KEEP GOING/ KEEP GROWING
Teju...
Heartiest Congratulations dear Tejas...YOU ARE the Pioneer to become A Graduate from US.in our Koulagi family. All smiles for you. You have made all of us PROUD...Lots and lots of blessings from All the members of our family...GOD BLESS...
LOVE YOU...
ಅದು ೧೯೯೬ ನೇ ಇಸ್ವಿ.ಮಗನ ಇಂಜಿನಿಯರಿಂಗ್ ಮುಗಿದು ಬೆಂಗಳೂರಿನಲ್ಲಿ ಕೆಲಸ ಮಾಡತೊಡಗಿ
ಎರಡೇ ವರ್ಷಗಳಾಗಿದ್ದವು.ಹೆಚ್ಚಿನ ಓದಿಗೋ/ ನೌಕರಿಗೋ ಪಶ್ಚಿಮಾಭಿ ಮುಖಿಗಳಾಗುವ trend ನಿಧಾನವಾಗಿ ಶುರುವಾಗಿತ್ತು.ಮಗನ ಪರಮಾಪ್ತ ಗೆಳೆಯನೊಬ್ಬ MS ಗೆಂದು ಹೊರಟು ನಿಂತಾಗ ನನ್ನ ಮಗನಲ್ಲೂ ಆಶೆಯ
ಬೀಜಾಂಕುರವಾಗಿರಬೇಕು.ಹನ್ನೆರಡನೇ ವರ್ಷಕ್ಕೇನೇ ಅಪ್ಪನನ್ನು ಕಳೆದು ಕೊಂಡದ್ದಕ್ಕೋ ಏನೋ ಅವನೆಂದೂ
ಹುಡುಗನೆಂಬ ಲೆಕ್ಕಕ್ಕೆ ಬರದೇನೇ ಪ್ರೌಢನಾಗಿದ್ದ. ವಯಸ್ಸು ಮೀರಿ matured.ತಾನು ಹೋದರೆ ನಾನು ಒಬ್ಬಳೇ ಆಗುತ್ತೇನೆಂದೋ/ನಾನೆಲ್ಲಿ ಹೆದರಿಕೆ/ ನೋವು ಅನುಭವಿಸು ತ್ತೇನೆಂದೋ ತಯಾರಿ ಮುಗಿದು ಹೊರಡುವದು ನಿರ್ಧರಿತವಾಗುವ ವರೆಗೆ ವಿಷಯ ಪ್ರಸ್ತಾಪಿಸುವದೇ ಬೇಡವೆಂದೋ ಮೊದಲ ಹಂತದಲ್ಲಿ ಏನನ್ನೂ ಹೇಳಿರಲಿಲ್ಲ.ಯಾರ ಸಹಾಯ ಪಡೆದನೋ / ಎಲ್ಲಿಂದ ಸಾಲದ ವ್ಯವಸ್ಥೆ ಮಾಡಿಕೊಂಡನೋ / ಯಾರು ಅವನಿಗೆ guide ಮಾಡಿದರೋ ನನಗೆ
ಇಂದಿಗೂ ಗೊತ್ತಿಲ್ಲ.ಅವನ ಉದ್ದೇಶ ನೇರವಾಗಿದ್ದರಿಂದ ಬಹುಶಃ ಎಲ್ಲವೂ
ಸುಸೂತ್ರವಾಗಿ ಒಂದು ಹಂತಕ್ಕೆ ಬಂದಮೇಲೆಯೇ ನನ್ನ ಮುಂದೆ ಬಾಯಿಬಿಟ್ಟ...
ನನಗೂ ನನ್ನ ಮಕ್ಕಳು ಆದಷ್ಟು ಸಮೃದ್ಧರಾಗಿ ಬೆಳೆಯಲಿ ಎಂಬ ಇಚ್ಛೆ ಇದ್ದರೂ ಅಂಥದೊಂದು ಕನಸು ಸಾಕುವಷ್ಟು ನಾನು ಖಂಡಿತ ಅನುಕೂಲಸ್ಥಳಾಗಿರಲಿಲ್ಲ ."ನನಗೆ ನಿನ್ನ ಒಪ್ಪಿಗೆಯೊಂದನ್ನು ಬಿಟ್ಟು ಬೇರೇನೂ ಬೇಡ" ಎಂದು ಅನುಮಾನಿಸುತ್ತಲೇ ಮಗ ಬೇಡಿಕೊಂಡಾಗ ಬೇಡವೆನ್ನುವ
ಯಾವ ನೈತಿಕ ಹಕ್ಕೂ ನನಗಿರಲಿಲ್ಲ.
