ಹೋದುದೆಲ್ಲಿಗೆ...??
ಒಂದು ಪತ್ರವಿಲ್ಲ...
ಒಂದು ಸಾಲಿನ ಸಂದೇಶವಿಲ್ಲ...
ಯಾರೂ ಅರಿಯದ
ಅದಾವ ದೇಶಕ್ಕೆ ನೀ ಹೀಗೆ
ಹೊರಟು ಹೋದೆ..?.
ಎಲ್ಲಿಗೆ??
ಈ ಹೃದಯಕ್ಕೆ ಇಂಥ
ಬಲವಾದ ಪೆಟ್ಟು ಕೊಟ್ಟು,
ನಮ್ಮನಿಲ್ಲೆ ಬಿಟ್ಟು
ಯಾವ ದೇಶಕ್ಕೆ
ನೀ ಹೀಗೆ ಹೊರಟುಹೋದೆ?
ಎಲ್ಲಿಗೆ??
ನೀನು-
ಕೊನೆಗೊಂದು
ನಿಟ್ಟುಸಿರು ಚಲ್ಲಿರಬಹುದು...
ಹೋಗುತ್ತಲೇ ಕೂಗೊಂದು
ಕೊಟ್ಟಿರಲೂ ಬಹುದು...
ನಾವದನ್ನು ಕೇಳಿರಲಿಕ್ಕಿಲ್ಲ...
ಆವಾಗ ನಾವೆಲ್ಲಿದ್ದೆವೋ...!!
ನೀನಾವ ದೇಶಕ್ಕೆ ಹೋದೆಯೋ...!!
ಈ ನೋವು ಜೀವನವಿಡೀ
ನಿಲ್ಲುತ್ತದೆ-
ನಮ್ಮನ್ನು ಕೊಲ್ಲುತ್ತದೆ...
ಪ್ರತಿ ವಸ್ತುವಿನ ಮೇಲೆ
ಕಣ್ಣೀರಿನಿಂದ ನಿನ್ನ ಹೆಸರು
ಬರೆದಿರಬಹುದು...
ಈ ದಾರಿ , ಮನೆ, ಹೂಗಳು
ಎಲ್ಲವಕ್ಕೂ ನಿನಗೊಂದು
ನಮನ ಹೇಳಲಿರಬಹುದು...
ಅದೆಷ್ಟೋ ಮಾತು ಹೊರಬರದೇ
ಎದೆಯಲ್ಲೇ ಉಳಿದವು...
ಇಷ್ಟು ಬೇಗನೇ ನಮ್ಮ
ಕೈ ಕೊಡಹಿಕೊಂಡು ನೀ ಹೋದುದಾದರೂ ಎಲ್ಲಿಗೆ???
ಎಲ್ಲಿಗೆ??
ನೆನಪಿನ ಮುಳ್ಳುಗಳು ಎದೆಗೆ ಚುಚ್ಚುತ್ತಿವೆ...
ನೋವು ತಡೆಯಲಾಗುತ್ತಿಲ್ಲ...
ಕಂಬನಿ ನಿಲ್ಲುತ್ತಿಲ್ಲ...
ಸದಾ
ನಿನ್ನನ್ನು ಹುಡುಕುತ್ತಲೇ ಇದೆ ಪ್ರೀತಿ...
ನಾವು ಹೇಗೆ ತಡೆದುಕೊಳ್ಳಬೇಕು?
ಹೃದಯಕ್ಕೆ ಇಂಥ ಬಲವಾದ
ಹೊಡೆತ ಕೊಟ್ಟು
ನೀ
ಹೋದುದೆಲ್ಲಿಗೆ??
ಎಲ್ಲಿಗೆ???
No comments:
Post a Comment