Monday, 5 May 2025

1) Go to google photos
2) click on collection near the bottom of the screen
3)click on people 

Tuesday, 29 April 2025

Tuesday, 15 April 2025

      ಬದುಕಿನಲ್ಲಿ ನನ್ನ ಶಕ್ತಿ ಇದ್ದಷ್ಟು/ ನನಗೆ ತಿಳಿದಷ್ಟು/ನಾನು ಅಂದುಕೊಂಡ ದ್ದು ಮಾಡಬಹುದಾದದ್ದನ್ನು ಮಾಡಿ ಆಯಿತಾ- ಗೊತ್ತಿಲ್ಲ.ಆದರೆ ಈಗೀಗ 
ಏನು ಮಾಡಬಹುದು? ಮತ್ತೇನು
ಉಳಿದಿದೆ- ಇಂಥ ವಿಚಾರಗಳೂ ಕೂಡ
ಇಳಿಮುಖವಾಗತೊಡಗಿವೆ.ದೇಹ- ಮನಸ್ಸು ಮೇಳ ಎಲ್ಲೋ ತಪ್ಪುತ್ತಿವೆ.
ಒಮ್ಮೊಮ್ಮೆ ಏನಾದರೂ ಮಾಡತೊಡಗಿ ದ ಸ್ವಲ್ಪಕಾಲದ ನಂತರ ಸಾಕು ಅನಿಸುತ್ತದೆ.
   ‌‌‌‌         ಬಿಟ್ಟು ಬಿಡುವುದು- ಸುಲಭ.
ಮನೆಯಿಂದ ಎಲ್ಲರೂ ತಮ್ಮ ತಮ್ಮ
ಕೆಲಸಕ್ಕೆ ಅಂತ ಹೋದಮೇಲೆ ಏನು
ಮಾಡುವುದು?ಮಲಗಿದರೆ ರಾತ್ರಿ ಪೇಚು.TV ನೋಡುವುದು/ Fb ನೋಡುವುದಕ್ಕೂ ಎಷ್ಟು ಸಮಯ
ಕೊಡಬಹುದು...ದಿನಾಲೂ ಯಾರ ಮನೆಗೆ ಹೋಗುವುದು?ಯಾರನ್ನು
ಮನೆಗೆ ಕರೆಯುವುದು?ಬೆಂಗಳೂರಿನ ಲ್ಲಿ ಯಾವದೂ ಸಲಭವಲ್ಲ...




Sunday, 13 April 2025

               ನನ್ನ ಹಿರಿ ಮಗಳಿಗೆ ಚಿಕ್ಕಂದಿನಿಂದಲೂ ಅಭ್ಯಾಸಕ್ಕಿಂತ ಉಳಿದ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ...ರಂಗೋಲಿ/ ಹೊಲಿಗೆ/ painting/fashion designing/
Soft toys ತಯಾರಿಕೆ/ಜೀನ್ಸ ಬಟ್ಟೆ ಗಳಲ್ಲಿ bagsಗಳನ್ನು ಮಾಡುವುದು/
 ಮೆಹಂದಿ-ಹಾಕುವುದು/ beauty parlor course ಕಲಿಕೆ - ಇನ್ನೂ ಏನೇನೋ...ಧಾರವಾಡದಲ್ಲಿ ಕಲಿತ ಮೇಲೆ ಬೆಂಗಳೂರಿನಲ್ಲೂ ಒಂದು ವರ್ಷದ ಕೋರ್ಸ ಮುಗಿಸಿ ಹೊಲಿಗೆಯ
Class ಗಳನ್ನು ನಡೆಸತೊಡಗಿದಳು...
ಚಿಕ್ಕವಳಿಗೆ ಅಭ್ಯಾಸದಲ್ಲಿ ಆಸಕ್ತಿ...
ನಡುವೆ break ತಗೊಂಡು ಅವಳೂ
ಹೊಲಿಯುವುದನ್ನು ಕಲಿತಳು.ಅಕ್ಕನಿಗೆ
ಆದಷ್ಟು ಸಹಾಯ ಮಾಡಿದಾಗಲೆಲ್ಲ
ತನಗೆ ಬಂದ ಹಣದಲ್ಲಿ ಅವಳ ಪಾಲು
ಎಂಬಂತೆ ಒಂದಿಷ್ಟು ಅವಳಿಗೂ ಕೊಡು
ವ ಪರಿಪಾಠವಿತ್ತು.ಅಕ್ಕನಂತೆ ತಂಗಿಗೆ
ಅಲಂಕಾರ/ಬಟ್ಟೆ- ಬರೆಯಲ್ಲಿ ವಿಶೇಷ ಆಸಕ್ತಿ ಇರಲಿಲ್ಲ.ತನಗೆ ಸಿಕ್ಕ ಹಣ ಕೂಡಿಟ್ಟು ಕೊಂಡು ಒಂದು ಹೆಣ್ಣು ಗೊಂಬೆ ಖರೀದಿಸಿ,ಅದಕ್ಕೆ ಚಂದಚಂದ
ದ ಬಟ್ಟೆಗಳನ್ನು ಹೊಲಿದು ಹಾಕುವು ದಕ್ಕೆ ಶುರುವಿಟ್ಟುಕೊಂಡಳು.ಸದಾ ಓದುವ ಅವಳಿಗೆ ಆ ಚಟುವಟಿಕೆ ತುಂಬ Mood freshener ಆಗಿ ಸಹಾಯಕವಾಗಿತ್ತು.ಅದೇ ಗೊಂಬೆ
ಯೊಂದನ್ನು ಇಷ್ಟಪಟ್ಟು ಗಂಡನ ಮನೆಗೂ ತಂದಿಟ್ಟುಕೊಂಡಳು...ಆದರೆ
ಎರಡೂ ಗಂಡು ಮಕ್ಕಳಾದಾಗ ನಿರಾಶೆ
ಯಾದದ್ದು ನನಗೆ...
           ಆಗಾಗ ಅವಳ ಪುಟ್ಟ ಮಗನ ಕೈಯಲ್ಲೂ ಅದು ಕೆಲಕಾಲ ಇರುತ್ತಿತ್ತು...
ಮೊನ್ನೆ ಸಿಕ್ಕ ಫೋಟೋ ಒಂದರಲ್ಲಿ ಆ
ಗೊಂಬೆ ಸಿಕ್ಕಾಗ ಮೊಮ್ಮಗನಿಗಿಂತ ಗೊಂಬೆಯನ್ನೇ ಹೆಚ್ಚು ಮುದ್ದಾಡಿದ್ದು
ನಾನು...
       

