ನನಗೆ ರಾಜಕೀಯದಲ್ಲಿ ಅಷ್ಟೊಂದು ಆಸಕ್ತಿಯೇನೂ ಇಲ್ಲ. ನಮ್ಮ ಸಮೀಪದ / ದೂರದ ಸಂಬಂಧಿ ಗಳಲ್ಲಿ ರಾಜಕಾರಣಕ್ಕಿಳಿದವರೂ ಯಾರೂಇಲ್ಲ.ಆದರೆ ಪ್ರಾಸಂಗಿಕವಾಗಿಪ್ರಾಸ್ತಾವಿಕವಾಗಿ ಎಷ್ಟು ಬೇಕೋ ಅಷ್ಟು ಆಸಕ್ತಿ ಇದೆ. ಹೀಗಾಗಿ ಬೇಸರವಿಲ್ಲದೇ ಪ್ರತಿ ಚುನಾವಣೆಯಲ್ಲೂ ಮತವನ್ನು ಚಲಾಯಿಸಿ ತಪ್ಪದೇ ಫಲಿತಾಂಶಕ್ಕಾಗಿ ಕಾಯುತ್ತೇನೆ.
ಈ ಸಲದ ಫಲಿತಾಂಶ ಒಂದು ರೀತಿಯಲ್ಲಿ ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿ ಪ್ರತಿ ಪಕ್ಷಕ್ಕೂ ಒಂದಿಲ್ಲ ಒಂದು ಪಾಠ ಕಲಿಸಿದೆ.ಅನೇಕ ನಿರೀಕ್ಷೆ/ಅಪೇಕ್ಷೆಗಳ
ಹುಡಿ ಹಾರಿಸಿ ಎಲ್ಲರೂ ತಮ್ಮನ್ನು ತಾವು ಮುಟ್ಟಿ ನೋಡಿಕೊಳ್ಳುವಂತೆ
ಮಾಡಿದೆ.
ಅದೇನೇ ಇರಲಿ, ನನ್ನ ಮಟ್ಟಿಗೆ ಮಾತ್ರ ಈ ದಿನ ಹ್ಯಾಟ್ರಿಕ್ ಖುಶಿ ತಂದ ಶುಭ ದಿನ... ನನ್ನ ಮೂರನೇ ಮಗಳ ಇಪ್ಪತ್ಮೂರನೇ ವಿವಾಹ ವಾರ್ಷಿಕೋತ್ಸವ / ಅಳಿಯನ ಚುನಾವಣೆಯ ಸಂಭ್ರಮಕ್ಕಾಗಿಯೇ ಧಾರವಾಡದಿಂದ ಬಂದ ನನ್ನ ಆಪ್ತ ಗೆಳತಿ ಅವರ ವಿಜಯೋತ್ಸವದಲ್ಲಿ ಮಗಳು, ಮಕ್ಕಳು,ಮೊಮ್ಮಕ್ಕಳೊಂದಿಗೆ ಭಾಗಿಯಾಗಿ ತುಂಬು ಸಂತಸದಲ್ಲಿದ್ದು ಮರಳಿ ಹೋಗುವಂತಾದುದು / ಈ ಮೊದಲೇ book ಮಾಡಿದ ಕಾರು
( ಟೊಯೋಟಾ ಗ್ಲಾಂಝಾ) ಇಂದೇ ಬಂದು ಗುಡಿಗೆ ಹೋಗುವ ನೆಪದಲ್ಲಿ ಒಂದು ಪುಟ್ಟ jolly ride ನ ಖುಶಿ ದಕ್ಕಿದ್ದು...
ಸಾಕಲ್ಲವಾ ಮುಖದ ಮೇಲೆ ನಗು ಅರಳೋಕೆ???
No comments:
Post a Comment