Thursday, 24 December 2020

3. ಹೀಗೊಂದು ಕಥೆ ಅಲ್ಲದ ಕಥೆ...

ಹೀಗೊಂದು  ಕಥೆ  ಅಲ್ಲದ ಕಥೆ...
       ‌‌     
  *ಒಂದು  ಊರಿನಲ್ಲಿ  ಒಬ್ಬ  ಬಡ ಬ್ರಾಮ್ಹಣನಿದ್ದ .
ಅವನಿಗೆ  ಮನೆತುಂಬ  ಮಕ್ಕಳು.

* ಒಂದೂರಿನಲ್ಲಿ  ಒಬ್ಬ  ರಾಜನಿದ್ದ. ಅವನಿಗೆ  ಮಕ್ಕಳೇ  ಇರಲಿಲ್ಲ.

   ‌‌        ನಾವು  ಸಣ್ಣವರಿದ್ದಾಗ  ಕೇಳಿದ ಕಥೆಗಳೆಲ್ಲ  ಹೆಚ್ಚು  ಕಡಿಮೆ ಶುರುವಾಗುತ್ತಿದ್ದುದೇ  ಇವೆರಡು  ವಾಕ್ಯಗಳಿಂದ.  ಮನೆತುಂಬ  ಇದ್ದ ಮಕ್ಕಳೇ  ಅವನ  ಬಡತನಕ್ಕೆ ಕಾರಣವಿದ್ದ ಹಾಗೆ, ಇಲ್ಲವೇ ಮಕ್ಕಳಿಲ್ಲ ಎಂಬ ಕಾರಣಕ್ಕಾಗಿ  ಇನ್ನೊಬ್ಬ  ರಾಜನಾಗುವಷ್ಟು  ಶ್ರೀಮಂತನಾಗಿದ್ದ  ಎಂಬುದನ್ನು  ಮಕ್ಕಳಾದ  ನಮಗೆ ತಿಳಿಹೇಳುವಂತೆ  ನಮಗೆ  ಅನಿಸುತ್ತಿತ್ತು.

           ಆದರೆ  ಈಗಿನ,  ಇಂದಿನವರ ಕಥೆಯೇ ಬೇರೆ  ರೀತಿಯದು.

 ‌‌‌        ‌"ರಾಜನಷ್ಟು  ಶ್ರೀಮಂತ -ನಾದವನೊಬ್ಬ  ಬಡ ಬ್ರಾಮ್ಹಣನಂತೆ  ಬದುಕು  ಸವೆಸುತ್ತಿದ್ದ  ಎಂದು ಬಹುಶಃ ಪ್ರಾರಂಭಿಸಬೇಕೇನೋ.

