ನಿಯಮಗಳ ಅರಿವಿರಲಿಲ್ಲ...ಏನು ಮಾಡಿದರೆ ಏನೋ ಎಂಬ ಧಗಧಗಿ... ಹಬ್ಬ ಬಂದರೆ ಒಂದು ವಾರದಿಂದ ಬಿ ಪಿ ಜಾಸ್ತಿ...
ನಮ್ಮದೇ ಚಾಳಿನಲ್ಲಿ ನಮ್ಮ ಸಂಬಂಧಿಗಳವೇ ಎರಡು- ಮೂರು ಮನೆಗಳಿದ್ದರೂ ಹೊಸ ಸೊಸೆ ಎಂಬ ಬಿರುದಿನ ಭಯ...ಅಂತೂ ಅಲ್ಲಲ್ಲಿ ಅವರನ್ನೇ ಕೇಳಿ ತಿಳಿದದ್ದು ಮಾಡಿ ಹಬ್ಬ ಮುಗಿಸಿದ ಮೇಲೆಯೇ ನಿರಾಳ...
ಐದೇ ವರ್ಷಗಳಲ್ಲಿ ಎಲ್ಲವನ್ನೂ ತಿಳಿದುಕೊಂಡು ವಿದ್ಯುಕ್ತವಾ ಗಿ/ಪದ್ಧತಿಯಂತೆ ಎಲ್ಲವನ್ನೂ ಸಂಭಾಳಿಸ
ತೊಡಗಿ ನಾಲ್ಕು ವರ್ಷ ಕಳೆಯುವುದರಲ್ಲಿ
ಮನೆಯವರು ತೀರಿಕೊಂಡು ಎಲ್ಲ ನಿಂತು
ಹೋಯಿತು...ಚಿಕ್ಕ ಮಕ್ಕಳು.ಅಂದಿನಿಂದ ಯಾರಿಂದಲೋ ಅಷ್ಟಿಷ್ಟು ನಮ್ಮದೇ ಸಮಾಧಾನಕ್ಕೆ ಹಬ್ಬಗಳನ್ನು ಮಾಡುತ್ತ
ಹೋದದ್ದೇ ಬಹಳ...
ಮಗ ಅಮೇರಿಕಕ್ಕೆ ಹಾರಿ, ಹೆಣ್ಣುಮಕ್ಕಳು ಗಂಡನ ಮನೆ ಸೇರಿದ
ಮೇಲೆ ನಾನು ಯಾವಾಗ ಎಲ್ಲಿರುತ್ತೇನೋ /ಅಲ್ಲಿ ಹೇಗಿರುತ್ತದೋ ಹಾಗೇಯೇ ಒಗ್ಗಿಕೊಳ್ಳುತ್ತ ಇದ್ದುದು ಸಧ್ಯದ ವಾಸ್ತವ..
ನನಗೆ ಬರೀ ಗಂಡು ಮೊಮ್ಮಕ್ಕಳು...
ಹೀಗಾಗಿ ಹಬ್ಬಗಳು ಆದರೂ ಸಪ್ಪೆ...ಸಪ್ಪೆ.
ಗಣೇಶನ ಹಬ್ಬ ಮಾತ್ರ ಭರ್ಜರಿ.ಮನೆಯಲ್ಲೇ ಆರು ಗಣಪತಿಗಳು..
No comments:
Post a Comment