ಅದರದೂ ಒಂದು list ಮಾಡ ಬಹುದು.
೧) * ಹುಣಿಚೆ(ಸೆ)ಎಳೆ ಬೀಜಗಳಿಗೆ ದೊಡ್ಡ ಜಾಜಿ ಮುಳ್ಳು ಚುಚ್ಚಿ ಬಗರಿಗಳನ್ನು ಮಾಡಿ ಆಡುವದು...
೨)* ಹುಳಿಯಿದ್ದ ಹುಣಿಚೆ ಚಿಗುರು ಅಗಿಯುವದು...
೩)*ಹುಣಿಚೆ ಬೀಜಗಳನ್ನು ನೀರಲ್ಲಿ ತೇಯ್ದು, ಕಲ್ಲಿನ ಮೇಲೆ ಉಜ್ಜಿ, ಒಂದು ಬದಿ ಬೆಳ್ಳಗೆ ಮಾಡಿ ಕವಡೆಗಳಂತೆ ಬಳಸುವದು.( ನೀವು ಹೇಳಿದಂತೆ ತೇದು ಚುರುಕು ಮುಟ್ಟಿಸಲು ನಾವು ಬಳಸುತ್ತಿದ್ದುದು ಗಜ್ಜುಗ, ಹುಣಿಸೆ ಬೀಜ ಅಲ್ಲ)
೪) * ಹುಣಿಸೆ ಹಣ್ಣು ಸ್ವಚ್ಛ ಮಾಡಿ ಕೂಡಿಬಿದ್ದ ಬೀಜಗಳನ್ನು ಗುಳಿಮನೆ ಆಟಕ್ಕೆ ಬಳಸುವದು.
೫)* ಒಂದು ದೊಡ್ಡ ವೃತ್ತವನ್ನು ಬೀಜಗಳ ಸುತ್ತ ಹಾಕಿ ಜೋರು ಹಾಕಿ ಊದುವದು.ಉಸಿರಿನ ಜೋರಿಗೆ
ಹಾಕಿದಾಗ ಪರಿಧಿ ಮೀರಿ ಬಂದ ಬೀಜಗಳನ್ನು ಊದಿದವರು ಗೆದ್ದಂತೆ.
೬) * ಬೀಜಗಳನ್ನು ಸಂಗ್ರಹಿಸಿ ಮಕ್ಕಳಿಗೆ
ಗಣಿತ ಕಲಿಸುವಾಗ ಸಂಕಲನ/ ವ್ಯವಕಲನಗಳಿಗೆ ಉಪಯೋಗಿಸುವದು.
೭) * ಆರಿಸಿದ ಬೀಜಗಳನ್ನು ಸ್ವಚ್ಛಗೊಳಿಸಿ ಕಾಲುಪಾವಿನ ಲೆಕ್ಕದಲ್ಲಿ ಮಾರಿ ಚಿಲ್ಲರೆ ಪಡೆಯುವದು. ಅವನ್ನು ಹುರಿದು ದೊಡ್ಡ ಪ್ರಮಾಣದಲ್ಲಿ ಮಾರುವ ಕಾಫಿಪುಡಿಯಲ್ಲಿ ಬಳಸುತ್ತಾರೆ- ಎಂದು ಕೇಳಿದ ನೆನಪು.)
೮) ಹಣ್ಣಾದ ಹುಣಿಸೆಯಂತೆಯೇ ಎಳೆಯ ಹುಣಸಿಯ ಕಾಯಿಯ ಬಳಕೆಯೂ ನಮ್ಮ ಗ್ರಾಮೀಣ ಭಾಗದಲ್ಲಿ ಅಧಿಕ. ಹುಣಿಸೆಕಾಯಿ/ ಹಸಿಮೆಣಸಿನಕಾಯಿ/ ಇಂಗು / ಅರಿಷಿಣದ ತೊಕ್ಕು ಇಲ್ಲದೇ
ಊಟವೇಯಿಲ್ಲ.ಪುಸ್ತಕಗಳನ್ನು ಮರೆತರೂ ಪಾಟಿ ಚೀಲದಲ್ಲಿ ಉಪ್ಪು/ ಹುಣಚಿಯ ಬೋಟುಗಳು MUST
ಆಗಿದ್ದ ದಿನಗಳು ಅವು.ಅಷ್ಟೇ ಏಕೆ, ಶಾಲೆಯ ಗೇಟು ದಾಟುತ್ತಲೇ ಎಳೆ ಹುಣಚಿನಕಾಯಿಗಳ ಚಿಕ್ಕ ಚಿಕ್ಕ ಗುಂಪಿಗಳೂ ಅರ್ಧಾಣೆ/ ಒಂದಾಣೆಗೆ
ಸಿಗುವದು ಆಗ ಸಾಮಾನ್ಯವಾಗಿತ್ತು...