Saturday, 12 April 2025

     ‌‌‌‌    ಒಬ್ಬಳೇ ಕುಳಿತಾಗ, ಏನೂ ಮಾಡಲು ಮನಸ್ಸಿಗೆ ಬೇಡವಾದಾಗ
ಹಳೆಯ ಫೋಟೋಗಳನ್ನು ನೋಡುತ್ತಾ ಆ ದಿನಕ್ಕೆ ಇಳಿಯುತ್ತಾ,ಆ ದಿನವನ್ನು
ಮರು ಸೃಷ್ಟಿಸುತ್ತ, ಸುತ್ತಲಿನ ಜಗತ್ತನ್ನು
ಕೆಲ ಕಾಲ ಕಣ್ಣೆದುರಿನಿಂದ ಮರೆ ಮಾಡುವ ಕಲೆ ನನಗೆ ತುಂಬ ಇಷ್ಟ...
ಅವೇ ನೆನಪುಗಳು ಹಸಿರುದುಂಬಿ 
ಪುನಃ ಬದುಕನ್ನು ಪ್ರೀತಿಸಲು ಕಲಿಸಿ
ಎಷ್ಟೋಸಲ ಅಕ್ಷರ ರೂಪದಲ್ಲಿ ಮರುಜೀವ ಪಡೆದು ಪುಸ್ತಕದ ಸಜೀವ
ಪುಟಗಳಾಗಿವೆ.
    ‌‌‌          ‌ಕೆಳಗಿನ ಎರಡೂ ಚಿತ್ರಗಳು
ನನ್ನ ಆಪ್ತ ಲಿಸ್ಟಗೆ ಸೇರಿದವುಗಳು.
ಮಗಳು/ಅಳಿಯ ಇಬ್ಬರೂ ನೌಕರಿ
ದೆಸೆಯಿಂದಾಗಿ ಇಡೀದಿನ ಹೊರಗಿರು ತ್ತಿದ್ದಾಗ ಮನೆಯಲ್ಲಿದ್ದ ನನ್ನ ಜೊತೆಗಿದ್ದ ಸಹಾಯಕಿರಿವರು...ಲಕ್ಷ್ಮಿ ಹಾಗೂ ಮಂಜುಳ... ಮೊಮ್ಮಕ್ಕಳ ಭಾರ ಹೊತ್ತು ಮನೆಯವರೊಂದಿಗೆ
ಮನೆಯವರಾಗಿ ಬೆರೆತು ಅನಿವಾರ್ಯ ವಾಗಿ ಬೇರೆಯಾಗುವ ಹೊತ್ತು ಬಂದಾಗ ನಮಗಿಂತಲೂ ಹೆಚ್ಚು ಒದ್ದಾಡಿದ ಜೀವಗಳು...
            ಈಗ ಎಲ್ಲಿದ್ದಾರೋ/ ಹೇಗಿದ್ದಾರೋ ಗೊತ್ತಿಲ್ಲ, ಆದರೆ ನನ್ನ 
ಮನಸ್ಸಿನಲ್ಲಿ ಎಂದೆಂದಿಗೂ ಅಂದಿನಂತೆ ಯೇ ಇದ್ದಾರೆ...ಇರುತ್ತಾರೆ.
       

Thursday, 10 April 2025

ಏಕೆ?

ಬದುಕಿನ ಈ ದಾರಿಯಲ್ಲಿ ನಾವು
ಏಕಿಷ್ಟು ಅಸಹಾಯಕರಾಗಿದ್ದೇವೆ? ಒಬ್ಬರಿಗೊಬ್ಬರು ದೂರವಾಗುವಷ್ಟು
ಹತ್ತಿರವಾಗಿದ್ದೇವೆ?

"ನಮಗಾವ ಸಂತಸವೂ ಇಲ್ಲ-"
ಎನ್ನುವಂತೇನೂ ಇಲ್ಲ...
ಆದರೆ ಈ  'ಬದುಕು
ನಿಜವಾದ ಬದುಕೇ ಅಲ್ಲ'-
ಅನಿಸುವುದಾದರೂ ಏಕೆ?

ಯಾಕಾಗಿ ಬದುಕಿನ ನಿರ್ಧಾರಗಳನ್ನು
ನಾವು ಒಪ್ಪುತ್ತಲೇ ಹೋಗುತ್ತೇವೆ???
ಒಬ್ಬರಿಗೊಬ್ಬರು ದೂರವಾಗುವಷ್ಟು
ಹತ್ತಿರವಾಗಿ ಬಿಡುತ್ತೇವೆ?

ನಿನ್ನನ್ನು ಪಡೆದುಕೊಂಡ ಮೇಲೂ
ಕಳೆದುಕೊಂಡ ಭಾವವೇಕೆ?
ನಾನು ಪ್ರೀತಿಗಾಗಿ ಅತ್ತರೆ
ಪ್ರೀತಿ ನನಗಾಗಿ ಅಳುವುದೇಕೆ?

