Thursday, 24 December 2020

5. Un heard melodies are sweeter...

  3.  Un  heard  melodies  may  be sweeter...
       
        ‌ ಈ  ದಿನ  ಬೆಳಿಗ್ಗೆ  ನನಗೆ  ಒಂದು ಫೋನು  ಬಂತು.   ತಮ್ಮ  ಪರಿಚಯ ಹೇಳಿಕೊಂಡ  ವ್ಯಕ್ತಿಯೊಬ್ಬರು  "madam  ನಿಮ್ಮ   ಜೊತೆ   ಸ್ವಲ್ಪು ವಿಚಾರ  ಮಾತಾಡಬೇಕಿತ್ತು , ಯಾವಾಗ ಫೋನು ಮಾಡಲಿ?"  ಎಂದು  ಕೇಳಿದರು. ನಾನು  time  ಹೇಳಿದೆ. ಸರಿಯಾದ ವೇಳೆಗೆ  ಫೋನು ರಿಂಗಾಯಿತು. ಫೋನು ಮಾಡಿದವರು  ಅತಿ  ಉತ್ಸಾಹದಿಂದ ತಮ್ಮ  ತಂದೆ-ತಾಯಿ,  ತಾತ ಮುತ್ತಜ್ಜಂದಿರ,  ಬಗ್ಗೆ  ವಿವರವಾಗಿ ವಿಷಯ  ಹೇಳಿದರು. ಅವರೂರಿನಲ್ಲಿ ತಂದೆ/ ತಾಯಿ ಇರುವದಾಗಿ ತಿಳಿಸಿ ಅವರ ಬಳಿ  ಸಾಕಷ್ಟು  ಸ್ವಾನುಭವಗಳ ಸಂಗ್ರಹವಿರುವದಾಗಿಯೂ ,ಅದು  ಅವರ  ಜೊತೆ  ಕೊನೆಯಾಗದೇ ದಾಖಲಾಗಿ  ಉಳಿಯಲು  ತಾವು  
ಇಚ್ಛಿಸುತ್ತಿರುವದಾಗಿಯೂ  ಹೇಳಿ  ನಾನು ಆ  ಕೆಲಸ ಅವರ ಪರವಾಗಿ ಮಾಡಬಹುದೇ ಎಂದು ಕೇಳಿದರು.( ghost writing) 80 ಮಿಕ್ಕಿದ ದಂಪತಿಗಳ  ಅನುಭವಗಳ  ಬುತ್ತಿಯ ದಾಖಲಾತಿ  ಹೇಗೆ  ನೋಡಿದರೂ ಉತ್ತಮ  ವಿಚಾರವೇನೋ ಹೌದು,  ಆದರೆ   ಬರೆಯುವವರು   ಅವರನ್ನು  ಮೇಲಿಂದ  ಮೇಲೆ  ಸ್ವತಃ  ಹೋಗಿ ಭೇಟಿಯಾಗಬೇಕು,  ಅವರನ್ನು  ಸಹನೆಯಿಂದ  ಪುಸಲಾಯಿಸಿ,  ಪ್ರಶ್ನಿಸಿ  ವಿಷಯಗಳನ್ನು  ಸಂಗ್ರಹಿಸಿ,  ಪಡೆದುಕೊಂಡ  ವಿಷಯ ವಸ್ತುವಿಗೆ  ಅಪಚಾರವಾಗದಂತೆ ವಸ್ತುನಿಷ್ಠವಾಗಿ  ಕಾಲಕಾಲಕ್ಕೆ  ದಾಖಲಿಸಿಕೊಳ್ಳಬೇಕು. ಅದಕ್ಕೆ  ನಾನು  ಸಧ್ಯಕ್ಕೆ  ಸರಿಯಾದ ಆಯ್ಕೆಯಲ್ಲ ಅನಿಸಿತು. ನನಗೆ   ಎಪ್ಪತ್ತೈದರ  ಅಂಚು. ಕಣ್ಣಿನ  ದೃಷ್ಟಿಯ ತೊಂದರೆ. ಆ  ಕೆಲಸ  ಒಪ್ಪಿಕೊಂಡು ಮಾಡಿ  ಮುಗಿಸಲು  ಬೇಕಾಗುವಷ್ಟು ವೇಳೆ,  