Saturday, 13 September 2025

          ನನ್ನ ಅಮ್ಮ/ಅಪ್ಪ ಇಬ್ಬರದೂ
ದೊಡ್ಡ ಕುಟುಂಬಗಳು.ಹೀಗಾಗಿ ಎರಡನೇ
ತಲೆಮಾರಿನಲ್ಲೂ ಸಾಕಷ್ಟು ಜನರಿದ್ದಾರೆ. ಅವರಲ್ಲಿ ಸಾಹಿತಿಗಳು/ಲೇಖಕರು/ ಗಾಯಕರು/ಕಲಾಕಾರರು/ಪಾಕ ಪ್ರವೀಣ ರು ಎಲ್ಲರೂ ಇದ್ದರೂ ನೃತ್ಯದ ಕಡೆ ಒಲವು ಇದ್ದವರು ಇಲ್ಲವೇ ಇಲ್ಲ.ಹೀಗಾಗಿ
ನೃತ್ಯದ ಬಗೆಗೆ ಆಸಕ್ತಿ/ಒಲವು/ಅಭಿರುಚಿ
ನಮಗಾರಿಗೂ ಇಲ್ಲ ಎನ್ನುವಷ್ಟು ಸುದ್ದಿ...
          ಬೆಂಗಳೂರಿಗೆ ಬಂದ ಮೇಲೆ ಮಕ್ಕಳ ಸ್ನೇಹಿತ ಬಳಗದಲ್ಲಿ ಎಲ್ಲ ಬಗೆಯ
ಅಭಿರುಚಿಯ ಮಕ್ಕಳು ಈಗ ಇದ್ದು  ಎಲ್ಲ ಬಗೆಯ ಕಾರ್ಯಕ್ರಮಗಳನ್ನೂ ಒಮ್ಮಿಲ್ಲ
ಒಮ್ಮೆ ನೋಡುವುದು ಸಹಜವೆನಿಸಿಬಿಟ್ಟಿ ದೆ...ಇಂದು ಅಂಥದೇ ಒಂದು ದಿನ...
     ‌‌       ‌‌‌‌‌ ಕುಟುಂಬ ಸ್ನೇಹಿತರ ಮಗಳಾದ ಸೃಷ್ಟಿ ಪಂಢರಿ-ಯ ನೃತ್ಯ ಕಾರ್ಯಕ್ರಮಕ್ಕೆ ಮಗಳ ಜೊತೆ ಹೋಗಿ ಬಂದದ್ದೇ ಸುದ್ದಿ.
ಅನುಮಾನಿಸುತ್ತ ಮಗಳ ಒತ್ತಾಯಕ್ಕೆ
ಹೋದರೂ ಎರಡು ತಾಸಿನ outing
ನಂತರ ಸಾಕಷ್ಟು ಉತ್ಸಾಹ ತುಂಬಿತು/
ಗುರುತಿನವರ ಭೇಟಿಯಾಯಿತು/ಕೆಲವು ಹೊಸಬರ/ನಮ್ಮ ಹುಬ್ಬಳ್ಳಿ ಧಾರವಾಡ ದವರ  ಪರಿಚಯವಾಯಿತು.ಒಂದು
ಹೊಸ ಹೋಟೆಲ್ದಲ್ಲಿ ಲಘು ಉಪಹಾರ
ವಾಗಿ Weekend ನ ಮೊದಲ ದಿನ ಸಂಪನ್ನವಾಯ್ತು...




No comments:

Post a Comment

          ನನ್ನ ಅಮ್ಮ/ಅಪ್ಪ ಇಬ್ಬರದೂ ದೊಡ್ಡ ಕುಟುಂಬಗಳು.ಹೀಗಾಗಿ ಎರಡನೇ ತಲೆಮಾರಿನಲ್ಲೂ ಸಾಕಷ್ಟು ಜನರಿದ್ದಾರೆ. ಅವರಲ್ಲಿ ಸಾಹಿತಿಗಳು/ಲೇಖಕರು/ ಗಾಯಕರು/ಕಲಾಕಾರರು/ಪಾಕ...