         ಈ ಹುಚ್ಚನ್ನು ನನಗೆ ಹಚ್ಚಿದವನೂ ನನ್ನದೇ ತಮ್ಮ ಸುಧಿಯೇ.ನನ್ನನ್ನು, ನನ್ನ ಮಗಳನ್ನೂ
ಎಡೆಬಿಡದೇ ಕಾಡಿ/ ಮೊದಲ ಪುಸ್ತಕದ
Proof reading ನಿಂದ ಹಿಡಿದು ಪ್ರಕಾಶನದ ವರೆಗೆ ಒಂದು ವೃತದಂತೆ ಕೆಲಸಮಾಡಿ/ನನಗೆ ಪುಸ್ತಕಗಳನ್ನು ಕಳಿಸಿ/ ಧಾರವಾಡದಲ್ಲೆಲ್ಲ ಸ್ವತಃ ಕಾರಿನಲ್ಲಿ ಹಾಕಿಕೊಂಡು ಎಲ್ಲರಿಗೂ ತಲುಪಿಸಿದವನು ಅವನೇ...ಆ ಮಾತಿಗೆ
ಸರಿಯಾಗಿ ಐದು ವರ್ಷಗಳು ಕಳೆದವು...ಅವನಿಲ್ಲದೇ ನಾಲ್ಕು ವರ್ಷಗಳು...
         ‌     ನನ್ನ ಪ್ರತಿಯೊಂದು ಹಗಲು
ಇರುಳಲ್ಲಿಯೂ ನೆನಪಾಗುತ್ತಾನೆ ಅವನು.ಸಮಾಧಾನಿಸುತ್ತಾನೆ,
ಅವನನ್ನು ನೆನೆದರೇನೇ ‌ಎಲ್ಲೋ ಹೇಗೋ ಒಂದು ರೀತಿಯಲ್ಲಿ ಒಂದು ಸಮಾಧಾನ ಸಿಗುತ್ತದೆ.
          ವರ್ಷದಿಂದ ಬೆನ್ನು ಹತ್ತಿದ
ಪುಸ್ತಕಗಳು ಪ್ರಿಂಟ್ ಆಗಿರಲೇ ಇಲ್ಲ.
ಆದಾಗ ಆಗಲಿ ಎಂದು ನಾನೂ ಬಿಟ್ಟುಬಿಟ್ಟಿದ್ದೆ.ಅಂಥವು ಈಗ ಬಂದಿವೆ,
ಸ್ವಲ್ಪಮಟ್ಟಿಗೆ ಮತ್ತೆ ಜೀವ ತುಂಬಿವೆ...
              ಪ್ರತಿ ರಾತ್ರಿಗೂ ಒಂದು ಬೆಳಗಿರುತ್ತದೆ-ಎಂಬುದನ್ನು ನೆನಪಿಸಿ
ಸಮಾಧಾನಿಸುತ್ತವೆ...ನಮ್ಮನ್ನು
ಮುಂದೆ ನಡೆಸುತ್ತವೆ...
         Love YOU Jindagee...