ಕಣ್ರೆಪ್ಪೆಗಳ ಅಂಚಿನಿಂದ
ಕನಸುಗಳು ಜಾರಿ ಚೂರುಚೂರಾದದ್ದಾದರೂ ಏಕೆ?
ಒಬ್ಬರಿಗೊಬ್ಬರು ದೂರಾಗುವಷ್ಟು
ಹತ್ತಿರವಾದದ್ದಾದರೂ ಏಕೆ???

Wednesday, 9 April 2025

ಮೊನ್ನೆ ಶ್ರೀನಿವಾಸ ಕೊಟ್ಟ ಪುಸ್ತಕ
ಓದುತ್ತಿದ್ದೆ.ಈಗ ಮತ್ತೆ ಕಣ್ಣಿನ ತೊಂದರೆ
ಶುರುವಾಗಿದ್ದು ಓದುವಿಕೆ ಅಷ್ಟಾಗಿ ಇಲ್ಲ. ಬಿಡಿ ಬರಹಗಳು ಚಿಕ್ಕವಿದ್ದುದರಿಂದ
ಯಾವುದನ್ನು ಬೇಕಾದರೂ ಓದಬಹು ದಾದ ಅನುಕೂಲತೆ ಇದೆ...
        ‌    ವಿಷಯದ ಕಾಲ ನಮ್ಮ ತಂದೆಯದೇ( ಮೂರು ವರ್ಷಗಳಿಗೆ
ಚಿಕ್ಕವರು) ಆದದ್ದರಿಂದ ಅವರ ಕೌಟುಂಬಿಕ / ಪಾರಿವಾರಿಕ
ಸಾಂಸಾರಿಕ /ವಿಷಯಗಳ ಸಾಮ್ಯತೆ
ಎಷ್ಟಿದೆ ಅಂದರೆ ಹೆಸರುಗಳಷ್ಟೇ ಬದಲಾದಂತೆ ಅನಿಸಿ ಬಿಟ್ಟಿತು.ನಾವೂ
ಏಳು ಜನ ಮಕ್ಕಳು, ಅಪ್ಪನಿಗೆ ನೌಕರಿ ಯಿಲ್ಲ.ದತ್ತಕ ಬಂದದ್ದಕ್ಕೆ ಅಪ್ಪನ ಮನೆಯದೂ ಇಲ್ಲ.ಮಕ್ಕಳನ್ನು ಒಬ್ಬೊಬ್ಬ  ನಂಟರ ಮನೆಯಲ್ಲಿ ಇಟ್ಟು
ಹೈಸ್ಕೂಲ್ ಕಲಿಸಿದ್ದು  ಎಲ್ಲವೂ ಅದೇ ಕತೆ...ಎಲ್ಲ ಸಮಸ್ಯೆ ಬಗೆಹರಿದ ಮೇಲೆ
ಈಗ ಅವುಗಳನ್ನು ಮೆಲುಕು ಹಾಕುವುದು ಸುಲಭ.ಆದರೆ ಬದುಕಿನ
ಪ್ರತಿ ಕ್ಷಣ ಸಮಸ್ಯೆ ಆದ ಅವರ ಬದುಕಿನ ಅನುಭವಗಳು ಸುಲಭಕ್ಕೆ
ಪಚನವಾಗುವುದಿಲ್ಲ...
              ದಿನಾ ಒಂದಷ್ಟು ಓದುತ್ತೇನೆ.
ಅದು ನಮ್ಮನ್ನು ನಮ್ಮವರೊಂದಿಗೆ
ಬೆಸೆಯುತ್ತದೆ... ಧನ್ಯವಾದಗಳು...

Saturday, 5 April 2025

ಚೈತ್ರಗೌರಿ ತುಂಬ ಸ್ನೇಹಪರಳು..

ಚೈತ್ರ ಗೌರಿ ತುಂಬಾ ಸ್ನೇಹಪರಳು... ಶ್ರಾವಣದ ಗೌರಿಗಿದ್ದಂತೆ ಅತಿ ಮಡಿಯ ಭಾವನೆಗಳಿಲ್ಲ...ಜನಪರ.. ಬೇಕಾದಷ್ಟು ಜನ ಸೇರಬಹುದು. ಹಾಡು- ಹಸೆ- ಆಟ- ನೋಟಗಳ ಸಂಭ್ರಮ ಸಾಕೆನಿಸು ವಷ್ಟು... ಸೇರಿದವರು ಬಯಸಿದಷ್ಟು...

             ‌‌ಇದೆಲ್ಲ ನಮ್ಮ ಮನೆಯಲ್ಲೂ
ಆಗಲೇಬೇಕು.ಬೆಂಗಳೂರಿನಲ್ಲಿಯಂತೂ ಮೂವತ್ತಕ್ಕೂ ಹೆಚ್ಚು ಜನ ಸೇರಿ
ಒಂದು ಸಾಂಸ್ಕ್ರತಿಕ ‌ಮೇಳವೇ ಅನ್ನುವಂತೆ ಆಗುತ್ತಿತ್ತು.

   ‌‌‌ ‌           ಅಮೇರಿಕಾದಲ್ಲಿಯೂ ವೈಜೂಳ ಗೆಳತಿಯರ ಗುಂಪಿದೆ.ಯಾರ ಮನೆಯಲ್ಲಿ ಏನೇ ಇರಲಿ ಎಲ್ಲರಿಗೂ
ಔತಣ- ಉಪಚಾರ- ಹಾಡು- ಹಸೆ
ಇತ್ಯಾದಿ.ಈ ಸಲ ಗೌರಿ ಹಬ್ಬ working day ಬಂದದ್ದರಿಂದ ತದಿಗೆಗೆ ಮನೆಯ/ ಕೌಟುಂಬಿಕವಾಗಿ, ವಾರದ ಕೊನೆಗೆ ಸಾಂಘಿಕ ಆಚರಣೆಗಳಾದವು...
     ‌‌    ಇಂದು ಇದೀಗ ಅದರದೊಂದು
ಝಲಕ್...
    
