೨೧ ಕ್ಕೆ ತಯವಾಗಿತ್ತು.ಈ ಬಾರಿ ಒಂದು ವಾರದ plan ಇದ್ದುದರಿಂದ ಎರಡು ದಿನ ಮೊದಲೇ First AC book ಮಾಡಿಕೊಂಡು ಆರಾಮಾಗಿ ಪಯಣಿಸಿ
ಮಜವಾಗಿ ವೇಳೆ ಕಳೆಯವದಾಗಿ ಠರಾಯಿಸಿ ಅಣ್ಣನ ಮಗಳ ಜೊತೆ ಹೊರಟದ್ದಾಯಿತು.train ಸಮಯ ರಾತ್ರಿ ಹನ್ನೊಂದು ಗಂಟೆಗೆ. ಎರಡು
ತಾಸು ಮೊದಲೇ ಜಾಹ್ನವಿಯ ಮನೆಗೆ
ಹೋಗಿ, ಊಟ ಮುಗಿಸಿ, ನಿಲ್ದಾಣ ತಲುಪಿದಾಗ ಸರಿಯಾಗಿ ೧೦-೪೫.
ಅದಾಗಲೇ ಬಂದು ನಿಂತ ಗಾಡಿ ಏರಿ
ಅದು ಹೊರಟಾಗ ಸರಿಯಾಗಿ ಹನ್ನೊಂದು. ನಮ್ಮ ಸಮಯ ಪಾಲನೆಗೆ ನಾವೇ ಬೆನ್ನು ತಟ್ಟಿಕೊಂಡು, ಹತ್ತೇ ನಿಮಿಷಗಳಲ್ಲಿ TC ಬಂದು ಟಿಕೆಟ್ ಪರಿಶೀಲಿಸುವ ಕೆಲಸವೂ ಮುಗಿದು,
ಎಚ್ಚರವಾಗದಿದ್ದರೆ- ಎಂಬ ಅನುಮಾನ ದಲ್ಲಿ ಒಂದು ಗಂಟೆ ಮೊದಲೇ ಅಲಾರಾಂ ಇಟ್ಟು ಮಲಗಿದಾಗ ಹನ್ನೆರಡರ ಸಮೀಪ. ಸರಿಯಾಗಿ ಐದು ಗಂಟೆಗೆ ಅಲಾರಾಂ ಆದಾಗ ಎದ್ದು ಕಿಟಕಿ ಗಾಜಿನಲ್ಲಿ ' ಹುಬ್ಬಳ್ಳಿ' ಎಂದು confirm ಮಾಡಿಕೊಳ್ಳಲು ನೋಡಿದಾಗ ಕಂಡದ್ದು, ಬೆಂಗಳೂರಿ ನಿಂದ ಕೆಲವೇ ಕಿಲೋಮೀಟರ್ ದೂರದ ' ಕಡೂರು'. ಗಾಬರಿಯಾಗಿ ಗೂಗಲ್ ನಲ್ಲಿ Location search ಮಾಡಿದಾಗ ೪೦೦ km ಸಮೀಪದ ಅಂತರ ತೋರಿಸುತ್ತಿದೆ. ಗಾಬರಿಯಲ್ಲಿ,
ಬೇರೆ ಗಾಡಿ ಏನಾದರೂ ಏರಿದ್ದೇವಾ? ಎಂದು ಯೋಚಿಸಿಯೇ ಬಿಪಿ ಏರಿದ್ದೂ ಆಯ್ತು. TC ಬಂದು ಟಿಕೆಟ್ confirm
ಮಾಡಿ ಹೋದದ್ದು ನೆನಪಾದಾಗ ಸ್ವಲ್ಪ
ನಿರಾಳ. ಆದರೆ special ಬೋಗಿ ಆದ್ದರಿಂದ ಜನರ ಓಡಾಟವಿಲ್ಲದೇ ಏನೂ ತಿಳಿಯುತ್ತಲೇಯಿಲ್ಲ. ಆದದ್ದಾಗಲಿ ಎಂದು ಮತ್ತೆ ಮತ್ತೆ ಗಡಿಯಾರ ನೋಡುತ್ತ/ ತೂಕಡಿಸುತ್ತ
ಒಂದೂವರೆ ಗಂಟೆ,- ೬-೩೦- ಕ್ಕೆ ದಿನದಂತೆ ಎದ್ದು ನೋಡಿದಾಗ ಡಾವಣಗೆರೆಯೂ ಬಂದಿರಲಿಲ್ಲ.ನಮ್ಮ ತಲೆ ಕೆಲಸಮಾಡಲು ಒಂದು ಕಪ್ ಚಹ ಬೇಕಿತ್ತು.ಅದು ಬಂದದ್ದು,ಹರಿಹರದಲ್ಲಿ.
