Wednesday, 14 February 2018

ಪ್ರೀತಿ_ ಪ್ರೇಮ

ಪ್ರೀತಿ-ಪ್ರೇಮ
ಪ್ರೀತಿ- ಪ್ರೇಮ ಏನೇ ಇದ್ರೂ
' ಮುಚ್ಚಿದ ಮೊಗ್ಗಿದ್ಧ್ಹಾಗೆ '....
ತಾನೆ ತಾನು  ಅರ್ಳ್ಕೊಬೇಕು
ಆಗಿನ್ ಕಾಲ್ದಾಗ್ ಹಾಗೇ.....
                              
ಅಂಥಾದ್ದೆಲ್ಲಾ ಈಗೇನಿಲ್ಲ
ಎಲ್ಲಾ    ಬಟಾಬೈಲು..
ಪ್ರೀತಿ ತೋರ್ಸೋಕೂ
ಒಂದಿನ ಬೇಕು - ಇಡೀದಿನಾ ಹುಯ್ಲು
                    ..
ಯಾರದೂ ತಪ್ಪು ಅನ್ನಂಗಿಲ್ಲ
ಒಬ್ಬೋಬ್ರುದು ಒಂದೊಂದ್ ರೀತಿ...
ಬದಲಾದ್ ಕಾಲದ್ ಜೊತೆ-
ಜೊತೆಗೇನೆ ಬದಲಾಗ್ತೈತಿ ಪ್ರೀತಿ...
                                  
ಪ್ರೀತಿ ಅಂದ್ರೆ ಎದೆಗೂಡಲ್ಲಿ
ಬೆಚ್ಗಿಂದೊಂದು ಭಾವ...
ತೋರ್ಕೆ ಇದ್ರೂ ಮಿತವಾಗಿರ್ಲಿ.
  ಹಿತವಾಗಿರ್ಲಿ ಜೀವ...

No comments:

Post a Comment

"ಬರ್ತೇನಿ, ಪಲ್ಲಣ್ಣ"ಒಂಟಿ ಆಲಾಪ... "ಬರ್ತೇನಿ, ಪಲ್ಲಣ್ಣ" "ಹೋಗಿ  ಬಾ, ಬರ್ತಾ ಇರು..." "ಹೂಂ, ಈಗ ಯಾರಾದರೂ ಜೊತೆ ಇರದೇ ಬರೋ...