 

Tuesday, 1 April 2025

ಇವಳು ನಮ್ಮ ಮನೆಯ ' ಚೈತ್ರಗೌರಿ'...
ಒಟ್ಟು ಏಳು ಗೊಂಬೆಗಳ set.
ಮುಖ್ಯ ಗೌರಿ/ಇಬ್ಬರು ಜೋಕಾಲಿ
ತೂಗುವವರು/ಇಬ್ಬರು ಗೌರಿಗೆ ಚಾಮರ ಸೇವೆಗಾಗಿ/ ಇನ್ನಿಬ್ಬರು ಆರತಿ
ಮಾಡುವವರು...ಒಬ್ಬರ ಅಲಂಕಾರ/ ಸೀರೆ/ ಕೇಶ ವಿನ್ಯಾಸ ಇನ್ನೊಬ್ಬರಿಗಿಲ್ಲ- ಎಲ್ಲರದೂ ಬೇರೆ ಬೇರೆ.
             ಚೈತ್ರಮಾಸದ ತದಿಗಿಯ ದಿನ ಸ್ಥಾಪಿತಳಾಗಿ ಒಂದು ತಿಂಗಳು- ಅಂದರೆ
ಅಕ್ಷಯ ತೃತೀಯದ ವರೆಗೆ ಅವಳ ಸಡಗರ...ಪ್ರತಿದಿನ ಪೂಜೆ- ಆರತಿ/ 
ಶುಕ್ರವಾರ- ಮಂಗಳವಾರ ಮುತೈದೆ ಯರಿಗೆ ಅರಿಷಿಣ- ಕುಂಕುಮ/ ಪಾನಕ- ಕೋಸಂಬರಿ- ವೀಳ್ಯದ ಸಡಗರವಾಗ ಬೇಕು...
    ‌‌‌         ಕಾಲಕ್ಕೆ ಅಷ್ಟಿಷ್ಟು ಬದಲಾವ ಣೆಗಳೊಂದಿಗೆ ಎಲ್ಲವೂ ಸಾಂಗವಾಗಿ ನಡೆದಿದೆ.ಈಗೆರಡು ವರ್ಷಗಳಿಂದ ನಮ್ಮ ಗೌರಿಯೂ NRI ಆಗಿದ್ದಾಳೆ... ಸಧ್ಯ ಅವಳು ' ಅಮೇರಿಕಾ'ದ ವಾಸಿ...
ನನ್ನ ಸೊಸೆ ವೈಜೂ ಸಹ ಈ ಹಬ್ಬವನ್ನು
ಮನಸ್ಸಿನಿಂದ/ಹೆಚ್ಚು ಆಸ್ಥೆಯಿಂದ/ ಹೆಚ್ಚು ಸಂಭ್ರಮದಲ್ಲಿ ಆಚರಿಸುತ್ತಾಳೆ...
ನಮಗೆ ತಕ್ಷಣ ಫೋಟೋಗಳು/ ವಿಡಿಯೋಗಳು ಬಂದು ತಲುಪುತ್ತವೆ...
             ‌ ‌‌ಇಂದು ಬೆಳಿಗ್ಗೆ ಕಣ್ಣು ತೆಗೆಯುವುದಕ್ಕೆ ಮುಂಚೆಯೇ ನನ್ನ WA ಪೇಜಿನಲ್ಲಿ ಸನ್ನದ್ಧಳಾಗಿದ್ದಾಳೆ...

