Thursday, 15 March 2018

ಪ್ರೇಮ


ಪ್ರೇಮ_ ಎರಡಕ್ಷರದ ಪದವಿದು
ಎನಿತು ಸುಂದರ..ನಿರ್ಮಲ..
ಈ ಭವ್ಯ- ನವ್ಯ- ದಿವ್ಯ ಭಾವವ
ಮೊಳಸೆ ಬದುಕಿದು ಉಜ್ವಲ..
ಮುತ್ತು,ಹವಳ,ಪಚ್ಚೆ ಎಲ್ಲವೂ
ಪ್ರೇಮದೆದುರಿಗೆ ತುಚ್ಛವು...
ಹೃದಯದೋಟದ ಪುಣ್ಯ ನೆಲದಲಿ
ಅರಳಿ ನಿಂತ ಹೂಗುಚ್ಛವು...
ಪ್ರೇಮಿಯದೆಯದು ದೇವ ಸನ್ನಿಧಿ
ನಿತ್ಯ ನೂತನ ಬಂಧುರ...
ಬಾಳ ಬಾನಲಿ ಬೆಳಗಿ ನಿಂತಿಹ
ಪೂರ್ಣ ಪ್ರಕಸಿತ ಚಂದಿರ...
ಸ್ವಾರ್ಥಸಾಧನೆ,ವ್ಯರ್ಥ ಭಾವನೆ
ಪ್ರೇಮಲೋಕದಿ ಉಳಿಯವು...
ಅರ್ಥವಿಲ್ಲದ ನೂರು ಪದಗಳು
ಪ್ರೇಮಸ್ಪರ್ಶದಿ ಅಳಿವವು...
ಕ್ರೂರಕಾಲನ ಕಾಲಿನಡಿಯಲಿ
ಸಿಕ್ಕು ಸತ್ತರೂ ದೇಹವು...
ಪ್ರೇಮ ಮಾತ್ರವೇ ಅಮರಭಾವವು
ಮನದಿ ಶಾಶ್ವತ ಸ್ಥಾನವು...

No comments:

Post a Comment

ಮಾಡಲು ಯೋಚನೆಗಳು, ಮಾತನಾಡಲು ಸಂಗಾತಿಗಳು, ಹೊರಗೆ ಹೋಗಲು ತಾಕತ್ತು, ‌ಕೆಲಸ ಮಾಡುವ ಹರಕತ್ತು, TV ಓಡಲು ಹೆಚ್ಚಿನ ಆಸಕ್ತಿ,