ಅವನಿಗೆ  ಅರಮನೆಯಂಥ
ಮನೆಯಿತ್ತು. ಆದರೆ  ಅವನು  ಮಲಗಲು ಮಾತ್ರ  ಮನೆಗೆ ಬರುತ್ತಿದ್ದ. ದೊಡ್ಡ ಬಂಗಲೆಯ ಸುತ್ತ  ಹಚ್ಚ  ಹಸಿರು ಕೈದೋಟವಿತ್ತು. ಆದರೆ  ಆಫೀಸಿನ  AC ರೂಮಲ್ಲಿ  ಕ್ಷಣಕ್ಷಣವೂ  ಉಸಿರು
ಗಟ್ಟುತ್ತಿದ್ದ.  ಮನೆಯಲ್ಲಿ  ಹೆಂಡತಿ, ಮಕ್ಕಳು  ಅವನಿಗಾಗಿ  ಕಾಯುತ್ತಿದ್ದರೂ ಅವನು  ಇನ್ನಾರದೋ  call ಗಳಿಗೆ
ಕಾದು  ಹಣ್ಣಾಗುತ್ತಿದ್ದ. Natural call ಗಳಿಗೆ ಮಾತ್ರ ಈ call ಗಳಿಂದ ಅವನಿಗೆ ಮುಕ್ತಿ  ಬಹುಶಃ  ಸಿಗುತ್ತಿತ್ತು.
ಮನೆಯಲ್ಲಿ  ತರಹಾವರಿ  ಸ್ವಾದಿಷ್ಟ ಅಡುಗೆ  ಆಗುತ್ತಿದ್ದರೂ  ಅವನದು  ಬೆಳಿಗ್ಗೆ  ಡಬ್ಬಿಗೆ  ಹಾಕಿದ , ಅವಸರದಲ್ಲಿ ಮಾಡಿದ ಅಡುಗೆ  ಇಲ್ಲವೇ  ಆಫೀಸಿನ  ಕ್ಯಾಂಟೀನ್ ಗಳ  ಉಪಚಾರ.  'ಕನಸಿನ ಕನ್ಯೆ'  ಮಡದಿಯಾಗಿದ್ದರೂ,  ಕನಸಿನ  ಅರಮನೆಯಂಥ  ಮನೆಯ  ಒಡೆಯ
ನಾಗಿದ್ದಾಗ್ಯೂ   ರಸ್ತೆಯ  signal ಗಳಲ್ಲಿಯೇ  ಬದುಕು  ಸವೆದು,  ಸರಿದು , ಸದ್ದೇ  ಇಲ್ಲದೇ  ಕಳೆದು ಹೋಗುತ್ತಿತ್ತು. ದಿನವಿಡೀ  ಅಪರಿಚಿತ  clients ಗಳೊಂದಿಗೆ  ನಗುವಿನ  ಮುಖವಾಡ
ಧರಿಸಿಯೇ ಮಾತನಾಡಲೇಬೇಕಾದ
ಬೇಕಾದ  ಅನಿವಾರ್ಯತೆ, ಅಸಹಾಯಕತೆ  ಅವನನ್ನು  ಎಷ್ಟು ದಣಿಸುತ್ತಿದ್ದವೆಂದರೆ  ಮನೆಗೆ 
ಬಂದಮೇಲೆ  ಯಾರೊಂದಿಗೂ ಮಾತು ಬೇಡ  ಎಂಬ  ಮನಸ್ಥಿತಿಯುಂಟಾಗಿ  ಬಿಡುತ್ತಿತ್ತು.  ಮನಸ್ಸಿಗೆ  ಈ  ಬದುಕು ಬೇಡವಾಗಿದ್ದರೂ RAT RACE ನಲ್ಲಿ ಸಿಕ್ಕು  ಹೊರಬರಲಾರದ  ಸಂದಿಗ್ಧತೆ.  ತಾನೇ  ಹಗ್ಗ  ಕೊಟ್ಟು ಕೈ  ಕಟ್ಟಿಸಿಕೊಂಡು
ಬಿಚ್ಚಿಕೊಳ್ಳಲಾಗದಂಥ  ವಿಪರ್ಯಾಸ.

ಒಟ್ಟಿನಲ್ಲಿ,  ಬದುಕಿಡೀ  ಕಷ್ಟಪಟ್ಟು
ಬೇಡಿ,  ಬಯಸಿ, ಗಳಿಸಿ, ಶ್ರೀಮಂತನಾಗಬೇಕು ಎಂಬ ಹಂಬಲವನ್ನು ಸಾಕಾರಗೊಳಿಸಿಕೊಂಡೂ
' ಎಲ್ಲ ಇದ್ದರೂ ಏನೇನೂ ಇಲ್ಲದ
ದಟ್ಟ ದರಿದ್ರ'ನಂಥ  ಬದುಕನ್ನು  ಬಾಳಿದವ.

ಕಾಲ,  ಕಾಲು  ಎರಡೂ  ಮುಂದೆ ಮುಂದೆ.  ಆದರೆ  ದೃಷ್ಟಿ,  ನೋಟ  ಮಾತ್ರ ಏನನ್ನೋ  ಕಳೆದುಕೊಂಡು  ಹುಡುಕು
ವಂತೆ,  ಹಿಂದೆ...ಹಿಂದೆ...ಹಿಂದೆ...
Things are not what they seem to be."

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...