Sunday, 30 March 2025

             ನಮ್ಮ ಊರು ರಟ್ಟೀಹಳ್ಳಿ.
ಇನ್ನೊಬ್ಬ ಅಜ್ಜಿಯ ಊರು ಸರ್ವಜ್ಞನ ಮಾಸೂರು.ಎರಡರ ನಡುವೆ ಕೇವಲ ಐದು ಮೈಲುಗಳಷ್ಟು ಅಂತರ.ಆದರೂ
ಒಂದೋ/ಎರಡೋ ಯಾವುದೋ ಊರಿಗೆ ಹೋಗುವ ಬಸ್ಸುಗಳನ್ನು ಹಿಡಿದು, ನಡುವೆ ಇಳಿದು ಊರೊಳಗೆ
ಹೊರಡಬೇಕು.ಅದನ್ನು ಗಂಡಸರು ಅವಶ್ಯಕತೆಯಿದ್ದಾಗ ಮಾಡುತ್ತಿದ್ದರು...
ಹೆಣ್ಣುಮಕ್ಕಳು ಹೊರಟರೆ ಕೊಲ್ಲಾರಿ
ಚಕ್ಕಡಿ ಮಾಡಿ ಕರೆದುಕೊಂಡು ಹೋಗಬೇಕು...ನಮ್ಮಮ್ಮ ಅಜ್ಜಿಯ 
ಮೊದಲ ಮಗಳು.ಯಾವುದಾದರೂ
ದೊಡ್ಡ ಹಬ್ಬ ಇದ್ದರೆ ನಮ್ಮ ಅಜ್ಜಿಯೇ
ತನ್ನ ಪ್ರೀತಿಯ ಮಗಳಿಗೆ ಅಡುಗೆ ಮಾಡಿ ಐದು ಮೈಲು ನಡೆದುಕೊಂಡು
ಬಂದು/ಕೊಟ್ಟು ಹೋಗುತ್ತಿದ್ದಳಂತೆ.
            ‌‌ನಮ್ಮ ವೇಳೆಗೆ ಸ್ವಲ್ಪಮಟ್ಟಿಗೆ
ಸುಧಾರಿಸಿತ್ತು ವ್ಯವಸ್ಥೆ...ಹತ್ತಿರದ ಊರುಗಳಿಗೆ ಒಂದೋ/ಎರಡೋ
ಬಸ್ಸುಗಳು ಶುರುವಾಗಿದ್ದವು...ನಾನು
ಹತ್ತಿರದ ಧಾರವಾಡವನ್ನು ನನಗೆ
ಹದಿನೆಂಟು ವರ್ಷಗಳಾದಾಗಲೇ ನೋಡಿದೆ.
       ‌   ಕುಮಟಾಕ್ಕೆ BEd ಮಾಡಲು ಹೋದಾಗ ನನ್ನ ಮಕ್ಕಳನ್ನು ಅಮ್ಮನ ಹತ್ತಿರ ಬಿಟ್ಟರೂ ಹದಿನೈದು ದಿನ/ತಿಂಗಳಲ್ಲಿ ಎರಡು ಮೂರು ಬಸ್
ಗಳನ್ನು ಬದಲಾಯಿಸಿ ಮಕ್ಕಳನ್ನು
ನೋಡಲು ಹೋಗಬೇಕಾಗಿತ್ತು ಅವರ ಅಪ್ಪಾಜಿ...
             ಮಗ ಇಂಜಿನಿಯರಿಂಗ್ ಮುಗಿಸುವ ಹೊತ್ತಿಗೆ ಬೆಂಗಳೂರು
ಹತ್ತಿರವಾಗಿತ್ತು...ಆದರೂ ಅದೂ ಅಷ್ಟು ಸರಳವಾಗಿರಲಿಲ್ಲ.ಮೂರು/ ನಾಲ್ಕು ಜನ ಸೇರಿ ಇದ್ದು ಹಣ ಕಡಿಮೆಯಾದಾಗ ತಿಂಗಳಿಗೊಮ್ಮೆ ಊರಿಗೆ ಬರುತ್ತಿದ್ದ... ಮೊಮ್ಮಕ್ಕಳು ಹುಟ್ಟುವ ಹೊತ್ತಿಗೆ ಅಮೇರಿಕಾ/ಭಾರತ ನಡುಮನಿ- ಪಡಸಾಲೆಯಾಗಿ ಬದಲಾಗಿ ಹೋಗಿತ್ತು.
              ಈಗ ಮೂರು ಮೊಮ್ಮಕ್ಕಳು
ಮೂರು ದೇಶಗಳಲ್ಲಿದ್ದಾರೆ.ಎಲ್ಲಿ ಬೇಕಾದರೂ ಹೋಗುತ್ತಾರೆ...ಒಬ್ಬ
ಫ್ರಾನ್ಸ್ ದಲ್ಲಿ Semester Exchange
Program ಗಾಗಿ ೫ ತಿಂಗಳು ಹೋಗಿ ದ್ದು ಪ್ರತಿವಾರ ಹತ್ತಿರದ ದೇಶಗಳ visit
ಮಾಡುತ್ತಾನೆ.ಇದುವರೆಗೆ ಏಳು ದೇಶ
ಗಳನ್ನು ನೋಡಿದ್ದು ಮೇ ಒಳಗೆ
ಮತ್ತೆರಡು plan ಮಾಡಿದ್ದಾನೆ.ಒಟ್ಟು
ಒಂಬತ್ತು ನೆರೆಯ ದೇಶಗಳು...
             ಈಗ ನೋಡಿ ಮುಗಿಸಿದ್ದು-
France, Portugal, Spain, Belgium, Netherlands, Switzerland, Poland...(Latvia and Lithuania ಮುಂದಿನ list ನಲ್ಲಿ)
               ‌‌‌‌     ಇದಕ್ಕೂ ಮುಂದೆ ಇನ್ನೇನೋ!?



ಮೊದಲಿನ ಹತ್ತು ವರ್ಷಗಳು ಅಮ್ಮಾ ಅಪ್ಪನ ಎಂಟು ಜನ ಮಕ್ಕಳಲ್ಲಿ ಒಬ್ಬಳಾಗಿ...

ನಂತರದ ಹತ್ತು ವರ್ಷಗಳು ಓರಗೆಯ
ಸಖಿಯರನ್ನು ಸೇರಿಕೊಂಡು...

ಆಮೇಲಿನ ಹತ್ತು ವರ್ಷಗಳು ಧಾರವಾಡದ ಹೊಸಯಲ್ಲಾಪುರದ
(ಅಗ್ರಹಾರದ) ಸದಸ್ಯಳಾಗಿ...

ತದನಂತರದ ಹತ್ತು ವರ್ಷಗಳು ಕೌಲಗಿ
ಮನೆತನದ ಏಕೈಕ ಸೊಸೆಯ ಹೊಣೆ ಹೊತ್ತು...

ನಂತರದ ಹತ್ತು ವರ್ಷಗಳು ಮೂರು
ಮಕ್ಕಳ ಏಕೈಕ ಪೋಷಕಳಾಗಿ...

ಆಮೇಲ

ನಂತರದ ಹತ್ತು ವರ್ಷಗಳು ಮೂರು
ಮಕ್ಕಳು ದೊಡ್ಡವರಾಗಿದ್ದರಿಂದ ಹೆಚ್ಚು
ನಿರಾಳವಾಗಿ...


