Thursday, 15 February 2018

ವಚನ

ವಚನ
ನೀನಿಲ್ಲ ಎಂದು
ನಾ ಮರುಗಲೇಕೆ?
ನೀನಿದ್ದ ಠಾವ ಬಲ್ಲೆ..
ನಿನ್ನೊಲುಮೆ ಬಳ್ಳಿ
ಕುಡಿಮೂರ ಬಿಟ್ಟು
ತಡದssದ ನನ್ನ ನಿಲ್ಲೆ..
ನಿನ್ನಿಂದ ನನ್ನ
ಕಿರುಹೆಜ್ಜೆ ಮೂಡಿ
ಆದೀತು ನಮ್ಮ ಮಿಲನ...
ಅಲ್ಲೀಯತನಕ
ನಾನಿಲ್ಲೆ ಎಂಬುದನ
ನಾ ನಿನಗ ಹೇಳಲೇನ?
ನೀನಿಲ್ಲ ಗೆಳೆಯ
ನಿನ ಪ್ರಾಣ ಇಲ್ಲೆ
ಎಂಬುದನ ಮರೆಯಲ್ಯಾಂಗ?
ನಿನ್ನ ಕಿರುರೂಪ
ನನ ಕೈಗೆ ಇತ್ತು
ಹೊರಟಾರ ತಡೆಯಲ್ಹ್ಯಾಂಗ?
ಮರಿಹಕ್ಕಿ ಮೂರು
ಹಾರೂದ ಕಲಿಸಿ
ನಾ ನಿನ್ನ ಸೇರತೇನಿ..
ಎಂಬುದಕ ನನ್ನ ಈ
ನುಡಿಗವನ ಸಾಕ್ಷಿ
ಮನಮುಟ್ಟಿ ಹೇಳತೇನಿ...

No comments:

Post a Comment

  ಬದುಕೆಂದರೆ ಸುಮ್ಮನೇನಾ???              ಸಾಮಾನ್ಯವಾಗಿ ಬದಲಾವಣೆಗೆ ಹೆಚ್ಚು ಅವಕಾಶವಿರದ ಬೆಂಗಳೂರು ಬದುಕಲ್ಲಿ ಒಂಚೂರೇ ಚೂರು change. ಮೈಸೂರಿನಲ್ಲಿ ಬ್ಯಾಂಕ್ನಲ್ಲಿ ...