          ನಾಲ್ಕು ದಿನಗಳ ಹಿಂದೆ ನನ್ನ ತಮ್ಮನ ( 18 - _Dec) ನೆನಪಿನಲ್ಲಿ
ಮಸುಕಾಗಿದ್ದೆ ಎರಡುದಿನಗಳ ಕಾಲ. ಸ್ವಲ್ಪಮಟ್ಟಿಗೆ ಸುಧಾರಿಸಿಕೊಳ್ಳುವ ದಿನದಂದು ನೆಲಮಂಗಲದ ಬಳಿ ಆದ ಅಪಘಾತದ ಸುದ್ದಿ- ಫೋಟೋಗಳು
ನನ್ನನ್ನು ಅಕ್ಷರಶಃ ಹಣ್ಣಾಗಿಸಿದವು.
(ತಮ್ಮನೂ ತೀರಿದ್ದು ಅಪಘಾತದಲ್ಲಿ).
ಮತ್ತದೇ ಬೆಳಗು/ ಮತ್ತದೇ ಸಂಜೆ-
ಮತ್ತದೇ  ಬೇಸರ)...
            ‌‌‌  ಯಾವುದರಲ್ಲೂ ಆಸಕ್ತಿಯಿಲ್ಲ, ಹುರುಪಿಲ್ಲ...TV ಹೆಚ್ಚು ನೋಡುವುದಿಲ್ಲ.ಓದೂ ಹಿಮ್ಮೆಟ್ಟಿದೆ. ಹೊರಗೆ ಒಬ್ಬಳೇ ಅಡ್ಡಾಡುವುದಿಲ್ಲ.
ಆಗ ಮೈಸೂರಿನಿಂದ ನಮ್ಮ ಪ್ರಕಾಶಕರ ಫೋನು ಬಂತು- ಪುಸ್ತಕಗಳು ರೆಡಿ ಇವೆ.
ಯಾವ address ಗೆ ಕಳಿಸಲಿ?- ಎಂದು.Mood ಬದಲಾಗುವ ಸೂಚನೆ
ಕಂಡಿತು.ಸ್ವಲ್ಪವೇ ಮಿಸುಕಾಡಿ ಉತ್ತರಿಸಿದೆ.ಮರುದಿನ ಅವು ಮೈಸೂರಿ ನಲ್ಲಿ ಮಗಳ ಮನೆಯಲ್ಲಿದ್ದು ಅದರ ಮರುದಿನ ನನ್ನ ಆಪ್ತ ಗೆಳತಿ ಶಾಲಿನಿಯ
ಮೂಲಕ ನಮ್ಮನೆ ತಲುಪಿದವು.
  ‌        ಚಂಬೆಳಕಿನ ಬೆಳ್ಳಿ ಕಿರಣಗಳು
ರಾತ್ರಿಯ ಸಂಕಟ/ ಚಡಪಡಿಕೆಗೆ ಕೆಲ ಹೊತ್ತೇ ಆದರೂ ಪರಿಹಾರ ಒದಗಿಸಿ
ಮತ್ತೆ ಸಂಚಲನ ಹುಟ್ಟಿಸಿದ್ದು ನಿಜ...
ಬದುಕಿನ ಅಗಾಧತೆಗೆ ಮತ್ತೊಂದು
ನಿದರ್ಶನ...
     ‌‌‌‌         ಈ ಹುಚ್ಚನ್ನು ನನಗೆ ಹಚ್ಚಿದವನೂ ನನ್ನದೇ ತಮ್ಮ ಸುಧಿಯೇ.ನನ್ನನ್ನು, ನನ್ನ ಮಗಳನ್ನೂ
ಎಡೆಬಿಡದೇ ಕಾಡಿ/ ಮೊದಲ ಪುಸ್ತಕದ
Proof reading ನಿಂದ ಹಿಡಿದು ಪ್ರಕಾಶನದ ವರೆಗೆ ಒಂದು ವೃತದಂತೆ ಕೆಲಸಮಾಡಿ/ನನಗೆ ಪುಸ್ತಕಗಳನ್ನು ಕಳಿಸಿ/ ಧಾರವಾಡದಲ್ಲೆಲ್ಲ ಸ್ವತಃ ಕಾರಿನಲ್ಲಿ ಹಾಕಿಕೊಂಡು ಎಲ್ಲರಿಗೂ ತಲುಪಿಸಿದವನು ಅವನೇ...ಆ ಮಾತಿಗೆ
ಸರಿಯಾಗಿ ಐದು ವರ್ಷಗಳು ಕಳೆದವು...ಅವನಿಲ್ಲದೇ ನಾಲ್ಕು ವರ್ಷಗಳು...
         ‌     ನನ್ನ ಪ್ರತಿಯೊಂದು ಹಗಲು
ಇರುಳಲ್ಲಿಯೂ ನೆನಪಾಗುತ್ತಾನೆ ಅವನು.ಸಮಾಧಾನಿಸುತ್ತಾನೆ,
ಅವನನ್ನು ನೆನೆದರೇನೇ ‌ಎಲ್ಲೋ ಹೇಗೋ ಒಂದು ರೀತಿಯಲ್ಲಿ ಒಂದು ಸಮಾಧಾನ ಸಿಗುತ್ತದೆ.
          ವರ್ಷದಿಂದ ಬೆನ್ನು ಹತ್ತಿದ
ಪುಸ್ತಕಗಳು ಪ್ರಿಂಟ್ ಆಗಿರಲೇ ಇಲ್ಲ.
ಆದಾಗ ಆಗಲಿ ಎಂದು ನಾನೂ ಬಿಟ್ಟುಬಿಟ್ಟಿದ್ದೆ.ಅಂಥವು ಈಗ ಬಂದಿವೆ,
ಸ್ವಲ್ಪಮಟ್ಟಿಗೆ ಮತ್ತೆ ಜೀವ ತುಂಬಿವೆ...
              ಪ್ರತಿ ರಾತ್ರಿಗೂ ಒಂದು ಬೆಳಗಿರುತ್ತದೆ-ಎಂಬುದನ್ನು ನೆನಪಿಸಿ
ಸಮಾಧಾನಿಸುತ್ತವೆ...ನಮ್ಮನ್ನು
ಮುಂದೆ ನಡೆಸುತ್ತವೆ...
         Love YOU Jindagee...