Saturday, 29 March 2025

     ಅಮ್ಮನ ಕೂಗಿಗೆ ನಸುಕಿನಲ್ಲೇ ಏಳೋದು/ ಬಾಗಿಲ ಹಸೆ/ ತೋರಣ/
ರಂಗೋಲಿ/ ಹೊಸ ಬಟ್ಟೆ ಹಾಕಿ ದುರ್ಗಾದೇವಿ ಗುಡಿಗೆ ಹೋಗೋದು/ ತುಂಬಿದ ಬಿಂದಿಗೆಯಲ್ಲಿ ಹೂವು/ ಮಾವು/ ಬೇವು ಸಮೇತ ದೇವಿಗೆ ಅರ್ಪಿಸಿ/ ಎಣ್ಣೆ ದೇವಿಗೆ ಹಚ್ಚಿ, ಅರ್ಧದಷ್ಟು ಮರಳಿ ತಂದು ನಮ್ಮ ಸ್ನಾನದ ನೀರಿಗೆ ಸೇರಿಸಿ ತಲೆಸ್ನಾನ ಮಾಡಿ/ ಹೊಸಬಟ್ಟೆ ಹಾಕಿ ಸಮೀಪದ
ದೇವ- ದೇವತೆಗಳು/ಗುರು- ಹಿರಿಯರು/ ಪಾಲಕರು ಎಲ್ಲರಿಗೂ
ನಮಸ್ಕರಿಸಿ,ಆಶೀರ್ವಾದ‌ ಪಡೆದು, ತಿಂಡಿ ಮುಗಿಸಿ,ಗೆಳತಿಯರ ಮನೆ ಸುತ್ತಾಡಿ, ಮಧ್ಯಾನ್ಹ ಹೋಳಿಗೆ ಉಂಡು/ಸಂಜೆ ತಿಳಿಯಲಿ/ ಬಿಡಲಿ
ಆಚಾರ್ಯರು ಓದುವ ಪಂಚಾಂಗ
ಪಠಣ ಕೇಳಿ...
    ‌‌‌‌          ಆಚರಿಸುತ್ತಿದ್ದ ಯುಗಾದಿ
ನೆನಪಾಗುತ್ತಿದೆ...
          ಹೊಸ ಸೀರೆಗಳನ್ನುಟ್ಟು ಪುಟ್ಟ ಮಕ್ಕಳನ್ನು ಬಗಲಿಗೇರಿಸಿ, ದೊಡ್ಡ ಮಕ್ಕಳಿಗೆ ಗದರುತ್ತ ಓಣಿ‌ಗಳಲ್ಲಿನ‌ ಮುತೈದೆಯರ ಸಾಲುಗಳು/ ಯಾರೇ ಹಿರಿಯರ ದರ್ಶನವಾಗಲೀ ಬಗ್ಗಿ ಮಾಡುವ ನಮಸ್ಕಾರ - ಆಶೀರ್ವಚನ ಗಳು ಇವನ್ನೆಲ್ಲ ನೋಡುತ್ತಾ ಕೇಳುತ್ತ ಸಾಗುವ ನಮ್ಮ ಗುಂಪುಗಳು... ನೆನಪಾಗುತ್ತಿವೆ...
     ‌        ಏನು ಮಾಡುತ್ತೇವೆ
ಯಾಕಾಗಿ  ಮಾಡುತ್ತೇವೆ, ಮಾಡದಿದ್ದರೆ 
ಏನು ಆಗುತ್ತದೆ, ಎಂಬುದಕ್ಕೆ
ಅಜ್ಜಿ ಹೇಳುವ ಕಥೆಗಳನ್ನು ನಂಬುತ್ತ
ಕಿಂಚಿತ್ತು ಮನದಲ್ಲಿ ಕಲ್ಮಷವಿಲ್ಲದೇ
ಕಳೆದ ದಿನಗಳು ಸುರುಳಿ ಸುರುಳಿ
ಬಿಚ್ಚಿಕೊಳ್ಳುತ್ತಿವೆ...
     ‌‌‌    ಆ ದಿನಗಳಿಗೆ ಜಾರಿ ಆನಂದಿಸುತ್ತಿದ್ದೇನೆ ..ಬಾಲ್ಕನಿಯಿಂದ...



