Sunday, 7 September 2025

  ಮತ್ತದೇ ಸಂಜೆ...ಮತ್ತದೇ ಬೇಸರ...
     
    ನಿನ್ನೆ ಸ್ವಲ್ಪು ಬೇಗ ಮಲಗಿದ್ದೆ.ರಾತ್ರಿ
ನಿದ್ರೆಯೂ ಚನ್ನಾಗಿ ಬಂದು ಬೇಗ ಎಚ್ಚರವಾಯ್ತು..ನಿನ್ನಿನ ಮಳೆ/ ಥಂಡಿಯಿಂದಾಗಿ ಹೊರಗೂ ಬೀಳುವಂತಿ ರಲಿಲ್ಲ...ಮಕ್ಕಳಿಗೆ  ರವಿವಾರ ಅಂದರೆ
ಆರಾಮದ ದಿನ- ಯಾವುದೇ ಮೀಟರ್
ಇಲ್ಲದ ದಿನಚರಿ...
                ಅರ್ಧ ಕಪ್ ಕಾಫೀ ಕುಡಿದು/ ಕೆಲವು 'ದಿನದ exercises'- ಮಾಡಿ / morning ಸಂದೇಶ ಕಳಿಸಿದವರಿಗೆ
ಉತ್ತರಿಸಿ ನೋಡಿದರೆ ಒಂದು ಗಂಟೆಯೂ
ಕಳೆದಿಲ್ಲ.ಓದುವ ಆಸಕ್ತಿ ಕಡಿಮೆಯಾಗಿದೆ,
ಓದಿದ್ದು ತಲೆಗೆ ಹೋಗುವುದಿಲ್ಲ/ ಹೋದರೂ ಹೆಚ್ಚು ಕಾಲ ನಿಲ್ಲವುದಿಲ್ಲ ಎಂಬ ಕಾರಣಕ್ಕಿರಬಹುದು...TV. ಯಲ್ಲಿ
ಸಂದರ್ಶನಗಳು/ ಆರೋಗ್ಯ ಸಲಹೆಗಳು / ಹಳೆಯ ಸಿನೆಮಾ ಸಂಗೀತ ಅಂತ ಸ್ವಲ್ಪು
ಸಮಯ ಹೋದೀತು...ಒಬ್ಬಳೇ ಎಲ್ಲಿಗಾದರೂ ಹೋಗುವುದು ಅಸಾಧ್ಯದ
ಮಾತು- ಅದೂ ಬೆಂಗಳೂರಲ್ಲಿ...
               ಸ್ವಭಾವತಃ ನಾನು Negative
Thinking ನವಳಲ್ಲ...ಏನೇ ನಡೆಯಲಿ
ಕೆಲ ಹೊತ್ತಿಗೇನೇ ಸುಧಾರಿಸಿಕೊಳ್ಳುತ್ತೇನೆ.
ಆದರೂ ಖಾಲಿ ಇದ್ದರೆ ಮನಸ್ಸು ದೆವ್ವದ ಕಾರಖಾನೆ- ಬೇಡದ ವಿಷಯಗಳೇ ನೆನಪಿಗೆ ಬಂದು ಮನಸ್ಸು ಮುದುಡುತ್ತದೆ
...ಮೈ ಜಡವಾಗುತ್ತದೆ.ಏನು ಮಾಡಲೂ
ಹಿಂದೇಟು...ಮತ್ತೆ ಬಾಲ್ಕನಿಗೆ ಬಂದು/ recliner open ಮಾಡಿ/ಕಾಲುಗಳನ್ನು
ಚಾಚಿ ಎದುರಿಗೆ ಕಾಣುವ ಮೂರು ದಾರಿಗಳಲ್ಲಿ ಕಳೆದು ಹೋಗುತ್ತೇನೆ... ಒಬ್ಬಿಬ್ಬರ ಫೋನು ಬಂದರೆ ಉತ್ತರಿಸುತ್ತೇನೆ...
 ‌‌               ಮತ್ತೆ....ಮತ್ತೆ...ಬೇರೇನು ಮಾಡಬಹುದು ಎಂದು ಯೋಚಿಸುತ್ತೇನೆ.
ಇದು ಬದುಕಿನ ಬಗೆಗಿನ ತಕರಾರು ಖಂಡಿತ ಅಲ್ಲ..ಮುಪ್ಪನ್ನು ನನಗೂ/ ಇತರರಿಗೂ ಸಹ್ಯವಾಗುವಂತೆ ಹೇಗೆ ಕಳೆದು ನಿರ್ಗಮಿಸಬಹುದು ಎಂಬುದರ
Loud thinking...
            

No comments:

Post a Comment

   ನನ್ನ ಪ್ರತಿ Post ಗೂ ಒಬ್ಬ ಹಿರಿಯರ  ಕಾಮೆಂಟ್ ಕಡ್ಡಾಯವೇನೋ ಅನ್ನುವಷ್ಟ ರ ಮಟ್ಟಿಗೆ ಬರುತ್ತದೆ, ನಂತರ ನನ್ನ ಮೆಸೇಜು section ಗೆ ಆತ್ಮೀಯ ಮೆಚ್ಚುಗೆ/ಸಲಹೆ/ವಿನಂತಿಗ...