" ಬೆಂಗಳೂರು ಸಮೀಪದಲ್ಲಿಯೇ ಸ್ವಲ್ಪು ದೂರದಲ್ಲಿ track extension
ಕೆಲಸ ನಡೆದಿದ್ದು ನಮ್ಮ track ನಲ್ಲೂ
ಕೊಂಚ ಅನುಮಾನ ಬಂದದ್ದರಿಂದ ಗಾರ್ಡ ಸಿಗ್ನಲ್ ಕೊಡಲು ನಿರಾಕರಿಸಿದ್ದ,
ಅದೆಲ್ಲ ಬಗೆಹರಿದು,clear ಆಗಿ ಹಸಿರು
ನಿಶಾನೆ ತೋರಿಸಲು ಪೂರ್ತಿ ನಾಲ್ಕು ಗಂಟೆಗೂ ಹೆಚ್ಚಾಗಿದ್ದು ನಂತರ ತಿಳಿದು
ಬಂದ ವಿಷಯ...ಆ ನಂತರ ವೇಳೆ ಕಳೆಯುವುದು ಸಮಸ್ಯೆಯಾಗಲೇ ಇಲ್ಲ
ನಮ್ಮ ಬರುವನ್ನು ನಿರೀಕ್ಷಿಸುತ್ತಿದ್ದವರ
ಫೋನುಗಳ ಮೇಲೆ ಫೋನುಗಳು...
ಎಲ್ಲಿದ್ದೀರಿ? ಮುಟ್ಟಿದಿರಾ?
ನಾವು ಎಷ್ಟೊತ್ತಿಗೆ ಕಾರು ತರೋಣ?
ನಮ್ಮನೆಗೇ ಬಂದುಬಿಡಿ.
Tiffin ಗೆ ಕಾಯುತ್ತೇವೆ...
ಇಂಥ ಪ್ರಶ್ನೆಗಳಿಗೆ ಉತ್ತರಿಸುತ್ತಾ, ರಂಗು ರಂಗಿನ ಅನುಭವಗಳನ್ನು ಮತ್ತಷ್ಟು ರಂಗಾಗಿ ವಿವರಿಸುತ್ತಾ, ಅಂದಿನ ಬೆಳಗಿನ ಕಾರ್ಯಕ್ರಮಗಳನ್ನು reschedule ಮಾಡುತ್ತಾ, ಅದರ ತಕ್ಕಂತೆ ದಿನಚರಿಯನ್ನು ಬದಲಾಯಿ ಸಲು ಪ್ರಯತ್ನಿಸುತ್ತಾ, ಹರಿಹರದಲ್ಲಿ
ಸಿಕ್ಕ ಇಡ್ಲಿ/ ವಡೆ/ ಚಹಾ ಚಪ್ಪರಿಸುತ್ತಾ
ಮುಂದಿನ ನಾಲ್ಕು ಗಂಟೆಗಳು ಕಳೆದದ್ದೇ
ತಿಳಿಯದೇ ಧಾರವಾಡ ಮುಟ್ಟಿದ್ದು/
ಪ್ರವಾಸದ ಹೊಸ ಅನುಭವ ಮನಸ್ಸನ್ನು ತಟ್ಟಿದ್ದು ಈಗ ಇತಿಹಾಸ.
ಆದರೆ ಹತ್ತು - ಹನ್ನೆರಡು ಜನರ ಗುಂಪೊಂದು ಅಂದೇ ದಿನ ನಡೆಯಬೇಕಾಗಿದ್ದ ಮದುವೆಗೆ ಹೋಗಲಾಗದೇ ನಿರಂತರ ಚಡಪಡಿಸಿ ದ್ದು ನೋಡಿ ನಾವೂ ಚಡಪಡಿಸುವಂತಾ ಯಿತು. ಒಂದು ನಿಲ್ದಾಣದಲ್ಲಿ ಅಪ್ಪ, ಮಗ ಇಳಿಯುವ ಹೊತ್ತಿಗೆ ರೈಲು ನಿಧಾನವಾಗಿ ಹೊರಟು ಅಮ್ಮ ಗಾಬರಿ ಯಾಗಿ ಇಳಿಯಲು ನಿರಾಕರಿಸಿದ್ದರಿಂದ
ಹಳಿಗಳ ಗುಂಟ guards ಓಡಿ, ಒಬ್ಬರು
ಅನಾಮತ್ತು ಅವರನ್ನು ಇಳಿಸಿ, ಇನ್ನೊಬ್ಬರು ಕೆಳಗೆ ಹಿಡಿದುಕೊಂಡು
ಕೆಲಸ ಸಾಧಿಸಿದ್ದನ್ನು ಕಾಣುವ ಭಾಗ್ಯವೂ ದೊರೆಯಿತು.
ನೀವು ಏನೇ master plan
ಹಾಕಿ, ಅದು ನಡೆಯುವದು ಮಾತ್ರ ಆ
GREAT MASTER ನ plan ನಂತೆ ಎಂಬುದನ್ನು ಮಾತ್ರ ನೆನಪಿಡಿ...
ಏಕೆಂದರೆ -
' ಬದುಕಿಗಿಂತ ದೊಡ್ಡ ಗುರು ಬೇರಿಲ್ಲ'.
No comments:
Post a Comment