Sunday, 10 August 2025

ನೆನಪಿನಂಗಳದಲ್ಲಿ ಒಂದು ಸುತ್ತು...
 ‌‌
      ನಮ್ಮ ಊರು ರಟ್ಟೀಹಳ್ಳಿಯಲ್ಲಿ ಹುಡುಗಿಯರು ಅಧಿಕೃತವಾಗಿ ಕಲಿಯಲು ಸುರುಮಾಡಿದ್ದು ನಮ್ಮಿಂದಲೇ... ಕೆಲಸವಿಲ್ಲದೇ ಊರು ಸುತ್ತುತ್ತಿದ್ದ ನಮ್ಮನ್ನು ಹಿಡಿದು ಆದಿಕೇಶವ ದೇವಸ್ಥಾನ/ತುಳಜಾ ಭವಾನಿ ಗುಡಿಯಲ್ಲಿ ಕೂಡಿಸಿ ಏನೋ ಕಲಿಸುವ ಪ್ರಯತ್ನ ನಡೆ
ಯುತ್ತಿತ್ತು.ಗಂಡು ಮಕ್ಕಳು ಊರು ಬಿಟ್ಟು
ಸಮೀಪದ ಊರಿನ ಶಾಲೆಗೆ ಹೋಗುವು ದು ಪರಿಪಾಠ..ನಾವು ಓದಿದ್ದಕ್ಕಿಂತ ನಮ್ಮ ಊರು ಸುತ್ತಿ ಕಲಿತದ್ದೇ ಹೆಚ್ಚು...ಹೆಚ್ಚು  ಶಿಸ್ತು ಮಾಡಿದರೆ ಮಕ್ಕಳು ಬರದಿದ್ದರೆ ಅಂತ- ನಿಲುವು ' ಸಡಿಲ'ವಾಗಿತ್ತು..ಹೀಗಾ
ಗಿ ನಾವು ಬರೆದುದರ  ಮೌಲ್ಯಮಾಪನ
ನಮ್ಮ ಯೋಗ್ಯತೆಗಿಂತ ಶಿಕ್ಷಕರ ದಯೆಯ
ಪಾಲೇ ಹೆಚ್ಚಾಗಿರುತ್ತಿತ್ತು..
              ಏಳನೇ ಇಯತ್ತೆಯವರೆಗೂ ಕನ್ನಡದ್ದೇ ಪ್ರಾಧಾನ್ಯ. ಎಂಟನೇ ವರ್ಗದಲ್ಲಿ ABCD ತಿದ್ದಿದ್ದು...ಇಪ್ಪತ್ತಾರು
ಅಕ್ಷರಗಳನ್ನು ತಪ್ಪಿಲ್ಲದೇ ಬರೆದವರು Scholars.ನಾವು ಬಗ್ಗಿ/ಇಣುಕಿ/ ಕಾಪಿ ಮಾಡಿದ್ದರಲ್ಲೂ ಅಕ್ಷರಗಳು ಹಿಂದು ಮುಂದು...class- Rank- prizes- numbers ಕೇಳಿದ್ದು ತುಂಬ ಕಡಿಮೆ.
Pass- Fail-ಎರಡು ಬಿಟ್ಟು ಇತರ ಪದಗಳನ್ನು ಕೇಳಿದ್ದು ನೆನಪಿಲ್ಲ...ತಂದೆ- ತಾಯಿಗಳು report card ನೋಡಿದ್ದು
ಇಲ್ಲವೇ ಇಲ್ಲ...
             ಇಂಥವಳಾದ ನಾನು ನಡುವೆ
ಶಾಲೆ ಹಿಡಿದು - ಬಿಟ್ಟು ಮಾಡಿ ಹತ್ತೊಂಬತ್ತು ವರ್ಷಗಳಿಗೆ PUC ಯನ್ನು ಧಾರವಾಡದಲ್ಲಿ ಓದಿ/ಇಂಗ್ಲಿಷ major ಮಾಡಿ, ಪದವಿ ಪಡೆದು/ ಹತ್ತು ವರ್ಷ ಸಂಸಾರಮಾಡಿ ,ಮೂರು ಮಕ್ಕಳನ್ನು
ಬಿಟ್ಟು ಹೋಗಿ ಕುಮಠಾದಲ್ಲಿ BEd ಮಾಡಿ ಮೂವತೈದಕ್ಕೆ ನೌಕರಿ ಹಿಡಿದದ್ದು 
ಈಗ ಇತಿಹಾಸ...
              ಇತಿಹಾಸದ ಯಾವೊಂದೂ
ವಿವರ ಕಿಂಚಿತ್ತೂ ನೆನಪಿಲ್ಲದ ನನಗೆ ನನ್ನ
ಬಾಲ್ಯ/ ಹರಯದ ದಿನಗಳ ಹಳವಂಡದ
ದಿನಗಳು ಸದಾ ಹಸಿರು.ಒಬ್ಬಳೇ ಕುಳಿತರೆ
ನನ್ನ ಸಂಗಾತಿಗಳು..ಇಂದಿಗೂ ಎಂಬತ್ತರ
ಆಸುಪಾಸಿನ ಎಷ್ಟೋ ಗೆಳತಿಯರೊಡನೆ
ಫೋನಿನ ವಾರ್ತಾಲಾಪ ನನ್ನ ಅತಿಮೆಚ್ಚಿ ನ ಹವ್ಯಾಸ...ಇಷ್ಟು ವರ್ಷಗಳಾದರೂ ಬೆಂಗಳೂರು ನನ್ನನ್ನು ಧಾರವಾಡದಷ್ಟು ಅಷ್ಟಾಗಿ ಕಾಡುವುದಿಲ್ಲವೆಂಬುದೇ ನನಗೆ ಅಚ್ಚರಿ...
           ಈಗ ಧಾರವಾಡದಲ್ಲಿ ನಮ್ಮದೇ
Tuition classes/ Vidya P Hanchinamani P U College/ Vidya P Hanchinamani International School- ಎಲ್ಲವೂ ಇದ್ದು ಎಂಬತ್ಮೂರು ವರ್ಷಗಳ ಅಣ್ಣ ಅವನ್ನೆಲ್ಲ ನೋಡಿಕೊಳ್ಳುತ್ತಿರುವುದು  ಯಾವ ಪುಣ್ಯ ವಿಶೇಷವೋ!!!


              

No comments:

Post a Comment

ನೀ ಮಾಯೆಯೊಳಗೋ... ನಿನ್ನೊಳು ಮಾಯೆಯೋ..       ‌‌‌ನಾವು ನಮ್ಮ ಸ್ವಂತ ಮನೆ ಬಿಟ್ಟು ಬಾಡಿಗೆಗೆ ಬಂದು ಇಷ್ಟರಲ್ಲೇ ಎರಡು ವರ್ಷಗಳಾಗುತ್ತವೆ.ನಮ್ಮ ಯೋಚನೆ ಯಂತೆ ಎಲ್ಲರ ಸಮಯದ...