Friday, 12 September 2025

     ಇತ್ತೀಚೆಗೆ ನನಗೆ ಹೊಸ ಹೊಸ ಪಟ್ಟು ಗಳು  ಮೈದುಂಬುತ್ತಿವೆ...ಓದುವುದಿಲ್ಲ/ TV ನೋಡುವುದಿಲ್ಲ/ಹೊರಗೆ ಹೋಗು ವುದೂ ಕಡಿಮೆ...ಅದೇ ಮೊಬೈಲ್ ನ್ನು
ಪದೇ ಪದೇ ತೆರೆದು ಕ್ರಮಬದ್ಧತೆ ಇಲ್ಲದೇ
ಬೇಕೆನಿಸಿದ್ದನ್ನು ತೆರೆದು/ನೋಡಿ/ಸ್ವಲ್ಪೇ ಸಮಯದಲ್ಲಿ ಬದಲಿಸಿ, ತಲೆಗೆ ಏನೂ ಹೋಗದೇ ಕೊನೆಗೆ ಬೇಸತ್ತು close ಮಾಡುವುದು...ಹೀಗೇ ಹರಯದಲ್ಲಿ ಆಗುತ್ತದೆ ಎಂದು ಕೇಳಿದ್ದೇ...ಇರಬಹುದು
-ನೆಲೆಕಾಣದೇ ಹತ್ತು- ಹಲವಾರು ವಿಷಯ
ತಲೆತಿನ್ದುವಾಗ ಅದು ಸಾಮಾನ್ಯ.ಆದರೆ
ನಾನು???

           ಮಾಡಬೇಕಾದುದೆಲ್ಲ ಮಾಡಿ ಮುಗಿಸಿ/ಅಕ್ಷರಶಃ outdated ಆದವಳು.
ಪ್ರಯತ್ನ ಮೀರಿದ ಆಶೆಯ ಹಂಗು ಎಂದೂ ಇಲ್ಲ.ಬಾಲ್ಯದಿಂದಲೂ ಒಂದು
ಚೊಕ್ಕ ಚೌಕಟ್ಟಿನಲ್ಲಿಯೇ ಬೆಳೆದವಳಿಗೆ
ಅದೇನು ಸಿಕ್ಕರೂ ಅದು ಪ್ರಸಾದವೇ!!

  ‌‌‌‌         ಆದರೆ ದೇಹ- ಮನಸ್ಸುಗಳ ಮೇಲೆ ವಯಸ್ಸಿನ ಛಾಪು ಮೂಡತೊಡಗಿ ದರೆ ಒಂದು ರೀತಿಯ ಉದಾಸ/ಅಲಕ್ಷ/ ನಿರುತ್ಶಾಹ/ ಬೇಸರಿಕೆ-ಗಳು ನಮ್ಮನ್ನು ಆಳುತ್ತವೆ.ಏನು ಮಾಡಬೇಕೆಂದರೂ ಅರ್ಜಿ ಹಾಕಿ/ ಮನವೊಲಿಸಿ ಪಡೆದ ಪರವಾನಿಗೆ ಹೆಚ್ಚುಕಾಲ ಉಳಿಯುವು ದಿಲ್ಲ...
ತಲ್ಲಣಿಸದಿರು ಕಂಡ್ಯ...
         
    ಹಾಗಾದಾಗ ಓದು ಅರ್ಧ,ಬರೆಯು ವುದು Nil...ವಿಚಾರಗಳು ಗತಿ ಕಾಣುವು ದಿಲ್ಲ, ನಿದ್ರೆ ದೂರ, ಏನೇ ಮಾಡಿದರೂ
ಕ್ಷಣಮಾತ್ರದ ನಿಲುವು...ಮನಸ್ಸಲ್ಲಿ ಗಡಿ
ಬಿಡಿ, ಕೊನೆಗೆ ಎಲ್ಲವೂ ಎಲ್ಲೋ ಅಲ್ಲೆ...

  ‌‌           ವಯಸ್ಸು ಬರಿ ಸಂಖ್ಯೆ- ಎಂದು
ಅಂದುಕೊಳ್ಳುತ್ತೇವೆ..ಆದರೆ ಅದು ವಯಸ್ಸಿಗೂ ಗೊತ್ತಾದರೆ ಸರಿ...ಅದೇ
ಆಗದಿದ್ದರೆ...? ಈಗ ಆದ ಹಾಗೆಯೇ
ಆಗುವುದು...ಹಿಡಿದ ಗ್ರಹಣ ಬಿಡಬೇಕು..
ಅದಕ್ಕಾಗಿ ಕಾಯಬೇಕು...ಕೆಲವು ಸಂಗತಿಗಳು ನಮ್ಮನ್ನು ಮೀರಿರುತ್ತವೆ. ಅವನ್ನು ನಾವು ಮೀರುವ ಕೆಲಸ ಮಾಡಬಾರದು...
ಅಷ್ಟೇ...

No comments:

Post a Comment

     ಇತ್ತೀಚೆಗೆ ನನಗೆ ಹೊಸ ಹೊಸ ಪಟ್ಟು ಗಳು  ಮೈದುಂಬುತ್ತಿವೆ...ಓದುವುದಿಲ್ಲ/ TV ನೋಡುವುದಿಲ್ಲ/ಹೊರಗೆ ಹೋಗು ವುದೂ ಕಡಿಮೆ...ಅದೇ ಮೊಬೈಲ್ ನ್ನು ಪದೇ ಪದೇ ತೆರೆದು ಕ್ರ...