Sunday, 7 September 2025

ಮುಂಜಾನೆ ನಾನೆದ್ದು ಯಾರ್ಯಾರ
ನೆನೆಯಾಲಿ...
 
     ನನ್ನ ಪ್ರತಿ Post ಗೂ ಒಬ್ಬ ಹಿರಿಯರ 
ಕಾಮೆಂಟ್ ಕಡ್ಡಾಯವೇನೋ ಅನ್ನುವಷ್ಟ ರ ಮಟ್ಟಿಗೆ ಬರುತ್ತದೆ, ನಂತರ ನನ್ನ ಮೆಸೇಜು section ಗೆ ಆತ್ಮೀಯ ಮೆಚ್ಚುಗೆ/ಸಲಹೆ/ವಿನಂತಿಗಳೂ ಬರುತ್ತವೆ
ಅವುಗಳನ್ನು ನೋಡಿದ ಮೇಲೆಯೇ ನನಗೂ ಸಮಾಧಾನ...

          ಅವರು ಸಣ್ಣವರಲ್ಲ.ವಯಸ್ಸು 93.ಆದರೆ ಜೀವನೋತ್ಸಾಹ ಮಾತ್ರ 39 ರ ವಯಸ್ಸಿನವರದು...ಮೂಲತಃ ಧಾರವಾಡದವರು.ನಾನು/ಕೌಲಗಿಯವ ರು/ ನಮ್ಮ ಮಾವ  NB Koulagiಯವ ರು ಕೆಲಸಮಾಡಿದ ಕರ್ನಾಟಕ ಹೈಸ್ಕೂಲ ಲ್ಲಿ ಕಲಿತವರು.ಅಲ್ಲಿಯ/ಆಗಿನ ಗುರುಗ ಳನ್ನು ಎದೆಯಲ್ಲಿಟ್ಟುಕೊಂಡು ಪೂಜಿಸು ವವರು...ಅವರ ಉಲ್ಲೇಖ ನಾನು ಮಾಡಿದಾಗಲೆಲ್ಲ ತಮ್ಮ ನೆನಪುಗಳನ್ನು
ಪುಟಗಳಲ್ಲಿ ಹರಡಿ ಆಲ್ಹಾದಿಸುವವರು...
ಇಂದಿಗೂ ಜ್ಯಾಮೆಟ್ರಿ/maths ಗಳಲ್ಲಿ
ಹೊಸ ಹೊಸ ಪ್ರಯೋಗಗಳನ್ನು ಮಾಡುವುದಲ್ಲದೇ ಅವುಗಳ ಯಶೋಗಾ ಥೆಗಳನ್ನು ನನ್ನೊಂದಿಗೆ ತಪ್ಪದೇ ಹಂಚಿಕೊಂಡು ಖುಶಿಪಡುವವರು...

           ಮುಂಬೈಯಲ್ಲಿ ನೌಕರಿ ಮಾಡಿ ಮುಗಿಸಿ/ಸಧ್ಯ ಲಂಡನ್-ಸಿಂಗಾಪುರಗಳ ಲ್ಲಿರುವ ಮಕ್ಕಳ ಮನೆಯಲ್ಲಿ ಎಂಬತ್ತೇಳು ವರ್ಷಗಳ ಹೆಂಡತಿಯೊಂದಿಗೆ ಸಂತೃಪ್ತ
ಜೀವನ ನಡೆಸುತ್ತಿರುವ ಅವರ post
ಗಳಲ್ಲಿ ಒಂದು ಬಾರಿಯೂ ಯಾವುದೇ ನಕಾರಾತ್ಮಕ ಟಿಪ್ಪಣಿ ನಾನು ಕಂಡಿಲ್ಲ... ನನ್ನ ಬರಹಗಳಲ್ಲಿ ಎಂದಾದರೂ ಎಲ್ಲಿಯಾದರೂ ಒಂದು ಮಾತಿನಲ್ಲಿ ನಿರಾಶೆಯ ಛಾಯೆ ಮೂಡಿದರೂ ತಕ್ಷಣ ಒಂದು ದೀರ್ಘ  ಪ್ಯಾರಾಗ್ರಾಫ್ನ  ಸಂದೇಶ ವೊಂದು ಮೆಸೇಜಿನಲ್ಲಿ ಇಣುಕಿರುತ್ತದೆ... ನನ್ನನ್ನು ಸರಿ ಮಾಡಲು...

        ಇಷ್ಟು ಬರೆದಿದ್ದೇನೆ ಅಂದರೆ ನನಗವರ ಮುಖ ಪರಿಚಯವಿದೆ ಅಂದಲ್ಲ...ಧಾರವಾಡದಲ್ಲಿ ಅವರ ಕೆಲ ಮಿತ್ರರಿದ್ದು ಅವರಿಂದ ಮುಖಪುಸ್ತಕದಲ್ಲಿ ನನ್ನ ಬರಹಗಳನ್ನೋದಿ/ತಪ್ಪದೇ  comments ಹಾಕಿ/ನಾನವಕ್ಕೆ ಪ್ರತಿಕ್ರಯಿಸಿ ಬೆಳೆದ ಸ್ನೇಹ ಬಂಧವಿದು.
ಪತ್ರ ಬರೆದು ನನ್ನೆಲ್ಲ ಪುಸ್ತಕಗಳನ್ನು ಸಿಂಗಾಪುರಕ್ಕೆ ತರಿಸಿಕೊಂಡು ಓದಿ ಮೊದಲ ದಿನದಿಂದಲೇ ಅಭಿಪ್ರಾಯಗಳ ನ್ನು ಬರೆಯುವ ಪದ್ಧತಿ ಕಿಂಚಿತ್ತೂ ತಪ್ಪಿಸಿಲ್ಲ...
           ನನ್ನೊಡನೆ ಮಾತನಾಡಿ/ ಹೆಂಡತಿ
ಮಕ್ಕಳನ್ನೂ ಪರಿಚಯಿಸಿ/ ಇಂದಿಗೂ
ಮುಂಜಾನೆಗೊಂದು/ಸಂಜೆಗೊಂದು
Message ಬರೆಯುವ/ನೀನು ನನ್ನ ಮತ್ತೊಬ್ಬ ತಂಗಿಯಂದು ಸಂಭ್ರಮಿಸುವ
ಅವರ ಹೆಸರು...

ಸುರೇಶ ದತ್ತಾತ್ರೇಯ ಮಾವಿನಕುರ್ವೆ...

No comments:

Post a Comment

ಮುಂಜಾನೆ ನಾನೆದ್ದು ಯಾರ್ಯಾರ ನೆನೆಯಾಲಿ...        ನನ್ನ ಪ್ರತಿ Post ಗೂ ಒಬ್ಬ ಹಿರಿಯರ  ಕಾಮೆಂಟ್ ಕಡ್ಡಾಯವೇನೋ ಅನ್ನುವಷ್ಟ ರ ಮಟ್ಟಿಗೆ ಬರುತ್ತದೆ, ನಂತರ ನನ್ನ ಮೆಸೇಜ...