ಬೆಳಕೆಳೆದು ತಂದು.
ರಾತ್ರಿಯನೇ ಹಗಲಾಗಿ
ಇಂದು ಬದಲಿಸಿದೆ
ಬಲದಿಂದ,ಛಲದಿಂದ
ಮುನ್ನುಗ್ಗಿ ನಡೆದು
ಮನಸಿನಾಳದಲೆ
ಸಿಡಿಲಬ್ಬರವ ತಡೆದೆ...
ಒಳಗೆನಿತು ನೋವಿದೆ
ಎಲ್ಲರಿಗೂ ಗೊತ್ತು...
ಹಿಡಿದಿಟ್ಟು ಒಳ್ಳೆಯದ
ಕೊಡುವುದೂ ಗೊತ್ತು...
ನಿನ್ನೊಡಲ ಕರುಣೆಗೆ
ಮಾಯುವಿಕೆ ಮದ್ದು..
ಬಲಹೀನ ಗಳಿಗೆಗಳ
ಧೈರ್ಯದಲಿ ಗೆದ್ದು..
ಪ್ರತಿ ಮಗುವೂ ಬೆಳೆದಾಗ
ಕನಸುಗಳು ಬೆಳೆಯುವವು...
ಧನ+ಕನಕ ಬದಿಗಿಟ್ಟು
ನಿಜದೊಲವು ಹರಿವಂತೆ...
ಮನದಾಳದೊಳಗಿಂದ
ಎದೆ ತುಡಿತ ಬಿಚ್ಚಿಟ್ಟು
ಬದುಕನಣಿಗೊಳಿಸಲು
ಎಲ್ಲವನೂ ತೆರೆವಂತೆ...
ನೀನೆದ್ದು ನಿಂತ ಪರಿ
ಎತ್ತರೆತ್ತರಕೇರಿ
ಹೊಳೆವ ನಕ್ಷತ್ರದೊಲು
ಎಲ್ಲ ಎಲ್ಲೆಯ ಮೀರಿ...
ನಿನ್ನುಸಿರು/ನಿನ್ಹೆಸರು
ನಿನ್ನ ಜೀವನದ ಗುರಿ
ಅನುಗಾಲ ಬೆಳೆಬೆಳೆದು
ಮೂಡಿಸಲಿ ಹೊನ್ನಗರಿ...
No comments:
Post a Comment