Friday, 24 March 2023

 *ನಿಜ ಅರ್ಥದ ಶಿಕ್ಷಕ,* ...

        ಈಗ ನನಗೆ 74 ವರ್ಷ. ವಯಸ್ಸಾದ ಮುದಿಯತ್ತಿನಂತಿದ್ದೇನೆ ಈಗ 60 ವರ್ಷದ ಹಿಂದೆ ತಿರುಗಿ ನನ್ನನ್ನು ನಾನು ನೋಡಿಕೊಂಡಾಗ ನಾನು ತುಂಬಾ ಉಡಾಳ ಸಣ್ಣ ಊರಾದ ನನ್ನ ಊರಲ್ಲಿ ಯಾವುದೇ ಮನೆಯ ಮೇಲೆ ಕಲ್ಲು ಬೀಳಲಿ ಯಾವುದೇ ಮನೆಯ ಕಿಡಕಿ ಒಡೆಯಲಿ, ಹೊಡೆದೆದ್ದು ಬಡದದ್ದು ಮನೆಯ ಹಿತ್ತಲಿನಲ್ಲಿ ಪೇರಲ ಪಪ್ಪಾಯ ಹಣ್ಣನ್ನು ಕಾಣದಂತೆ ಹರಿದಿದ್ದು ಒಟ್ಟಿನಲ್ಲಿ ಹೇಳಬೇಕೆಂದರೆ ಊರಿನಲ್ಲಿ ಯಾವುದೇ ಕೆಟ್ಟ ಕೆಲಸ ಮಾಡಲಿ ಅದು ನಾನೇ ಮಾಡಿದ್ದು ಎಂದು ಅನ್ನುವಷ್ಟು ಉಡಾಳತನಕ್ಕೆ ಪ್ರಸಿದ್ಧಿಯಾಗಿದ್ದೆ. ಎಸ್ ಎಸ್ ಎಲ್ ಸಿ ಮುಗಿಸಿದ ನಂತರ ಎಲ್ಲರಂತೆಯೇ ನಾನು ಕೂಡ ಟ್ರೆಂಕ ನ್ನ ಹೊತ್ತು ಧಾರವಾಡದ ಗುರುಗಳ ಮನೆಗೆ ಬಂದೆ ನಮ್ಮ ಊರಿನಿಂದ ಕಾಲೇಜಿಗೆ ಬರುವರೆಲ್ಲರೂ ಪ್ರಾರಂಭದಲ್ಲಿ  ಪಲ್ಲಣ್ಣನ ಮನೆಗೆ ಬರುವುದು ನಿರೂಪಿಸಿದ ರೂಢಿಯಾಗಿತ್ತು.
ಗುರುಗಳ ಮನೆಗೆ ಪ್ರವೇಶವಾಗುವವರೆಗೂ ನನಗೆ ಪಲ್ಲಣ್ಣ ಎಂದರೆ, ಜೆಎಸ್ಎಸ್ ಕಾಲೇಜಿನ ಉಪನ್ಯಾಸಕರು ನಮ್ಮ ಊರಿನವರು ಎಂದಿಷ್ಟೇ ಪರಿಚಯವಿತ್ತೆ , ವಿನಹ ಶ್ರೀಯುತರ, ಅಂದರೆ ,ಗುರುಗಳ ಇತರ ಮುಖಗಳ ಪರಿಚಯವೇ ಇರಲಿಲ್ಲ.
ಗುರುಗಳು ಎಂದೂ ..ನನ್ನನ್ನು ಶಿಕ್ಷಿಸಲಿಲ್ಲ ಬಯ್ಯಲಿಲ್ಲ ಏನೊಂದು ಅನ್ನಲಿಲ್ಲ ಆದರೆ, ಚಾಳಿಸಿನ ದಪ್ಪನೆಯ ಗಾಜಿನಿಂದ ಅವರು ಮೇಲಿನಿಂದ ಕೆಳಗೆ ನನನ್ನು ಒಮ್ಮೆ ನೋಡಿದರೆ ನನಗೆ ಅರಿವಿಲ್ಲದಂತೆಯೇ ಕರಗಿ ಹೋಗುತ್ತಿದ್ದೆ. ಅದರಂತೆ ಅವರು  ಮನೆಯಲ್ಲಿ  ನನಗೆ ಅಭ್ಯಾಸಹೇಳಲಿಲ್ಲ. ಆದರೆ ,ಅವರ ವರ್ತನೆ, ನನ್ನನ್ನು ನೋಡುವ ರೀತಿಯ ಪ್ರಭಾವದಿಂದ, ನನಗರಿವಿಲ್ಲದಂತೆ ಸರ್ಕಸಿನಲ್ಲಿ ಪಳಗಿದ ಪ್ರಾಣಿಯಂತೆ ಆಗಿದ್ದೆ. ಪುಣ್ಯಾತ್ಮನ ಈ ವಿಚಿತ್ರ ಪ್ರಭಾವದಿಂದ ಎಂದೂ ಓದಲು ಬರೆಯಲು ಬಾರದ ,ಊರ ಉಡಾಳ ಎಂದುಹೆಸರು ಗಳಿಸಿದ್ದ ನನ್ನನ್ನು ಬಿ ಎಸ್ ಸಿ ಪದವೀಧರನನ್ನಾಗುವಂತೆ ಪ್ರೇರೇಪಿಸಿ ಒಬ್ಬ ಸಾಮಾನ್ಯ ವ್ಯಕ್ತಿಯಂತೆ ಪರಿವರ್ತಿಸಿದ್ದು ಪವಾಡವೇ ಎನ್ನಬಹುದು. ಈ ವಿಚಾರಕ್ಕೆ, ಶ್ರೀಯುತರಿಗೆ ನಾನು ಚಿರಋಣಿ..

