Wednesday, 7 February 2018

ಮಗು...

ಮಗು...
ಏನೆಂದು ಬಣ್ಣಿಸಲಿ,ಶಬ್ದಗಳು ನಾಚುತಿವೆ..
ನಿನ್ನ ಕಿರುಕಂಗಳಿನ ಕಾಂತಿ ನೋಡಿ..
ನಭದಲ್ಲಿ ಓಡುತಿಹ ಚಂದಿರಗೆ ಹೇಳಿಬಿಡು..
ಒಂದಿನಿತೂ ನಡೆಯದು ನಿನ್ನ ಮೋಡಿ...
ಅಚ್ಚರಿಯ ರೂಪವನು ಬೆಚ್ಚಿ ನಾ ನೋಡಿದೆನು..
ಹುಚ್ಚು ಹಿಡಿದ್ಹಂಗಾಯ್ತು ಈ ಮನಸಿಗೆ...
ಅರೆಬಿರಿದ ಮೊಗ್ಗೊಂದ ಹಿಡಿದು ಮುತ್ತಿಟ್ಟಂತೆ..
ಹಾಲ್ಜೇನು ಹರಿದಿತ್ತು ಕಣ್ ಕನಸಿಗೆ...
ಮನದುಂಬಿ ಬಂದಾಗ ಮಾತಿಗೆಲ್ಲಿದೆ ತಾಣ..
ಮೈಮನದ ತುಂಬೆಲ್ಲ ಭಾವಸಂತೆ...
ಕಾದಿಟ್ಟ ಅನಿಸಿಕೆಗೆ ತನ್ನ ನೆಲೆ ಗೊತ್ತಿಲ್ಲ..
ಕೇಳಿ,ನೋಡಿದ್ದೆಲ್ಲ ಅಂತೆ_ಕಂತೆ...
ಸ್ವಚ್ಛ' ಸ್ಫಟಿಕದ ಬಿಂದು' ನಿನ್ನ ಚಲುವಲಿ ಮಿಂದು
ಈ ದಿನದಿ ನಾ ಕಂಡೆ ' ದಿವ್ಯ ಬಿಂಬ'....
ಹಸುಗೂಸು ' ದೇವಸಮ' ಎಂಬಂಥ ಮಾತೊಂದು...
ಮಾರ್ದನಿಸುತಿದೆ ಎನ್ನ ಮನದ ತುಂಬ...

No comments:

Post a Comment

      ಅಣ್ಣನ post graduation ಮುಗಿದು, ನೌಕರಿ ಸಿಕ್ಕು ಧಾರವಾಡದಲ್ಲಿ ಮನೆಮಾಡಿ, ನಾವು ಧಾರವಾಡಕ್ಕೆ ಬಂದದ್ದು ೧೯೬೫ರಲ್ಲಿ...ನಾವಿದ್ದ ಮನೆ  ಹತ್ತು ಕೋಣೆಗಳ ಬಹು ದೊಡ್...