ಎತ್ತರದ ವ್ಯಕ್ತಿತ್ವ ನನ್ನ ಪೆನ್ನಿಗೆ ಸಿಗಲು
ಸಾಧ್ಯವೇ ಎಂದೂ ಅನುಮಾನ ವಾಯ್ತು.ನಾನೊಬ್ಬನೇ ಅವನಿಂದ ಏನೋ ಸ್ವಲ್ಪಮಟ್ಟಿಗೆ ಸಹಾಯ ಪಡೆದಿದ್ದರೆ ಅದನ್ನು ದಾಖಲಿಸಬಹುದು. ನಮ್ಮ ಅವ್ವ/ ಮೂವರೂ ಅಣ್ಣತಮ್ಮಂದಿರು, ಅಷ್ಟೇ ಏಕೆ ಅವನ ಪರಿಚಯಸ್ಥರೆಲ್ಲರೂ ಒಂದಿಲ್ಲ ಒಂದು ರೀತಿಯಲ್ಲಿ ಅವನ ಸಹಾಯ ಪಡೆದವರೇ.
ನಮ್ಮ ಶಿಕ್ಷಣ/ ನೌಕರಿ/ ಮನೆಯ ಆಗುಹೋಗುಗಳು ಎಲ್ಲದ ರಲ್ಲಿಯೂ ಅವನ ಸಹಾಯ ಹಸ್ತವಿದ್ದೇ ಇದೆ . ಎಷ್ಟೂಂತ ಅವನ ಬಳಿ ಹೋಗುವದು ಎಂದು ನಾವು ಹಿಂಜರಿದರೂ ಸಹಾಯದ ಅನಿವಾರ್ಯತೆ ಬಂದಾಗ ಅದನ್ನು ತಾನೇ ಊಹಿಸಿ ಸ್ವತಃ ಬಂದು ಸಹಾಯ ಮಾಡಿದ್ದೂ ಇದೆ.ಹಾಗೆಂದರೆ ಅವನ ಬಳಿ ಬೇಕಾದಷ್ಟು ಹಣವಿತ್ತು ಎಂದಲ್ಲ.ಅವನದೂ ತೊಂದರೆ ಅವನಿಗೆ ಹಾಸಿ ಹೊದೆಯುವಷ್ಟು ಇದ್ದರೂ " ಬಂದ ಕಷ್ಟ ಮೊದಲು ದಾಟಲಿ ,ಮುಂದಿನದು ಮುಂದೆ"- ಎಂಬ ನಿಲುವು...
ನಮ್ಮ ದೊಡ್ಡ ಅಣ್ಣ/ ವೈನಿಗೆ ಅವನ ಕಾಲೇಜಿನಲ್ಲಿಯೇ ಕೆಲಸ ಕೊಟ್ಟು, ನಡುವಿನ ಅಣ್ಣನಿಗೆ ವಿದ್ಯಾಭ್ಯಾಸದ ಜವಾಬ್ದಾರಿ ನೋಡಿಕೊಂಡು, ನನಗೂ ಅವಶ್ಯವಿದ್ದಾಗೆಲ್ಲ ಬೇಕೆಂದ ನೆರವು ನೀಡಿದ ಪರಿಣಾಮವೇ ನಾವೆಲ್ಲ ಇಂದು
ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾದುದು. ನಮ್ಮವ್ವ/ ಅಪ್ಪ
ಸ್ವರ್ಗದಲ್ಲಿಯೂ ನಮಗೆ ಸಂತೋಷ ದಿಂದ ಹರಸುತ್ತಿರುವದು...ಅವನನ್ನು ನೋಡು ನೋಡುತ್ತಲೇ ಬೆಳೆದ ನಮಗೆ
ಒಳ್ಳೆಯ ಸಂಸ್ಕಾರ/ ಸಹನೆ/ ಇತರರ ಕಷ್ಟಕ್ಕೆ ನೆರವಾಗುವದು ಇವೆಲ್ಲ ಗುಣಗಳ ಪರಿಚಯವಾದದ್ದು...
ನನಗೆ ದೇವರ ಮೇಲೆ ನಂಬಿಕೆ
ಬಹಳ. ನೌಕರಿಯ ಮಧ್ಯದಲ್ಲಿಯೂ
ನನಗೆ ಆದಷ್ಟು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿದಾಗ ನಾನು ಬೇಡುವದು ನಮ್ಮ ಮಾಮಾನ
ಆರೋಗ್ಯ ಚನ್ನಾಗಿರಲಿ.ಅವನು ಕಂಡ ಕನಸುಗಳೆಲ್ಲ ನಿಜವಾಗಲಿ- ಎಂದೇ. ಏಕೆಂದರೆ ಅವನಂಥವನೊಬ್ಬ ಜೊತೆಗಿದ್ದರೆ ಎಂಥ ಕಷ್ಟಗಳನ್ನೂ ಅವನಂತೆಯೇ ಎದುರಿಸಬಹುದು, ಅಗಾಧ ಯಶಸ್ಸು ಸಾಧಿಸಬಹುದು ಎಂಬುದು ಎಲ್ಲರ ಧೈರ್ಯ.ಈಗವನಿಗೆ ಎಂಬತ್ತು. ಇಷ್ಟರಲ್ಲಿಯೇ ಅವನಿಗೆ ಎಂಬತ್ತೊಂದು ಮುಗಿಯುತ್ತದೆ.
ಆದರೆ ಅವನ ಜೀವನದ ಉತ್ಸಾಹಕ್ಕೆ
ಕುಂದಿಲ್ಲ.ಮಾಡಬೇಕಾದ ಕೆಲಸಗಳ ಪಟ್ಟಿ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ.
ಅವನ ಯಾವ ಕನಸೂ ಹುಸಿಹೋಗದಿರಲಿ ಎಂಬುದೇ ಅವನ
ಹುಟ್ಟುಹಬ್ಬದಂದು ನಾವೆಲ್ಲ ಅಣ್ಣ ತಮ್ಮಂದಿರು ಭಗವಾನ್ ನಾರಾಯಣ ನಲ್ಲಿ ಬೇಡುತ್ತೇವೆ.
ಗಿರೀಶ ಶಿರೋಳ...
No comments:
Post a Comment