       ರಾಜ್ಯ ಪ್ರಶಸ್ತಿ ವಿಜೇತ ಸನ್ಮಾನ್ಯ ತುಷಾರ್ ಅವರು ಹೇಳಿದಂತೆ, "ಬರಿ ಅಕ್ಷರ ಕಲಿಸುವುದು ವಿದ್ಯೆಯನ್ನು  ಕೊಟ್ಟಂತಲ್ಲ ,ಬೇರೆ ಬೇರೆ ವಿಷಯಗಳ ಬಗ್ಗೆ ಜ್ಞಾನ ಮೂಡಿಸುವುದು ವಿದ್ಯೆಯನ್ನು ಕೊಟ್ಟಂತಲ್ಲ .ಆದರೆ ವ್ಯಕ್ತಿಯ ನಡುವಳಿಕೆಯಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವಂತೆ ಪ್ರೇರೇಪಿಸಿ ಬದಲಾವಣೆ ತರುವವನೇ ನಿಜವಾದ ಶಿಕ್ಷಕ,,
ಎನ್ನುವ ಹೇಳಿಕೆಯನ್ನು ನನ್ನ ಜೀವನದ ಮೂಲಕ ಸಿದ್ದ ಮಾಡಿ ತೋರಿಸಿದ್ದು ನನ್ನ ಗುರುಗಳು .
      .   ನನ್ನ ಗುರುಗಳು ನಿಜವಾದ ಶಿಕ್ಷಕರು ಎನ್ನುವುದಕ್ಕೆ ಒಂದು ಜೀವಂತ ಉದಾಹರಣೆ ನಾನು. ದೃಷ್ಟಾಂತ ದೊಂದಿಗೆ ಇದನ್ನೇ ನನ್ನಲ್ಲಿ ಆದ ಬದಲಾವಣೆಯನ್ನು ಹೇಳಿಕೊಳ್ಳುವ ಅದೃಷ್ಟ ಸಿಕ್ಕಿದ್ದು ನನಗೊಬ್ಬನಿಗೆ ಆದರೆ ನನ್ನಂತಹ ಅನೇಕ ಜನರನ್ನು ತಿದ್ದಿರುವ ಶ್ರೇಯಸ್ಸು ನಿಜವಾದ ಅರ್ಥದಲ್ಲಿ ಗುರು ಅನಿಸಿಕೊಳ್ಳುವ ನನ್ನ ಗುರುಗಳದ್ದು...
ಅಲ್ಲಲ್ಲ, ಮಹಾಗುರುಗಳದ್ದು...






[ 

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...