ಆಗಿನ ನಮ್ಮ ಮನೆ Typical ಮಧ್ಯಮ ವರ್ಗದ ಮಾಧ್ವ ಮನೆ...'' ನಿಯಮಗಳು/ಕಟ್ಟಳೆಗಳು ಹೆಚ್ಚು..ಒಬ್ಬ ಮಡಿ ಅಜ್ಜಿ/ ಎಂಟು ಮಕ್ಕಳ ಅಮ್ಮ/ ಸ್ವಂತ ಶಿಸ್ತಿನ ಅಪ್ಪ- ಸಾಕಲ್ಲ...ನಾವೂ ಏನೂ ಪ್ರಶ್ನಿಸುವ ಹಾಗಿಲ್ಲ. ಏಕೆಂದರೆ
ಆಗಿನ ಮನೆಯೊಡೆಯ ಪ್ರಶ್ನಾತೀತ... ನಮ್ಮದು ಎಲ್ಲದಕ್ಕೂ ಒಂದು ' ಹೂಂ, ಆಯ್ತು'...ಅಷ್ಟೇ...
ಹಬ್ಬಗಳಂಥ ವಿಶೇಷ ಸಂದರ್ಭ ಗಳು ಅಂದರೆ ನಮಗೆ ಕೆಲವು ನಿಯಮ ಗಳು/ಸಿಹಿಯೂಟ...ಮಿಕ್ಕಂತೆ ಯಾರು ಏನು ಹೇಳಿದರೂ ತಲೆಯಾಡಿಸಿ ಪಾಲಿಸುವುದು...ಹೀಗಾಗಿ ಗಣೇಶನ ಹಬ್ಬ ಅಂದರೆ ಮನೆ ಮನೆ ತಿರುಗಿ ಗಣಪತಿ
ನೋಡುವುದು/ಕಜ್ಜಾಯ ಪ್ರಸಾದ/ಗಲ್ಲಿ ಗಲ್ಲಿ ಗೆಳತಿಯರ ಜೊತೆ ತಿರುಗಾಟ/ ಶಮಂತೋಪಾಖ್ಯಾನ ಕೇಳುವುದು- ಇಂಥವೇ ' ಆಟಕ್ಕಷ್ಟೇ...ಲೆಕ್ಕಕ್ಕಿಲ್ಲ- ಮಟ್ಟದ ಚಟುವಟಿಕೆಗಳು...
ನಮಗೆ ಹತ್ತು ವರ್ಷಗಳಾಗಿದ್ರೆ
ಸ್ವಲ್ಪವೇ ಮೇಲ್ದರ್ಜೆ...ಕೆಲವು ಜವಾಬ್ದಾರಿ ಯ ಹೊರಗಿನ ಕೆಲಸಗಳು - ಆದರೆ ರೊಕ್ಕದ ಜವಾಬ್ದಾರಿಯಿಲ್ಲ ...ಅಲ್ಲಿ ಹೋಗಿ ಬಾ+ ಅದು- ಇದನ್ನು ತೆಗೆದು ಕೊಂಡು ಬಾ/ಅವರಿವರನ್ನು ಕರೆದು ತಾ-
ಇಂಥ ಓಡಾಟದ ಮಹಾ ಕಾರ್ಯಗಳು...
ಊಟ+ ಮಜಾ+ ತಿರುಗಾಟ- ಹಿರಿಯರ
ಅಪ್ಪಣೆಗಳ ಪಾಲನೆ...ಅಷ್ಟೇ...
