ನನ್ನದೊಂದು ಪುಟ್ಟ ಹಳ್ಳಿ. ಶಾಲೆಗಳು ನಮ್ಮಿಂದಲೇ ಸುರುವಾಗಿದ್ದವು. ಅಣ್ಣಂದಿರು ಪಕ್ಕದ ಸ್ವಲ್ಪ ದೊಡ್ಡದಾದ ಊರುಗಳಲ್ಲಿ / ಪರಿಚಯಸ್ಥರ ಮನೆಯಲ್ಲಿ/ವಾರಾನ್ನ
ಉಂಡು ಓದಬೇಕಿತ್ತು..ಹೀಗಾಗಿ ನಮಗೆ
ಒಂಚೂರು Exposure ಇರಲಿಲ್ಲ.ನಮ್ಮ ಜಿಲ್ಹೆ ಧಾರವಾಡವನ್ನು ನಾನು ಮೊದಲ ಬಾರಿ ನೋಡಿದ್ದು ನನ್ನ ಹದಿನೆಂಟನೇ ವಯಸ್ಸಿನಲ್ಲಿ...
ಕಾಲಚಕ್ರ ಓಡಿತು.ನಾವೂ ಧಾರವಾಡದವರಾದ ಮೇಲೆ/ ಮಕ್ಕಳ ಕಾಲಕ್ಕೆ/ನೌಕರಿ ಸೇರಿದಮೇಲೆ ಸ್ವಲ್ಪ ಸುಧಾರಣೆ ಗಾಳಿ ಬೀಸಿದ ಮೇಲೆ/ ನನ್ನ ಮಗನೂ ಅಮೇರಿಕಕ್ಕೆ ಹೋದ ಮೇಲೆ /
ಅವನ cousins ಗಳೆಲ್ಲರೂ ಪ್ರಪಂಚದ
ಮೂಲೆ ಮೂಲೆಗಳನ್ನೆಲ್ಲ ಅಳೆದಿದ್ದಾರೆ...
ಈಗ ಅವರ ಮಕ್ಕಳ ಕಾಲ...
ನಾನು ಶಿಕ್ಷಕಿಯಾಗಿದ್ದಾಗ/ವಿದೇಶಗಳ ಬಗ್ಗೆ ಯಾವುದಾದರೂ ನಗರದ ಬಗ್ಗೆ ಹೇಳಬೇಕಾದಾಗ ಅಲ್ಲಿಲ್ಲಿ/ ಅವರಿವರನ್ನು
ಕೇಳಿ ಪಡೆಯುತ್ತಿದ್ದ ಮಾಹಿತಿಗಳೇ ಅವರ
ನಿತ್ಯ ಹರಟೆ...ಇಂದಿಗೂ ಕಣ್ಣು ಹಿಗ್ಗಿಸಿ/ ಬಾಯಿ ತೆರೆದೇ ನಾನು ಕೇಳುವುದು ಅವರ ನಿತ್ಯೋಪಾಖ್ಯಾನವನ್ನು...
ನಿನ್ನೆ ನನ್ನ ಐದನೇ ಮೊಮ್ಮಗ
Illinois University ಯಲ್ಲಿ ಇಂಜಿನಿಯರಿಂಗ್ ಸೀಟ್ ಪಡೆದಿದ್ದಾನೆ. ಬೆಳಿಗ್ಗೆ ಫೋಟೋಗಳು ಬಂದವು...ನನ್ನ
Diary ಆದ Fb ಗೆ ಇದೀಗ Entry ಆಯಿತು...
ಬೇಕೆಂದಾಗ ನೋಡಲು...
No comments:
Post a Comment