Wednesday, 10 September 2025

 ಹೀಗೊಂದು ಫೋನಾಯಣ...
     
     ನಮಗೆ ಫೋನು ಮೊದಲಿನಿಂದಲೂ
ತುಟ್ಟಿ..ಮಗ ಅಮೇರಿಕಕ್ಕೆ ಹೋದಾಗಲೂ
ಪಕ್ಕದ ಮನೆಯಲ್ಲಿನ ನಂಬರ್ ದಿಂದ 
ಮಾತಾಡಿ ಅಲ್ಲಿ ಸಮಯದ ಸಮಸ್ಯೆ ಯಾದಾಗ ಒಂದು land line ಬಹಳಷ್ಟು
ಕಷ್ಟಪಟ್ಟು ಪಡೆದಾಯ್ತು.ಅದರಲ್ಲೂ
ಫೋನು ring ಆದಾಗ ತೆಗೆದುಕೊಂಡು
ಮಾತನಾಡುತ್ತಿದ್ದುರಿಂದ ಹೆಚ್ಚೇನೂ
ಕಲಿಯುವ ಕಾರಣ ಬರಲೇಯಿಲ್ಲ...
   
     ‌‌‌‌  ನಂತರದ ಮೊಬೈಲ್ ಅಂಗೈ ಮಾತ್ರ
ದಲ್ಲೇ ಹಿಡಿಯಬಹುದಾದ ಪುಟ್ಟ ನೋಕಿಯಾ...ಅದರ‌ ಕಾಲ ಮುಗಿದು
Smart phone ಬಂದ ಮೇಲೆ/ನಾನೂ 
ನಿವೃತ್ತಿಯಾದ ಮೇಲೆ/ಮೊಮ್ಮಕ್ಕಳು
ದೊಡ್ಡವರಾದ ಮೇಲೆಯೇ ದಿನಕ್ಕೊಂದು
ಹೊಸತು ಕಲಿತು/ಬಳಸಿ/ಐದು ಪುಸ್ತಕ
ಗಳನ್ನು ಅದರಲ್ಲಿಯೇ type ಮಾಡಿ
ಪ್ರಿಂಟ್ ಹಾಕಿಸುವ ಹೊತ್ತಿಗೆ ನನಗೆ
೭೫ ಕೂಡ ಮುಗಿದು/ಫೋನಿನಲ್ಲಿ ಕ್ಷಣ
ಕ್ಕೊಂದು ಬದಲಾವಣೆ/ಸುಧಾರಣೆ ಯಾಗಿ ಮಂಕಾಗುತ್ತಿದ್ದ ಬುದ್ಧಿಗೆ ಎರಡನೇ ಬಾರಿ ಸವಾಲಾಗಿದೆ...

       ‌ ‌  ‌ಒಂದು ಫೋನು ಖರೀದಿಸಿ/ ಹೊಂದಿಸಿಕೊಂಡು/ನನ್ನದಾಯ್ತು ಅನ್ನುವ ಹೊತ್ತಿಗೆ ಅದು ಹೇಗೋ ಬಟನ್ ಒತ್ತಿಯೋ/ ಕಲಿತದ್ದು confuse ಆಗಿಯೋ / ಯಾವುದೋ App ಎಲ್ಲಿಯೋ ಹೋಗಿಯೋ ಗೊಂದಲ.
ಕಣ್ಣಿನ ತಕರಾರು additional nuisance..spelling ತಕರಾರು ಇನ್ನೊಂದು ಅಧ್ವೈರ್ಯ...delete ಮಾಡುವುದು/ ತಿದ್ದಿ ಬರೆಯುವುದು/ ಪುನಃ‌ post ಮಾಡುವುದು ಒಗ್ಗದ/ ಒಲ್ಲದ ಕೆಲಸ...ಬಿಟ್ಟು ಬಿಡಬೇಕೆಂದರೆ
ಸಮಯ ಕಳೆಯುವ ತಲೆಬೇನೆ...

      ‌‌     ಇದು ನನ್ನ ಇಂದಿನ ಬಹು ದೊಡ್ಡ
ಸಮಸ್ಯೆ... ಕಳಿಸಿದ್ದು ಹೋಗಿರುವುದಿಲ್ಲ. ಬೇಕೆಂದದ್ದು ಸರಿ ಪೋಸ್ಟ ಆಗುವುದಿಲ್ಲ...
ಆದದ್ದು ಎಲ್ಲೋ ಹೋಗಿರುತ್ತದೆ.ಮತ್ತೆ
Delete ಮಾಡಿದರೆ ಮೂಲವೇ ಹೋಗಿರುತ್ತದೆ...ಮತ್ತೆ ಬರೆಯ ಹೋದರೆ
ಎಲ್ಲೋ ಎಡವಟ್ಟು...ಈಗ ಬರೆಯಬೇಕೆಂ ದರೆ ತಲೆಯಲ್ಲಿ ಉಳಿದಿರುವುದಿಲ್ಲ.ಅಂಥ
ಸ್ಥಿತಿಯಲ್ಲಿ ಏನಪ್ಪಾ  ಮಾಡೋದು!!?

        ‌ 

No comments:

Post a Comment

 ಹೀಗೊಂದು ಫೋನಾಯಣ...            ನಮಗೆ ಫೋನು ಮೊದಲಿನಿಂದಲೂ ತುಟ್ಟಿ..ಮಗ ಅಮೇರಿಕಕ್ಕೆ ಹೋದಾಗಲೂ ಪಕ್ಕದ ಮನೆಯಲ್ಲಿನ ನಂಬರ್ ದಿಂದ  ಮಾತಾಡಿ ಅಲ್ಲಿ ಸಮಯದ ಸಮಸ್ಯೆ ಯಾದಾಗ...