ಕೊನೆ ಮೊದಲಿಲ್ಲ.ಮನಸ್ಸಿನಲ್ಲೇನೋ ಅಂದುಕೊಂಡದ್ದು ಎಷ್ಟೋ ಸಲ ಆಗುವದಿಲ್ಲ ಎಂಬ ನಿರಾಶೆಯ ಜೊತೆ
ಜೊತೆಗೇನೇ ಕನಸು ಮನಸ್ಸಿನಲ್ಲೂ
ಎಣಿಸದ ಒಂದು ಸುಯೋಗವನ್ನೇ
ಧಿಡೀರನೇ ಕರುಣಿಸಿಬಿಡುತ್ತದೆ ಈ ಬದುಕು.
ಚುನಾವಣೆಯ ಸಮಯ.
ಎಲ್ಲರಿಗೂ ಎಂಥದೋ ಉದ್ವೇಗ/ ಹುಮ್ಮಸು/ ನಿರೀಕ್ಷೆಗಳು/ ಸಂಭ್ರಮ. ಇನ್ನು ಒಂದು ವಾರ ಯಾರನ್ನೂ ಮಾತನಾಡಿಸುವ ಹಾಗೇಯಿಲ್ಲ- ಎಂದಂದುಕೊಳ್ಳುವಾಗ ಧಿಡೀರನೇ
ನನ್ನ ಜೊತೆ ಒಂದನೇ ವರ್ಗದಿಂದ ಕೂಡಿ ಕಲಿತ/ ಎಪ್ಪತ್ತು ವರ್ಷಗಳಿಗೂ ಮಿಕ್ಕಿ ಸ್ನೇಹಸಂಬಂಧ ನಿಭಾಯಿಸಿದ/ಇಂದಿಗೂ ನಿಭಾಯಿಸುತ್ತಲೇ ಇರುವ ಬಾಲ್ಯದ ಗೆಳತಿಯೊಬ್ಬಳು ಮನೆಗೆ ಬಂದದ್ದಲ್ಲದೇ,ಅವಳೊಂದಿಗೆ ನಮ್ಮ ಗೆಳೆತನಕ್ಕೂ ಮಿಗಿಲಾದ, ವಯಸ್ಸಿನಲ್ಲಿ ಹಿರಿಯರೂ ಆದ ಗುರುಪತ್ನಿಯವರನ್ನು
ಭೇಟಿಯಾಗಬೇಕೆಂಬ ಬಹುದಿನದ ಆಶೆ
ಯೂ ನೆರವೇರಿದ್ದು/ನಾವು ಮೂವರೂ
ಕೆಲ ಗಂಟೆಗಳನ್ನು ಕಳೆಯಲು ಅನುಕೂ ಲವಾಗುವಂತೆ ನಮ್ಮಷ್ಟಕ್ಕೆ ನಮ್ಮನ್ನು ಬಿಟ್ಟು ತಾನು ಮಾತ್ರ ಅಡಿಗೆ ಮನೆಹೊಕ್ಕು ಗಂಟೆಯೊಂದರಲ್ಲಿ ವಿಧ ವಿಧದ ಅಡಿಗೆ ತಯಾರಿಸಿ/ ಉಣಿಸಿ ಅಭೂತ ಪೂರ್ವ ಸತ್ಕಾರ ನೀಡಿದ ಅವರ ಸೊಸೆಯಾದ ವೈಜಯಂತಿ ಹಾಗೂ ಮನೆಜನರೊಂದಿಗೆ ಕಳೆದ ಕೆಲ ಸಮಯ ಬಹುದಿನಗಳ ನೆನಪಿಗೆ ಬುತ್ತಿಯಾದದ್ದಲ್ಲದೇ/ ನಾಳೆ Vote ಹಾಕಲು Extra Energy ಯಾಗಿ
ಕೆಲಸ ಮಾಡುವದರಲ್ಲಿ ಸಂದೇಹವಿಲ್ಲ.
No comments:
Post a Comment