Friday, 23 February 2018

ನಮನ

ಯಾವ ಜನುಮದ ನಂಟೋ
ಈ ಜನುಮದಲೂ ಮೊಳೆದು
ಬೆಳೆದು ಹೆಮ್ಮರವಾಯ್ತು ಪಡೆದು ಪ್ರೀತಿ...
ನೇಹದಲಿ ಮೀಯಿಸಿತು..
ಸಂತಸದಿ ತೋಯಿಸಿತು..
ಇದು ಯಾವ ಅನುಬಂಧ..ಎಂಥದಿದು
ರೀತಿ...
ಸುಖದಲ್ಲಿ ಸವಿಯರೆದು
ದಃಖದಲಿ ಹನಿಗರೆದು
ನಿನ್ನೊಡನೆ ನಾನೆಂದು ಬಲವಿತ್ತಿರಿ...
ಒಪ್ಪಿದರೆ ಮೆಚ್ಚಿದಿರಿ
ತಪ್ಪಿದರೆ ತಿದ್ದಿದಿರಿ
ಬಾಳನೆದುರಿಸುವಂಥ ಛಲವಿತ್ತಿರಿ..
ನೋವು,ಯಾತನೆಗಳನು
ಮನದಾಳದಲಿ ದೂಡಿ
ನುಂಗಿ ಕರಗಿಸಿ ಮೇಲೆ ಒಪ್ಪವಿಟ್ಟು...
ಸವಿಮಾತು ಸವಿನಡತೆ
ಬರಿಸವಿಯ ನಮಗುಣಿಸಿ
ಹೊರಟುಹೋದಿರಿ ನಮ್ಮನೆಲ್ಲ ಬಿಟ್ಟು..
ನೀವಿಂದು ಜೊತೆಗಿಲ್ಲ
ನಿಮ್ಮ ನುಡಿಗಳನೆಲ್ಲ
ಮನದ ಕೋಟೆಯೊಳಗೆ ಹುದುಗಿಸಿಟ್ಟು
ಆಣಿಮುತ್ತುಗಳಂತೆ
ಒಂದೊಂದೇ ಹೊರತೆಗೆದು
ಬಳಸುವೆನು..ಬದುಕುವೆನು ವಚನವಿತ್ತು..

No comments:

Post a Comment

ಕತ್ತಲೆಯ ಗರ್ಭದಿಂ ಬೆಳಕೆಳೆದು ತಂದು. ರಾತ್ರಿಯನೇ ಹಗಲಾಗಿ ಇಂದು ಬದಲಿಸಿದೆ ಬಲದಿಂದ,ಛಲದಿಂದ ಮುನ್ನುಗ್ಗಿ ನಡೆದು ಮನಸಿನಾಳದಲೆ  ಸಿಡಿಲಬ್ಬರವ ತಡೆದೆ... ಒಳಗೆನಿತು ನೋವಿದ...