ಇಪ್ಪತ್ತು ಆಯಿತೋ, ಎಣಿಸಿ
ಹಣ ಕೊಡುವುದು/ ಕೆಲಸಗಳಾದ ಮೇಲೆ
ಕಟ್ಟುನಿಟ್ಟಾಗಿ ಲೆಕ್ಕಾಚಾರ- ಇವೆಲ್ಲವೂ ನಡೆದರೂ ಎಲ್ಲರ ಮೇಲೂ ಒಂದು ಹದ್ದಿನ ಕಣ್ಣು...ಅಪ್ಪನಿಂದ ಒಂದು certificate ಸಿಕ್ಕಾಗಲೇ ಎದೆ ಬಡಿತ ಮಾಮೂಲಿಗೆ... ಆದರೂ ನಮ್ಮಿಂದ ಪ್ರಶ್ನೆ+ ಎದುರುತ್ತರ ಬಿಲ್ಕುಲ್ ಇಲ್ಲವೇ ಇಲ್ಲ...
ಮೂವತ್ತರ ಹೊತ್ತಿಗೆ ವ್ಯಕ್ತಿಗಳಲ್ಲಿ/
ಮನೆಗಳಲ್ಲಿ/ಹಣಕಾಸಿನಲ್ಲಿಯ ಕೊಂಚ ಬದಲಾವಣೆ/ಗಂಡುಮಕ್ಕಳ ಧ್ವನಿಯ
ಗಡಸುತನ - ಹೆಂಡತಿಯರೂ ಸ್ವಲ್ಪ
Seasoned- ಆದ ಕಾರಣದಿಂದ ಮನೆ ಯಲ್ಲಿ ಎರಡು- ಮೂರು ಬೇರೆಯೇ
ಧ್ವನಿಗಳೂ ಸ್ಥಾನ ಪಡೆದರೆ ಆಶ್ಚರ್ಯವಿ
ರಲಿಲ್ಲ...
ನಲವತ್ತಕ್ಕೆ ಮಗ- ಅಪ್ಪನಂತಾಗು ವ ಲಕ್ಷಣಗಳು ಕಾಣತೊಡಗಿದರೆ ಸಿನೇಮಾದ ಮಧ್ಯಂತರದ ನಂತರದ ಬದಲಾಗುವ ಕೆಲವು ಸೀನುಗಳು ಅಷ್ಟೇ. ಮೊದಲಿನ ' ಅಪ್ಪ' ಈಗ ಅಜ್ಜ...ಒಂದು ಕುರ್ಚಿಯ ಮೇಲೆ ಕುಳಿತು ಆಗಾಗ ಧ್ವನಿ ಕೇಳಿಸುವುದು- ನಮಸ್ಕಾರಗಳನ್ನು ಪಡೆಯುವುದು- ಪುಕ್ಕಟೆ ಸಲಹೆ, ಮಕ್ಕಳು ಕೇಳಿದರೆ...ಹೀಗೆಯೇ...ನಂತರದ್ದು ಮೊದಲಿನದರ ಕೊಂಚ ಬದಲಾದ version...ಅಷ್ಟೇ...
ಆದರೆ ಈಗಿನದು ಸಂಪೂರ್ಣ ಭಿನ್ನ ಅಪ್ಪ+ ಮಕ್ಕಳು ಗೆಳೆಯರಂತೆ drive ಮಾಡಿಕೊಂಡು ಹೋಗಿ/ಯಾರಿಗೆ ಏನು ಬೇಕೋ ತಂದು/ಹೇಗೆ ಬೇಕೋ ಹಾಗೆ ಹಬ್ಬ ಮಾಡಿದರೆ ಗೆದ್ದಂತೆ...ಹಬ್ಬ
ಹೀಗೆಯೇ ಇರಬೇಕು ಎಂಬುದು ಸ್ವಲ್ಪು
ಕಡಿಮೆಯಾಗಿ ಹಬ್ಬವಾದರೇನೇ ಹಬ್ಬ
ಎಂಬಂತಾಗಿದೆ...ಅದನ್ನು ಎಲ್ಲರೂ
ಒಪ್ಪಿಕೊಂಡೂ ಆಗಿದೆ...
ಬದಲಾವಣೆಯೊಂದೇ ಶಾಶ್ವತ...ಬಾಕಿ ಎಲ್ಲವೂ ಪರಿವರ್ತಿತ...
No comments:
Post a Comment