Thursday, 29 March 2018

ವಿದಾಯಕ್ಕೆ ಮುನ್ನ

ಹಿಂದೆಂದೋ ಒಂದು ದಿನ
ಕಂಡಿದ್ದ ಕನಸು
ಗಟ್ಟಿಗೊಳಿಸುತ್ತಿದೆ ಮನಸು..
ಆದರೂ ಆಳದಲ್ಲೇನೋ ಅನುಮಾನ..
ಕೇಳಿಯೇಬಿಟ್ಟೆ ಒಳ ಮನಸನ್ನೇ..
ಅದೂ ಹೇಳಿದ್ದು ಇದನ್ನೇ...
" ಜಾರಗೊಡಬೇಡ ಅವಕಾಶ- ಮೂಡಬಹುದು ಅಲ್ಲಿಯೂ
ಕಾಮನ ಬಿಲ್ಲು..ಕಂಡುಕೋ
ನೆಲೆಯೊಂದ ಸಾವಕಾಶ..."
ದೊರಕಿದರೂ ದ್ವಂದ್ವಕ್ಕೆ ಅಲ್ಪವಿರಾಮ
ವಿಚಾರಧಾರೆಗೋ ಹೊಸ
ಹೊಸ ಆಯಾಮ....
ಹುಚ್ಚು ಮನಸೇ ಹೀಗೆ..
ಅನುಮಾನಗಳು ಅಂಕುರ ಪಡೆದು
ನೀರುಗೊಬ್ಬರವಿಲದೇ
ಭರದಿಂದ ಬೆಳೆದು
ಎದುರು ನಿಲ್ಲುತ್ತವೆ
ಆಲದ ಮರದ ಹಾಗೆ..
ನಮಗೆ ಬೇಕಿಲ್ಲದರ
ಬೇರು- ಬಿಳಲು...
ಸಾಕು ಅದರ ತಂಪೆರೆವ ನೆಳಲು.
ಅಂತೆಯೇ ಸ್ವೀಕರಿಸಿದ್ದೇನೆ ನಿಮ್ಮ ಹಾರೈಕೆ
ತುಂಬು ಹೃದಯದ ನಿಮ್ಮೊಲವು
ಎಂದಿಗೂ ಕುಂಧ ಮನೋ ಬಲವು..
ಅದರದೇ ಅಲ್ಲವೇ ಮನ
ಮುದದ ಆರೈಕೆ..?
ಕಾಣುತ್ತಿರಿ ನಿಮ್ಮೆಲ್ಲರೊಳಗೆ ನನ್ನ..
ಇದೊಂದೇ ಮಾತು,
ವಿದಾಯಕ್ಕೆ ಮುನ್ನ
              ‌‌‌  **********

No comments:

Post a Comment

ಪ್ರತಿದಿನ ಹಂಚಿನಮನಿ college/High school post ಗಳ ವಿವರಗಳನ್ನು ನೋಡುವುದು ನನ್ನ ಮೆಚ್ಚಿನ ಹವ್ಯಾಸ ವಾಗಿದೆ.ಸ್ವಲ್ಪೇ ದಿನಗಳಲ್ಲಿ ಇಷ್ಟು ವ್ಯವಸ್ಥಿತವಾಗಿ ಎಲ್ಲ ನಡೆಯ...