Friday, 20 December 2024

Tuesday, 17 December 2024

ಸುಧಿ, 
          ನೀನಿಲ್ಲದೇ ಇಂದಿಗೆ ನಾಲ್ಕು ವರ್ಷ...ಒಂದು ದಿನವೂ ನಿನ್ನನ್ನು ನೆನಪಿಸದೇ ಇಲ್ಲ.ಪ್ರತಿಯೊಂದು ಗಳಿಗೆ
- ಎಂಥದೇ ಇರಲಿ- ಮೊದಲು ನೀನು
ಕಣ್ಣೆದುರು ಬರುತ್ತೀ...ಒಮ್ಮೊಮ್ಮೆ ನಿನ್ನ
ಜೊತೆ ಮಾತನಾಡುವ ಅದಮ್ಯ ಆಸೆಯಾಗುತ್ತದೆ.ಸ್ವಲ್ಪು ಹೊತ್ತು ಮಂಕು
ಕವಿಯುತ್ತದೆ.ಯಾವುದೇ ಎಂಥದೇ ಸುದ್ದಿ ಇರಲಿ- ಮೊದಲ ಹಂಚುವಿಕೆ-
ನಿನ್ನೊಂದಿಗಿರುತ್ತಿತ್ತು. ಹತ್ತು  ಹದಿನೈದು ನಿಮಿಷಗಳ ಕಾಲ ಹರಟೆಯಾಗುತ್ತಿತ್ತು. ಅಸಹಾಯಕತೆಗೊಂದು ಸಾಂತ್ವನ/ ಖುಶಿಗೊಂದು ಅಭಿನಂದನ/ಸಾಮಾನ್ಯ ಕರೆಯಾಗಿದ್ದರೆ ಮನಸ್ಸು ಬಿಚ್ಚಿಟ್ಟ ಶುದ್ಧ ನಿರಾಳತೆ ಅನುಭವವಾಗುತ್ತಿತ್ತು.
ತುಂಬಾ ಕಾಡುತ್ತೀ ಮಹರಾಯ!!!ಎಂಥ ಅಸಹಾಯಕತೆ  ನಮ್ಮೆಲ್ಲರದು!!! 

Saturday, 7 December 2024

ಹಾಗೇ ಹೇಳುತ್ತಲೇ ಇರುತ್ತೇವೆ,

ನಾಳೆ/ಇನ್ನೊಮ್ಮೆ ಎಂದಾದರೂ/
ಮುಂದಿನ ವರ್ಷ/ಮುಂದೆ ನೋಡೋಣ, ಹೀಗೇ...

ಒಂದೇ ಒಂದು ಬಾರಿ ಈ
ಶಬ್ದಗಳ ಪೊಳ್ಳುತನ ನೋಡು,
ನಿನ್ನ ಸೂರ್ಯ ದಿನಾಲೂ
ಪಶ್ಚಿಮದಲ್ಲಿ ಇಳಿಯುತ್ತಿದ್ದಾನೆ,
ನೀನು ಮತ್ತೊಂದು ವರ್ಷದ
ಮಾತನಾಡುತ್ತಿದ್ದೀಯಾ...
ನಿನ್ನ ಕ್ಯಾಲೆಂಡರ್ ದಲ್ಲಿ ಅನೇಕ 
ಮಾಸ/ವರ್ಷಗಳು ಬಾಕಿ ಇರಬಹುದು-
ನಿನ್ನ ಅವ್ವನವು ಬಹಳಷ್ಟು ಕಳೆದುಹೋಗಿವೆ...
ನಿನ್ನನ್ನು 'ಬಂಗಾರ- ಬಂಗಾರ' ಅನ್ನುತ್ತಲೇ ಕೂದಲು 'ಬೆಳ್ಳಿ'ಯಾಗಿವೆ...