ತಾಳ್ಮೆ,  ದೈಹಿಕ ಸಾಮರ್ಥ್ಯ ಇವಾವವೂ  ನನ್ನಲ್ಲಿಲ್ಲ. ಅವನ್ನು ಆಹ್ವಾನವೆಂದು  ಸ್ವೀಕರಿಸಿ  ಮಾಡಿ ತೋರಿಸುವ  ಮನಸ್ಸು/ ವಯಸ್ಸು ಎರಡೂ  ನನ್ನದಲ್ಲ  ಅನಿಸಿ  ಅವರಿಗೆ ಅದನ್ನು  ವಿವರಿಸಿ  ಹೇಳಿ ನಿರಾಶೆಗೊಳಿಸಬೇಕಾಯಿತು. ಅವರಿಗೆ ನನ್ನ  ಪರಿಸ್ಥಿತಿ  ಅರ್ಥವಾಗಿ  thanks ಹೇಳಿ,  ಮಾತಾಡಿದ್ದಕ್ಕೆ  ಸಂತೋಷ ವ್ಯಕ್ತಪಡಿಸಿ  ಫೋನಿಟ್ಟರು.
   ‌‌‌       ‌‌‌‌‌       ‌ ನನಗಾಗ  ಅನಿಸಿದ್ದು: ಬಹುಶಃ  ಇನ್ನೆಷ್ಟು  ಹಿರಿಯರಲ್ಲಿ ಅನುಭವಗಳ  ಅಪಾರ  ಕಣಜವಿದೆಯೋ,  ಅದನ್ನು ದಾಖಲಿಸಬೇಕೆಂಬ ತುಡಿತವಿದೆಯೋ ,ಅದನ್ನು  ಮಾಡಲಾಗದ  ಹತಾಶೆ/ ನಿರಾಶೆಗಳಿವೆಯೋ ಎಂಬುದೂ ವಿಚಾರ ಯೋಗ್ಯ  ವಿಷಯ  ಅನಿಸಲು ಸುರುವಿಟ್ಟುಕೊಂಡುಬಿಟ್ಟಿತು. ಹಿರಿಯರಿಗೆ  ಕೇಳುಗರ  ಜೊತೆ  ಇಲ್ಲದೇ ಹೇಳಬೇಕೆಂದುಕೊಂಡುದನ್ನು  ಕೇಳಲು ಕಿವಿಗಳು  ಸಿಗದೇ ಹೊರಬರದೇ ಉಸಿರುಗಟ್ಟಿಸೊ  ಕಥೆಗಳಿನ್ನೆಷ್ಟೋ! ಬರೆಯುವ  ಹುಚ್ಚು , ತುಡಿತ,  ಯೋಗ್ಯತೆ,  ಸಮಯ, ಕ್ಷಮತೆ ಇರುವವರು ಈ ದಿಶೆಯಲ್ಲಿ ಯೋಚಿಸಿದರೆ  ಹೇಗೆ  ಎಂದು  ಅರೆಗಳಿಗೆ ಅನಿಸಿದ್ದು  ಸುಳ್ಳಲ್ಲ. ಮುಂದೊಂದು  ದಿನ  ಇದೂ  ಕೂಡ  ಹೆಚ್ಚಾಗಿಯೇ ಚಾಲತಿಗೆ ಬರಬಹುದು. ಬಂದರೆ ಹಿರಿಯರ  ಮನದ  ತುಡಿತಗಳಿಗೊಂದು ಅಕ್ಷರ  ರೂಪ  ದೊರೆಯುತ್ತದೆ ಅಲ್ಲದೇ   ಮುಂದಿನ  ಪೀಳಿಗೆಗೂ  ಅನ್ನದ  ಮಾರ್ಗವಾಗುವದರ  ಜೊತೆಜೊತೆಗೆ    ಜ್ಞಾನ  ಸಂಪಾದನೆಗೂ   ದಾರಿ ದೀಪವಾದರೆ  ಅಚ್ಚರಿ  ಏನಿದೆ????
             ‌ಕೆಲ  ನಿರುದ್ಯೋಗವಿರುವವರ,
ಆದರೆ  ಉದ್ಯೋಗ  ಬಯಸುತ್ತಿರುವವರ
ದೃಷ್ಟಿಕೋನದಿಂದ  ಈ  ಪ್ರಯೋಗ  ಪ್ರಯೋಜನಕಾರಿ  ಆಗಲೂ ಬಹುದೇನೋ!!!

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...