೯) ಬಲಿತ ಕಾಯಿಗಳನ್ನು ಬಿಸಿಲಿನಲ್ಲಿ
ಒಣಗಿಸಿ ಪುಡಿಮಾಡಿ ತುರ್ತಿಗೆ ಬಳಸುತ್ತಿದ್ದುದೂ.ಇತ್ತು.
೧೦) ನಾಗಪಂಚಮಿಗೆ ಕಾಯಿ ಹುಣಿಚೆಯಿಲ್ಲದೇ ನಾಗಪ್ಪನ ಪೂಜೆಯಿಲ್ಲ.ಅದರ ಮರಗಳಿಗೆ ' ಮರ ಜೋಕಾಲಿ' ಕಟ್ಟಿ ಆಡದೇ ಹಬ್ಬವೇ ಅಮಾನ್ಯ.
೧೧) ಎಂಟನೇ ಇಯತ್ತೆಯಲ್ಲಿರುವಾಗ ಜಿದ್ದು ಕಟ್ಟಿ ಮರದಜೋಕಾಲಿ ಜೀಕಿ ಹಗ್ಗ ಹರಿದು ಕಲ್ಲಮೇಲೆ ಬಿದ್ದು ಮೊಣಕೈಗೆ ಆದ ಗಾಯವೇ ನನ್ನ pass port ಗೆ Identity...
೧೨) ಜ್ವರ/ ನೆಗಡಿ/ ಕೆಮ್ಮು ಏನೇ ಬರಲಿ ಅಜ್ಜಿಯ ಹುಣಿಸೆಹಣ್ಣು/ ಬೆಲ್ಲ/ ಇಂಗಿನ ಸಿಹಿ ಗೊಡ್ಡು ಸಾರು/ ಮುದ್ದಿ (ಅಳ್ಳಕ) ಅನ್ನದ Super combination ನ್ನಿನದೇ ದಿವ್ಯೌಷಧಿ...
೧೩) ನಾವಾಡುವ ಇನ್ನೊಂದು ಆಟ ಅನೇಕರಿಗೆ ಗೊತ್ತಿರಬಹುದು.ಅದಕ್ಕೆ ಇಬ್ಬರು ಬೇಕು.ಒಬ್ಬ ಇನ್ನೊಬ್ಬನನ್ನು
ಮಾತಾಡುವಂತೆ ಮರೆಸಿ ' ಹು'- ಅನಿಸಬೇಕು.ಇನ್ನೊಬ್ಬ ಮೈಯಲ್ಲಾ ಎಚ್ವರಿದ್ದು 'ಹು' ಬರುವ ಪದಗಳಿಂದ
Escape ಆಗಬೇಕು.ಆಗೆಲ್ಲ 'ಹುಣಿಚೆ ಣ್ಣು' ಬಾರದೆ ಆ ಆಟ ಮುಗಿಯುವಂತಿಲ್ಲ.ಐದು/ ಹತ್ತು ಶಬ್ದಗಳ ನಡುವೆ ಗಕ್ಕನೇ ಸುಳಿವು ಕೊಡದೇ ಹುಣಿಸೇಹಣ್ಣು ಬಂದು ಒಬ್ಬರನ್ನು ಸೋಲಿಸಲೇಬೇಕು.
೧೪)ಯಾರದಾದರೂ mood upset
ಆದರೆ " ಯಾಕೆ ಹಾಗೆ ನಿನ್ನ ಮುಖ
' ಹುಳಿಹುಳಿ'ಯಾಗಿದೆ- ಎನ್ನುವದು
ವಾಡಿಕೆ...
೧೫) ಈ ವಯಸ್ಸಿನಲ್ಲೂ ಇದೆಲ್ಲ ಹೇಗೆ ನೆನಪಿದೆ ಅಂತೀರಾ?" ಹುಣಸೆ ಮುಪ್ಪಾದರೆ ಹುಳಿ ಮುಪ್ಪೇ?"
No comments:
Post a Comment