' ಇರುವು'- ಇಳಿಜಾರಿನಲ್ಲಿದೆ.ಎಂಬತ್ತು
ಕಡಿಮೆ ವಯಸ್ಸೇನೂ ಅಲ್ಲ...ಅದು ಒಂದು ಸಂಖ್ಯೆಯಷ್ಟೇ ಇರಬಹುದು ಹಲವರಿಗೆ,ಆದರೆ ಮೊದಲರ್ಧದಲ್ಲೇ ಹೆಚ್ಚು 'ಭಾಗದೌಡ್' - ಆಗಿದ್ದರೆ, ಮಕ್ಕಳೆ ಲ್ಲ ಬೇಗ settle ಆಗಿ ತಮ್ಮ ತಮ್ಮ ಪಾಡಿಗೆ ಹಾಯಾಗಿದ್ದರೆ,ಅತೀ ಮಹತ್ವಾ ಕಾಂಕ್ಷೆಯ ಆಸೆ ಇಲ್ಲದೇ ಕೊನೆಗಾದರೂ ಶಾಂತಿ- ನೆಮ್ಮದಿ ಇದ್ದರೆ ಬೇಕಾದಷ್ಟು ಆಯಿತು - ಅನ್ನುವವರಿಗೆ ಬದುಕಿನ ನಿರೀಕ್ಷೆ ಬೇರೆಯೇ ಇರುತ್ತದೆ.
ಬಹುಶಃ ನಾನು ಆ ಕೆಟೆಗರಿಗೆ
ಸೇರಿದವಳು ಎನಿಸತೊಡಗಿದೆ...ಬೆಳಿಗ್ಗೆ
ಹೋಗುವವರು ಹೋಗಿಯಾದ ಮೇಲೆ
ನನ್ನ ಪ್ರಪಂಚ ತೆರೆಯುತ್ತದೆ...ಬಾಲ್ಕನಿಗೆ
ಬಂದು ಕುಳಿತು ಅದರಿಂದ ತೆರೆದುಕೊಳ್ಳು ವ ಮೂರು ದಾರಿಗಳು, ಅವುಗಳ
ಮುಖಾಂತರ ಕಣ್ಣೆದುರು ಕಾಣುವ ಜಗತ್ತು ನನ್ನನ್ನೂ ದಂಗಾಗಿಸುತ್ತದೆ. ಭರ ಭರ ಓಡುವ ಕಾರುಗಳು/ ಮಕ್ಕಳನ್ನು
ಹೊತ್ತು ಬಸ್ಸು ಹತ್ತಿಸಲು ಓಡುವ ಪಾಲಕ ರು/ಸ್ವಿಗ್ಗಿ- ಝೊಮ್ಯಾಟೋ ದ boys/ಕೈಲಿ
ಮೊಬೈಲ್ ಹಿಡಿದು ಅದರಲ್ಲಿ ಮುಳುಗಿದ
ಕೆಲಸದ ಹುಡುಗಿಯರು/ಗುಂಪಾಗಿ ಬರುವ ಕೆಲಸದವರ identify ಗುರುತಿಸಿ
ಒಳಬಿಡುವ ಸೆಕ್ಯುರಿಟೀಸ್/ರಸ್ತೆ signal ದಲ್ಲಿ ಸಿಕ್ಕು ಬಿಸಿ ಹಂಚಿನಮೇಲೆ ಕುಳಿತಂ ತೆ ಒದ್ದಾಡುವ ಕಾರ್ ಪಯಣಿಗರು- ಏನೂಂತ- ಎಷ್ಟೂಂತ ಹೇಳೋದು!!!ಮನೆಯ ಜನರಿಗೆ ಹತ್ತು ನಿಮಿಷಕ್ಕೂ ಹೆಚ್ಚು ಸಿಕ್ಕದ ಇವರು ರಸ್ತೆಯ
ಮೇಲೆಯೇ ಕಳೆದು ಹೋಗುವ ಪರಿ ವಿಷಾದನೀಯ...
ಇದನ್ನೆಲ್ಲ ನೋಡಿದಾಗ ಮನೆಗೂ- ನಮ್ಮ ಕೆಲಸಗಳಲ್ಲೂ ಸರಿ ಸಮಯ ವ್ಯಯಿಸಿ ಬದುಕಿನ ಬಹುಭಾಗ ಕಳೆದು, ಬರುವ pension ಹಣದಲ್ಲಿ
ತಕ್ಕಮಟ್ಟಿಗೆ ಆರಾಮಾಗಿ ಬದುಕುವ ನಾವು ಅದೃಷ್ಟಶಾಲಿಗಳೋ- ಮನದಲ್ಲಿ
ಬರುವ ಮೊದಲೇ ಪ್ರತಿಯೊಂದೂ ಕೈ ಯಲ್ಲಿ ಬಂದು ಬೀಳುವ ಭಾಗ್ಯ ಅನುಭವಿಸುತ್ತಿರುವ ನಮ್ಮ ಮಕ್ಕಳು
ಹೆಚ್ಚು ಸುಖಿಗಳೋ ಎಂಬುದಕ್ಕೆ ಉತ್ತರ
ಹುಡುಕುತ್ತಿದ್ದೇನೆ...ಸಕ್ಕಿಲ್ಲ...
No comments:
Post a Comment