Sunday, 16 March 2025

     ಇಂದು ರವಿವಾರ ಎಂದು ಗಾಡಿ ಸ್ವಲ್ಪಮಟ್ಟಿಗೆ slow ನಡೆದಿತ್ತು.ಎಂಟು ಗಂಟೆಗೆ ಸ್ನಾನದ ತಯಾರಿ ನಡೆದಾಗ
ಒಂದು ಫೋನು.ಬಂದು ನೋಡಿದೆ. ರೇಣುಕಾ ಮಾಡಿದ್ದರು- " ನಿಮ್ಮ face
book ನಲ್ಲಿ ನಿನ್ನಿನ post ನೋಡಿದೆ, ತುಂಬಾನೇ ಚನ್ನಾಗಿದೆ,ಅದನ್ನು public
ಮಾಡಿ please, ನಾನು ನನ್ನ ತಂಗಿ- ತಮ್ಮ ಇಬ್ಬರಿಗೂ ಓದಿ ಹೇಳಿದೆ, ಅವರಿಗೂ ಹಿಡಿಸಿತು...ಅದಕ್ಕೇ  ಫೋನ್ ಹಚ್ಚಿದೆ"- ಎಂದರು.ಅವರ ತಮ್ಮ- ತಂಗಿಯರೊಂದಿಗೂ ಮಾತಾ ಯಿತು...ನನಗೆ ದಿಗಿಲಿನೊಂದಿಗೆ ಸಂತೋಷವಾಯಿತು.ನನ್ನ ಲೇಖನ ವನ್ನು ಮೆಚ್ಚಿದ್ದಕ್ಕಿಂತ ಬೆಳಿಗ್ಗೆ ಎದ್ದ ಕೂಡಲೇ ಇಂಥದೊಂದು ತಣ್ಪಿನ- ಸುಂದರವಾದ ಅನುಭವ ಒದಗಿದ್ದಕ್ಕೆ. Thanks ಹೇಳಿ ಮತ್ತೊಮ್ಮೆ post public ಮಾಡಿ - ಎಂದು ಹೇಳಿಸಿಕೊಂ 
ಡು ಫೋನ್ ಕೆಳಗಿಟ್ಟೆ...ಒಂದು ಬಗೆಯ
ಗುಂಗು ಕೆಲಹೊತ್ತು...
       ‌ ‌‌       ಒಬ್ಬರನ್ನು ಖುಶಿಗೊಳಿಸು ವುದು ಎಷ್ಟೊಂದು easy!!! - ಎನಿಸಿ ಬಿಟ್ಟಿತು ನನಗೆ...ನನ್ನ ಬರಹವೇನು? ಹೇಗೆ ನನಗೆ ಗೊತ್ತಿದೆ.ಹೆಚ್ಚಿನ ಪಾಂಡಿತ್ಯ ವಿಲ್ಲದ/ ಹೆಚ್ಚು ಆಳ- ಅಗಲವಿಲ್ಲದ ದಿನ ನಿತ್ಯದ ಬದುಕಿನ ಭಾವಗಳ ಅನು
ರಣನಗಳವು...ಯಾರೇ ಓದಲಿ ಸ್ವಲ್ಪವಾದರೂ relate ಮಾಡಿಕೊಳ್ಳ ಬಹುದಾದ ಸಾಮಾನ್ಯಾತಿ ಸಾಮಾನ್ಯ
ಘಟನೆಗಳು ಮಾತ್ರ.ಒಂದು ಕಾಲಘಟ್ಟ ದಲ್ಲಿ ಬಾಳಿ ಬದುಕಿದ ಮಂದಿಗೆ ತಮ್ಮದೇ ಅನಿಸಬಲ್ಲಂಥ ಘಟನಾವಳಿ ಗಳ ಸಾಲು- ಸಾಲು...ಎಲ್ಲವೂ ಕ್ರಿಕೆಟ್
ಕಾಮೆಂಟರಿಯಂತೆ ನೇರವಾಗಿ ತಲೆಯಿಂದ ' ತಲೆಮಾರಿಗೆ'- ಇದರಲ್ಲಿ
ಭಾಷಾ ಪ್ರೌಢಿಮೆಯಂಥ ಹೆಚ್ಚುಗಾರಿಕೆ
ಯಿಲ್ಲ.ಯಾವುದೇ ಕಾಲ್ಪನಿಕತೆ ಕೂಡ
ಇಲ್ಲ...ಆದರೆ ಬದುಕಿನ ಹಸಿಹಸಿ ಅನುಭವಗಳಿವೆ.ಓದಿದರೆ ಕೆಲಕಾಲ
ಮನದಲ್ಲಿಳಿಯುತ್ತವೆ ಎನ್ನಬಹುದು.
   ‌‌‌‌‌         ದಿನನಿತ್ಯದ ಬದುಕಿನ ಬವಣೆ ಗಳಲ್ಲಿ ಮೊದಲು ಬರೆಯುತ್ತಿದ್ದುದನ್ನು
ಬಿಟ್ಟು ಚಡಪಡಿಸುತ್ತಿದ್ದವಳಿಗೆ retire
ಆಗುತ್ತಲೇ smart phone ಬಂದದ್ದು/ ಬೇಕಾದುದನ್ನು ಕಲಿಸಲು ಮೊಮ್ಮಕ್ಕ ಳು ಮನೆಯಲ್ಲೇ ಇನ್ನೂ ಇದ್ದುದು ವರವಾಗಿ ಏನೋ ಒಂದಿಷ್ಟು ಕಲಿತೆ/ ಕಲಿತದ್ದು ಉಳಿಸಿಕೊಳ್ಳುವ ಹಂಬಲ ದಿಂದ ಬರೆಯುತ್ತ ಹೋದೆ.ಅದನ್ನು
ನನ್ನ ತಮ್ಮ ತಾನೇ ಶ್ರಮ ಪಟ್ಟು ಪುಸ್ತಕ
ರೂಪದಲ್ಲಿ ತಂದಿಟ್ಟೇ ಹೋದ...ಅವನ
ನ್ನು ನೆನೆದೇ ಬರದೆದ್ದಲ್ಲ ಪುಸ್ತಕ ಮಾಡಿದೆನೇ ಹೊರತು ಅನ್ಯ ಭಾವವಿಲ್ಲ. ಯಾರಾದರೂ ಇಚ್ಛೆಪಟ್ಟರೆ
ಅವರಿಗೆ ಕೊಡುತ್ತೇನೆ - ಅಷ್ಟೇ...
             ಈಗ ಅದೂ ಆಗುತ್ತಿಲ್ಲ... ಏನೋ ಅಷ್ಟಿಷ್ಟು ಮನಸ್ಸು ಬಂದಾಗ
ಗುರಿ- ಗರಿ ಎರಡೂ ಇಲ್ಲದ ಏನೋ
ಒಂದಿಷ್ಟು ಗೀಚುತ್ತೇನೆ ಅಷ್ಟೇ...
          ‌‌  ನೋಡಿ ರೇಣುಕಾ,ಹಾಗೆಯೇ ನಿಮ್ಮದೊಂದು ಫೋನಿನ ಕಮಾಲನ್ನ...