" ಅಲ್ಲಿ ಯಾರಿಗೆ ಯಾರೂ ಇರುವದಿಲ್ಲ.train ನಲ್ಲಿ ಲೂಟಿ ಮಾಡುತ್ತಾರೆ/ ಯಾರೋ ಇನ್ಯಾರನ್ನೋ
ಕಾರಣವಿಲ್ಲದೇ shoot ಮಾಡುತ್ತಾರೆ,
ಇದ್ದೊಬ್ಬ ಮಗನನ್ನು ದೂರ ಕಳಿಸಿ
ನಂತರ ಹಲುಬಬೇಡ-" ಎಂಬ ಬಿಟ್ಟಿ ಉಪದೇಶಗಳು ಬೇರೆ...ನಾನು / ಮಕ್ಕಳು ತಮ್ಮ ನಂತರ ಯಾವ ಕಾರಣಕ್ಕೂ ನೋವು ಅನುಭವಿಸದೇ
ಇರಲಿ ಎಂದೇ ನನ್ನವರು ನನ್ನ ಮೂವತ್ಮೂರನೇ ವರ್ಷಕ್ಕೆ, ಮೂರು ಮಕ್ಕಳನ್ನು ತಾವೇ ನೋಡಿಕೊಂಡು BEd ಮಾಡಿಸಿ ನೌಕರಿಗೆ ಹಚ್ಚಿದ ನೆನಪಾಗಿ ನಾನು ಮೌನವಾಗಿಯೇ ಸಮ್ಮತಿಸಿದೆ.
ಆ ಮಾತಿಗೀಗ ಮತ್ತೆ ಇಪ್ಪತ್ತಾರು ವರುಷಗಳು.ಅವನ ಮಗ/ಅಂದರೆ ನನ್ನ ಮೊಮ್ಮಗ ತೇಜಸ್ Boston ನ UMass Amherst ವಿಶ್ವವಿದ್ಯಾಲಯದಿಂದ ಪದವಿ ಪಡೆದು ಇದೇ ಇಪ್ಪತೈದನೇ ತಾರೀಕು ಅಂದರೆ ನಿನ್ನೆ graduation day ದ ಸಂಭ್ರಮ ದಲ್ಲಿದ್ದಾನೆ.ನನ್ನ Visa expire ಆದ್ದರಿಂದ/ ಹೊಸ ವೀಸಾಗಳ ನಿಬಂಧನೆಗಳಿಂದಾಗಿ ನಮಗಾರಿಗೂ ಅಲ್ಲಿಗೆ ಹೋಗಲಾಗಲಿಲ್ಲ...
ನಿನ್ನೆ ವಿಷಯ ತಿಳಿಸಲು ಮಗ ಫೋನ್ ಮಾಡಿದಾಗ ಇದೆಲ್ಲ ನೆನಪಿನ ಸುರುಳಿ ಬಿಚ್ಚಿ ಕೊಂಡಿತು. ಕೇವಲ ಎರಡೂವರೆ ದಶಕಗಳಲ್ಲಿ
ಜಗತ್ತು ಬದಲಾದ ಪರಿಯೊಂದು ವಿಸ್ಮಯ...ಅವನನ್ನು ಕಳಿಸಲು ಮೌನ
ವಾಗಿ ರೋಧಿಸಿದ ನಾನೇ -ಒಂದು ಕಡಿಮೆ ಹತ್ತು ದೇಶ- ಗಳನ್ನು (ಒಂಬತ್ತು) ಸುತ್ತಿದ್ದೇನೆ. ಮಗನ ಹತ್ತೊಂಬತ್ತು cousins ಗಳಲ್ಲಿ ಕೇವಲ ಆರು ಜನರನ್ನು ಬಿಟ್ಟು ಎಲ್ಲರೂ ವಿಶ್ವದ
ಉದ್ದಗಲಗಳನ್ನು ಅಳೆಯುತ್ತಿದ್ದಾರೆ.
ವರ್ಷಕ್ಕೊಮ್ಮೆ ಅವರು/ ಅನಿವಾರ್ಯ ವಾದಾಗ ನಾವೆಲ್ಲರೂ ಹೋಗಿ ಬರುವದು ಸದಾ ಜಾರಿಯಲ್ಲಿದ್ದುದ ರಿಂದ ಪರದೇಶಗಳು ನಡುಮನೆ/ ಪಡಸಾಲೆ ಎಂಬಂತಾಗಿವೆ.ಆಗಿನಂತೆ ಯಾವುದೋ ಮೂಲೆಯಲ್ಲಿಯ ಬೂತ್ ಒಂದರಲ್ಲಿ trunk call ಬುಕ್ ಮಾಡಿ/ ಒಂದು call, ಹತ್ತು ಸಲ cut
ಆಗಿ ಗೋಳಾಡುವ ದೌರ್ಭಾಗ್ಯ ಈಗಿಲ್ಲ.vedio call ಮಾಡಿದರೆ ಎದುರಾ ಎದುರೇ ಬೇಕೆನಿಸುವಷ್ಟು ಕಾಲ ಮಾತಾಡಬಹುದು. ಪರಸ್ಪರರನ್ನು ನೋಡಬಹುದು.
ಅಷ್ಟಲ್ಲದೇ ಹೇಳುತ್ತಾರೆಯೇ? "ಪ್ರತಿಯೊಂದು ಮಹಾಯಾನವೂ
ಮೊದಲ ಕೆಲ ಹೆಜ್ಜೆಗಳಿಂದಲೇ ಸುರುವಾಗುವದು"- ಎಂದು...
No comments:
Post a Comment