'ಹಬ್ಬ' - ಅಂದ್ರ ವಾರದಿಂದ ನಮ್ಮದು ಲೆಕ್ಕಾಚಾರ...ಅಡುಗೆ ಏನು ಮಾಡ ಬಹುದು? ಯಾರರ ಊರಿಂದ ಬರಬಹುದಾ? ಹೊಸ ಅಂಗಿ ದಕ್ಕಬಹು ದಾ?ಸಾಲಿ ಸೂಟಿ ಅದನೋ ಹೆಂಗ-?ನೆನೆದಷ್ಟು ಪ್ರಶ್ನೆಗಳು...ತೀರದ ಕಲ್ಪನೆ ಗಳು...ಇಲ್ಲದ ಊಹಾಪೋಹಗಳು...
ಅದರಲ್ಲಿ ಏನು?ಎಷ್ಟು ದಕ್ಕತಿತ್ತೋ ಆ
ದೇವರಿಗೇ ಗೊತ್ತು...ಆದರೆ ಪ್ರತಿ ಹಬ್ಬದ ಮೊದಲಿನ ನಮ್ಮ ಪೃಥಾ ಇದು-ಕಥಾನೂ.
ಅವ್ವಾ/ಅಪ್ಪನ ಚಿಂತಿ ಬ್ಯಾರೆ.
ಹತ್ರ ದುಡ್ಡು ಎಷ್ಟದ? ಅದರಲ್ಲಿ ಏನೇನು
ಕೂಡಿಸಬಹುದು?ಯಾರ್ಯಾರ್ನ ಕರೀಬ
ಹುದು?ಅದಾದ ಮ್ಯಾಲ ಮುಂದ ಆ ಖರ್ಚು ಹೆಂಗ ಸಂಭಾಳಿಸಬಹುದು?
ಮತ್ತೇನೇನೋ!!!
ಯಾವುದಕ್ಕೂ ಯಮನಿಯ ಮ ಅಂತ ಏನೂ ಇರದಿದ್ರೂ," ಮೊದಲಿಂ ದ ಮಾಡಿದ್ದದ, ಬಿಟ್ರ 'ವಾಗತ್ಯ'- ಅಲ್ಲ ಏನು?- ಇಂಥ tag line ಗಳ ಹೆದರಿಕೆ.
ಅಂತೂ ಇದಾವ್ದನ್ನೂ ಕೇಳದ ಹಬ್ಬವೊಂ ದು ಹೊಸ್ತಿಲದೊಳಗ ಬಂದಾಗ ದ್ರಾವಿಡ ಪ್ರಾಣಾಯಾಮ ಮಾಡಿ ಬಗೀಹರಸೋ
ಕಲೆ ಆಗ ಎಲ್ಲರಿಗೂ ಗೊತ್ತಿತ್ತು...
ಹಬ್ಬದ ಮಜಾಕ್ಕ ಇದಾವುದೂ
ಅಡ್ಡ ಬರ್ತಿದ್ದಿಲ್ಲ,..ತಲೆಸ್ನಾನ/ದೇವ- ದೇವತೆಗಳ ಪೂಜಾ/ಸಿಹಿಯೂಟ/ ಬಂಧುಗಳ ಆಗಮನ- ಇವೆಲ್ಲ ಯಥಾ ಪ್ರಕಾರ ನಡಿತಿದ್ವು...ಕೆಲವರ ಮನೆಯಲ್ಲಿ
ಗೌರಿ ಕೂಡಿಸುವ ಪದ್ಧತಿ ಇರದಿದ್ರ, ಇದ್ದವರ ಮನೆಗೆ ಹೋಗಿ, ಪೂಜಾವಿಧಿ
ಅಲ್ಲೇ ಮಾಡಿ, ನಂತರ ಪಂಕ್ತಿ ಊಟದ ಪದ್ಧತಿ ಇರ್ತಿತ್ತು.ಎಲ್ಲರಿಗೂ ಬೇರೆ ಬೇರೆ
ಖಾದ್ಯ ಸಿಕ್ಕು ಹಬ್ಬ ತಾನsss ಭರ್ಜರಿ
ಅನಿಸಿಬಿಡ್ತಿತ್ತು...
ಈಗ ಅದೆಲ್ಲ ಒಂದು ಸುಂದರ ಕನಸು. ಯೋಗ್ಯತಾ ಇದ್ರೂ ಬದಲಾದ ಪದ್ಧತಿಗಳು/ಅಪಾರ್ಟ್ಮೆಂಟ್ ವಾಸ್ತವ್ಯ/
ಎಲ್ಲರೂ ಕೆಲಸಗಳಲ್ಲಿ ವ್ಯಸ್ತರಿರೋದು/ ಸಮಯಾಭಾವ/ಬಂಧುಗಳ ಮನೆಗಳ
ದೂರ- ಅದಕ್ಕೆ ತೆರಬೇಕಾದ ಸುಂಕ- ಇಂಥ ಅಡಚಣಿಗಳಿಂದ ಸಿಕ್ಕಿದಷ್ಟು/ ದಕ್ಕಿದಷ್ಟು- ತತ್ವ ಎಲ್ಲರದೂ...
ಕಾಲಾಯ ತಸ್ಮೈ ನಮಃ
No comments:
Post a Comment