          

Tuesday, 18 February 2025

            ನಾನೀಗ ನನ್ನ ಬಾಲ್ಕನಿಯಲ್ಲಿ
ಕುಳಿತಿದ್ದೇನೆ.ಕಣ್ಣುಗಳ ಮುಂದೆ ಇದುವರೆಗಿನ ನನ್ನ ಬದುಕಿನ ನೆನಪು ಗಳ ಮೆರವಣಿಗೆ.ಅವೆಲ್ಲವುಗಳನ್ನು ನನ್ನ ಪುಸ್ತಕಗಳಲ್ಲಿ ದಾಖಲಿಸಿಯೂ ಬರಿ ದಾಗಿಲ್ಲ...ಇನ್ನೂ ಯಾನ ನಡೆದಿರುವು ದೇ ಕಾರಣವಾಗಿರಬಹುದು.ನನ್ನ ಅಚ್ಚರಿ ಮಾತ್ರ ಹೆಚ್ಚಾಗುತ್ತಲೇ ಇದೆ...
ಹುಡುಕಿದಷ್ಟೂ ಹೊಸದು ಚಾಚಿಕೊಂಡಿ ದೆ.ಹಳೆಯದೂ ಹೂತು ಹೋಗಿಲ್ಲ...
ಎಲ್ಲ ಆಯಾಕಾಲಕ್ಕೆ ಬದಲಾಗುತ್ತ ನಡೆದಿದೆ.ಮನುಷ್ಯರು/ನಡೆನುಡಿ/ ಜೀವನ ರೀತಿ/ವಿಚಾರಧಾರೆ/ ಸಾಮಾಜಿ
ಕ ವ್ಯವಸ್ಥೆ ಎಲ್ಲಾ ಅಂದರೆ ಎಲ್ಲಾ...
ಅದಕ್ಕೆ ಹೊಂದಿಕೊಳ್ಳದವರ ಒದ್ದಾಟ
ಹೇಳಲಾಸಲ್ಲ...ಮನೆಯೊಳಗೇ ಮೂರು ಬಾಗಿಲು- ಮೂರು ದಾರಿ...
            ಇಷ್ಟಾಗಿಯೂ ಯಾರೂ ಆನಂದದಲ್ಲಿಲ್ಲ.ಎಲ್ಲರೂ ಭ್ರಮೆಯಲ್ಲಿ ದ್ದ ಹಾಗಿದೆ ಅನಿಸುತ್ತದೆ.ಮುಕ್ತ ಜೀವನ ವಿದ್ದರೂ  ಮುಕ್ತ ನಗೆಯಿಲ್ಲ,ಶ್ರೀಮಂತಿಕೆ
ಇದ್ದರೂ ಸ್ವಾಸ್ಥ್ಯವಿಲ್ಲ.


Tuesday, 4 February 2025

Suresh Mavinakurve.

I am a pupil , in my Kg class and the pleasure you have given me, is such that you cannot gauge. An ardent reader needs happiness too along with peace of mind which gets generated by the honest simplicity,  a smooth flow  of thoughts and innocent too,in the book

        Read the preface to your book. Sheer Excellence! How I chose you and your books only, I am not able to gauge! It might have been a slow process from the day in Mumbai that I must have noticed your writings too and remembered, now and got your books. Introduction of the first book, as per your advice, gives out of your self made profession and it's first page too, confirms to me that my choice is perfect.Your page-1 is excellent. Thus, I am on the right track of learning Kannada. Thanks, a lot.

          I am wondering at the fluidity in your first book as if you are narrating stories, in a classroom. Remembered Mr. Wadappi Sir is telling us the story of Prisoner of Zenda,a novel in our Rapid Reading Class and when we  were only  12-13 years. This is how my Karnataka High school has instilled in me. 3 teachers, Holikatti-Sir, Pandu rangi Sir and Kulkarni Sir reply, in Geometry, Mahabharata, and English respectively. This is my + point.

             This is the first time among what all read so far, I find that the author puts every question and answers giving all alternative solutions, directs the reader through those alternatives, moves the Reader, through them quietly and then tells reader the most correct solution. This is novel and fantastic too.My choice is correct. Only, I am wondering as to my logic to choose and chase from.

       Today is Sunday morning. Strangely washed off all of yesterday and picked up a book now, bound up by brown wrapping paper and almost blindly was your Tunturu idu. Read abt. 3 pages, felt cool and afresh, thanks to you, and your book. So, peaceful, I am feeling I have to thank my first Management Guru who instilled in me the word- alternative and came to my book shelf and picked up your book. 

             My intense love for mathematics-Geometry has been from my early years in my life and alive too. Literary bent was visible and remained at a lower level. Dharwad, the town of course remained always in the prime postion, always. Only Yeshwant Chittal did infuse in me a sharp interest in the Literary angle. I am now thinking as to how I chose your write ups as the finest ones and I did that intense follow -up.

       I had a fall and this time, I noticed that I was perfectly safe and healthy too. Remaining healthy is also extremely important now, at all times and must at this age. Thus, I felt reading and remembered your recent poem too, with a need of somebody's hand on my shoulder.Thus sat reading your books is preferable to me.

My first reaction. Characterisation of every human being you have met, moved and lived with is excellent and transparent like glass. You have not even glorified Sudh Murthee but analysis is in sober fashion too and personality has smoothly spelled out that she respects every character, she meets, tried to tread on their shoes.Salaams to your writings, since they are in a low key and transparent too. To me, my choice of your books is correct, in all respects, particularly the detailing the of depth within each character you have dealt with a highest level of Simplicity, too. God bless you for your transparent writings, avoiding about oneself. Fantastic continuity, on thoughts with fluidity and  transperancy too. Hats off to you and thanks to your writings. Good night

Thanks. Your book has not left my hands, still. Fluidity of your thoughts and thereafter, their translation in apt words is close to miracles. There aren't cobwebs at all and your mind and your pen have moved so smoothly in unison..a miracle. And yet, I have not left that one book. My Maths. is still down and your books alone will cover my needs of reading and get back my Kannada
Remembered that I scored 74 per cent then, in Kannada in 1948.Perhaps, I might have become a Writer, too. With the best wishes,

Reading most of your books, I have observed that you have studied human beings so well that one gets impressed deeply by the Characterisation you have penned, for each, is profound. One thus, feels to re-read each book. Wishing you the Best always,
.

1) Go to google photos 2) click on collection near the bottom of the screen 3)click on people