Sunday, 10 August 2025

ಅನಿಸುತಿದೆ ಯಾಕೋ ಇಂದು...

           ಜವಾಬ್ದಾರಿ ರಹಿತ ಬಾಲ್ಯ/ ಮಸ್ತಿ
ಭರಿತ ಯೌವನ/ ಹೊಣೆಗಾರಿಕೆಯ ಗ್ರಹಸ್ಥ್ಯ ಎಲ್ಲ ಕಳೆದು ನಿಶ್ಚಿಂತೆಯ ವೃದ್ಧ್ಯಾಪ್ಯ ಸಧ್ಯಕ್ಕೆ ನಡೆದಿದೆ.ಜವಾಬ್ದಾರಿ
ಮಕ್ಕಳ ಹೆಗಲಿಗೇರಿಸಿ ಬಹಳ ವರ್ಷಗಳಾ ದವು...ನಾನೀಗ ಒಂದು ಚಿಪಗಲ್ಲು... ಎಲ್ಲಾದರೂ/ಏನಾದರೂ ಕುಂಟಿದರೆ
ಅಲ್ಪ- ಸ್ವಲ್ಪ  ಸಹಾಯವಾಗಬಹುದೇ ನೋ...ಉಳಿದಂತೆ ನಾನು- ನನ್ನದು,ಅಷ್ಟೇ
             ಹಾಗೆ ನೋಡಿದರೆ ಸಮಯ 
ಸಾಕಷ್ಟಿದೆ.ಆದರೆ ಏನು ಮಾಡಬೇಕೆಂದರೆ
ಮನಸ್ಸು- ದೇಹದ ಹೊಂದಾಣಿಕೆಯಿಲ್ಲ.
ಮಾಡಬೇಕೆಂದುದು ಕೈಲಾಗುವುದಿಲ್ಲ,ಕೈಲಿ
ಆಗುವುದು ಮಾಡಲು ಬೇಸರ.ಓದು
ಆಸಕ್ತಿ ಕಳೆದುಕೊಂಡಿದೆ.ಬರೆಯುವುದನ್ನ
ಅತ್ಯಂತ ಎಚ್ಚರ ವಹಿಸಿ, ಪ್ರಜ್ಞಾಪೂರ್ವಕ ವಾಗಿ ಉಳಿಸಿಕೊಳ್ಳಲು ಪ್ರಯತ್ನ ನಡೆದಿ ದೆ.ದಿನಾಲೂ ಒಂದು- ಎರಡು ಪ್ಯಾರಾ ಗ್ರಾಫ್ ಆದರೂ ಗೀಚುತ್ತೇನೆ. ಬಿಟ್ಟರದೂ
ಗಾಯಬ್ ಆಗುವುದರಲ್ಲಿ ಅನುಮಾನವಿ ಲ್ಲ.
          ಬರೆಯಲೂ ವಿಷಯ ವಿಶೇಷಗಳಿ ರುವುದಿಲ್ಲ.ಮನಸ್ಸಿಗೆ ಬಂದದ್ದನ್ನು ಗೀಚಿ
Fb ಗೆ ಹಾಕುತ್ತೇನೆ.ಸಮಯ ಕಳೆಯುವು ದು ಒಂದು ಉದ್ದೇಶ.ದಿನಚರಿಯಂತೆ-
ಮನಸ್ಸಿಗೆ ಹೊಳೆದ ವಿಷಯಕ್ಕೆ loud
Thinking - ಅಂದುಕೊಂಡು ದಾಖಲಿಸು ವುದು...ಅವರಿವರಿಂದ ಕಷ್ಟಪಟ್ಟು ಕಲಿತ ದ್ದನ್ನು ಮರೆಯದಿರಲು  ಪ್ರಜ್ಞಾಪೂರ್ವಕ
ವಾದ ಒಂದು ಕಿರು ಪ್ರಯತ್ನ...ಮುಖ್ಯವಾ ಗಿ ತಲೆಕೆಡಿಸುವ ವಿಚಾರಗಳಿಗೊಂದು
ಮುಕ್ತ ಹಾದಿ...ಮನಸ್ಸಿನ ಭಾರ ಕಡಿಮೆ ಯಾಗಲು ಸುಲಭ ಮಾರ್ಗ...
       ಈಗ ಇಷ್ಟನ್ನು ಬರೆದು ತೆಗೆಯಲೂ
ಮೇಲಿನದೇ ಕಾರಣ...
         ಅಷ್ಟೇ...ಮತ್ತೇನಿಲ್ಲ...

No comments:

Post a Comment

ನೀ ಮಾಯೆಯೊಳಗೋ... ನಿನ್ನೊಳು ಮಾಯೆಯೋ..       ‌‌‌ನಾವು ನಮ್ಮ ಸ್ವಂತ ಮನೆ ಬಿಟ್ಟು ಬಾಡಿಗೆಗೆ ಬಂದು ಇಷ್ಟರಲ್ಲೇ ಎರಡು ವರ್ಷಗಳಾಗುತ್ತವೆ.ನಮ್ಮ ಯೋಚನೆ ಯಂತೆ ಎಲ್ಲರ ಸಮಯದ...