ಮುಂದಿನ ವರ್ಷ ಏನೋ! ಕಂಡವರಾರು?
ನಾಳೆಯೇ ಅವಳೊಡನೆ ಒಂದು
ದಿನ ಕಳೆ,
ಆಗ ಅವಳ ಕಂಗಳ ಮಿಂಚನ್ನೊಮ್ಮೆ ನೋಡು...
ಅದಾವ ' ದೀಪಾವಳಿ'ಗೆ ಕಡಿಮೆ
ಹೇಳು!!!...

ಅಮ್ಮ 'ಬಣ್ಣ ಬದಲಿಸುವಲ್ಲೂ
ನಿಪುಣೆ'-
ನೀನು ಉದಾಸಳಾದರೆ ಗೆಳತಿಯಂತೆ,
ತಪ್ಪು ಮಾಡಿದರೆ ಅಪ್ಪನಂತೆ,
ಹೆದರಿದರೆ ಹಿರಿಯಣ್ಣನಂತೆ, ನಿಲ್ಲುತ್ತಾಳೆ...
ಇದವಳಿಗೆ ಹೇಗೆ ಸಾಧ್ಯ?
ನನಗಚ್ಚರಿ...
' ಅಮ್ಮ' ಎಲ್ಲ ಸಂಬಂಧಗಳನ್ನೂ
ನಿಭಾಯಿಸಬಲ್ಲಳು...
ಆದರೆ ಎಲ್ಲ ಸಂಬಂಧಗಳು
ಒಟ್ಟಾದರೂ ಅವಳನ್ನು ಇನಿತೂ
ಸರಿಗಟ್ಟಲಾಗದು...

ಹೇಳುತ್ತಾರೆ,
"ಅಲ್ಲೆಲ್ಲೋ ಒಂದು ಸ್ವರ್ಗಲೋಕವಿದೆಯಂತೆ,
ಹಾಲಿನ ಹೊಳೆ ಹರಿಯುತ್ತದಂತೆ,
ಯಕ್ಷಿಣಿಯರಿರುತ್ತಾರಂತೆ,
ಅಲ್ಲಿ ನೋವಿಲ್ಲ,ದುಃಖವಿಲ್ಲ...
ಸಂತೋಷಕ್ಕೆ ಮಿತಿಯಿಲ್ಲ,
ಹರ್ಷಕ್ಕೆ' ಸರಹದ್ದು' ಇಲ್ಲ.
ಅಲ್ಲಿ  ಹಗಲಿಗಿಂತ ರಾತ್ರಿಗಳಲ್ಲಿ
ಹೆಚ್ಚು ಬೆಳಕಿರುತ್ತದೆ"...
ಹಾಗೆ...ಹೀಗೆ...

ಇದೆಲ್ಲ ಯಾರೋ ಹೇಳಿದ/ ಕೇಳಿದ
ಮಾತುಗಳು...
ಅದನ್ನು ನಂಬಲೇ ಬೇಕಿಲ್ಲ-
ಆಕಾಶದಲ್ಲೆಲ್ಲೋ ಸ್ವರ್ಗ ಹುಡುಕಬೇಕಿಲ್ಲ...
ಪಕ್ಕದ ಅಮ್ಮನ‌ ಕೋಣೆಯಲ್ಲಿ 
ಇಣುಕು...
ಅಲ್ಲೇ 'ಸ್ವರ್ಗ'ವಿದೆ...

        ಧಾರವಾಡದಲ್ಲಿ ಇಂದಿಗೆ ಹತ್ತು  ದಿನ ಕಳೆದವು. ಈ ಸಲ ಅದರ ಬಗ್ಗೆ ಬರೆಯಲು ತುಂಬಾನೆ ನೋವು ಹಾಗೂ ಬೇಸರವಾಗುತ್ತಿದೆ.ಅದೇ ಜನ/ಅವೇ ಮನೆಗಳು/ಭಾವ ಬೇರೆ/ನೋವು ಬೇರೆ......